6 ವರ್ಷದ ಮಗನ ಜತೆ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ! ಡೆತ್​ನೋಟ್​ನಲ್ಲಿದೆ ಪತ್ನಿ ಮತ್ತು ಎಲ್​ಐಸಿ ಏಜೆಂಟ್​ ಹೇಸರು

6 ವರ್ಷದ ಮಗನ ಜತೆ ತಡರಾತ್ರಿ ಕೆರೆಗೆ ಬಿದ್ದು ತಂದೆ ಮಗು  ಆತ್ಮಹತ್ಯೆ ಮಾಡಿಕೊಂಡಿದ್ದು, ಮರುದಿನ ಬೆಳಗ್ಗೆ ಶವಗಳನ್ನು ಹೊರ ತೆಗೆಯುತ್ತಿದ್ದಂತೆ ಈತನ ಪತ್ನಿಯೂ ಕೆರೆಗೆ ಹಾರಿದ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಪಿಟ್ಟೆಕೊಪ್ಪಲು ಗ್ರಾಮದಲ್ಲಿ ಸಂಭವಿಸಿದೆ.

ಸಾವಿಗೂ ಮುನ್ನ ಆತ ಬರೆದಿಟ್ಟಿದ್ದ ಡೆತ್​ನೋಟ್ನಲ್ಲಿ ಪತ್ನಿ ಮತ್ತು ಮತ್ತೊಬ್ಬ ಪುರುಷನ ಹೆಸರಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ.

ಪಿಟ್ಟೆಕೊಪ್ಪಲು ಗ್ರಾಮದ  ಗಂಗಾಧರಗೌಡ (36) ಮತ್ತು ಇವರ 6 ವರ್ಷದ ಪುತ್ರ ಜಸ್ಮಿತ್​ ಆತ್ಮಹತ್ಯೆ ಮಾಡಿಕೊಂಡವರು. ಗಂಗಾಧರಗೌಡಗೆ ಗಿರೀಶ ಎಂಬ ಮತ್ತೊಂದು ಹೆಸರಿತ್ತು. ಗುರುವಾರ ತಡರಾತ್ರಿ ಡೆತ್​ನೋಟ್​ ಬರೆದಿಟ್ಟ ಗಂಗಾಧರಗೌಡ, ಮಗನೊಂದಿಗೆ ಊರಿನ ಸಮೀಪದ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಡೆತ್​ನೋಟ್​ ಪತ್ತೆಯಾಗಿದ್ದು, ‘ನನ್ನ ಹಾಗೂ ಮಗನ ಸಾವಿಗೆ ನನ್ನ ಪತ್ನಿ ಸಿಂಧು,ಹಾಗು ಎಲ್​ಐಸಿ ಏಜೆಂಟ್​ ಜಿ.ಸಿ.ನಂಜುಂಡೇಗೌಡ ಕಾರಣರು. ಇವರಿಬ್ಬರು ಕೊಟ್ಟಿರುವ ತೊಂದರೆಯನ್ನು ಹೇಳಲು ಕಷ್ಟವಾಗುತ್ತದೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಗಂಗಾಧರಗೌಡ ಬರೆದಿದ್ದಾರೆ.

ಸಿಂಧು ಹಾಗೂ ಗರುಡಾಪುರದ ಎಲ್​ಐಸಿ ಏಜೆಂಟ್​ ಜಿ.ಸಿ.ನಂಜುಂಡೇಗೌಡನ ನಡುವೆ ಕೆಲವರ್ಷಗಳಿಂದ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ಈ ಕುರಿತು ಅನೇಕ ಬಾರಿ ರಾಜಿ, ಸಂಧಾನಗಳು ನಡೆದಿದ್ದವು. ಈ ಇಬ್ಬರ ಮಾನಸಿಕ ಕಿರುಕುಳದಿಂದ  ಬೇಸತ್ತು ಮಗನೊಂದಿಗೆ ಕೆರೆಗೆ ಬಿದ್ದು ಜೀವ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿ ಮೃತನ ಸಹೋದರ ಬಿ.ಪಿ.ಮಂಜುನಾಥ ಪೊಲೀಸರಿಗೆ ದೂರು ನೀಡಿದ್ದಾರೆ.

ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸರು ಶುಕ್ರವಾರ ಬೆಳಗ್ಗೆ ಕೆರೆಯಲ್ಲಿ ಮೃತದೇಹಗಳನ್ನು ಹುಡುಕುವ ಸಂದರ್ಭದಲ್ಲಿ ಪತಿಯ ಶವ ಸಿಕ್ಕ ಕೂಡಲೇ ಪತ್ನಿ ಸಿಂಧುಕೊಡ  ಕೆರೆಗೆ ಹಾರಿದ ಘಟನೆ ನಡೆಯಿತು. ಈ ವೇಳೆ ಸ್ಥಳದಲ್ಲೇ ಇದ್ದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಸಿಂಧು ಅವರನ್ನು ರಕ್ಷಿಸಿದರು. ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಬಿಂಡಿಗನವಿಲೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸಿಪಿಐ ಸುಧಾಕರ್​, ಪಿಎಸ್​ಐ ಶ್ರೀಧರ್​ ಭೇಟಿ ನೀಡಿ ಪರಿಶೀಲಿಸಿದರು. ಅಗ್ನಿಶಾಮಕ ಠಾಣಾಧಿಕಾರಿ ತೋಪೇಗೌಡ ಸಹಾ ಇದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

Please follow and like us:

Leave a Reply

Your email address will not be published. Required fields are marked *

Next Post

ನಾರಾಯಣ ಗುರುಗಳ ಚಿತ್ರದ ಸ್ತಬ್ಧಚಿತ್ರ ಕೇಂದ್ರ ತಿರಸ್ಕರಿಸಿದ್ದು ತಿರ್ವ ಉಖಂಡನೀಯ: ಎಚ್‌.ಡಿ.ಕೆ

Sat Jan 15 , 2022
ಬ್ರಹ್ಮರ್ಷಿ ನಾರಾಯಣ ಗುರುಗಳ ಚಿತ್ರವಿದ್ದ ಸ್ತಬ್ಧಚಿತ್ರವನ್ನು ಕೇಂದ್ರದ ಗಣರಾಜ್ಯೋತ್ಸವ ಸಮಿತಿ ತಿರಸ್ಕರಿಸಿರುವುದು ಅತ್ಯಂತ ಖಂಡನೀಯ ಹಾಗೂ ನಮ್ಮ ನೆಲದ ನಂಬಿಕೆಗಳಿಗೆ ಮಾಡಿರುವ ಅಪಮಾನ ಎಂದು ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರು ಶನಿವಾರ ಹೇಳಿದ್ದಾರೆ.  ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಸ್ತ್ರೀ ಸಮಾನತೆಯನ್ನು ಪ್ರತಿಪಾದಿಸಿ ಜಾತಿ, ಮತಭೇದಗಳನ್ನು ಧಿಕ್ಕರಿಸಿ ಸಮಾಜೋದ್ಧಾರಕ್ಕೆ ಶ್ರಮಿಸಿದ ಮಹಾನ್ ಚೇತನ ಶ್ರೀ ನಾರಾಯಣ ಗುರುಗಳು, “ಮನುಷ್ಯರೆಲ್ಲ ಒಂದೇ ಎಂದು ಹೇಳಿ ಒಂದೇ ಜಾತಿ, ಒಂದೇ ಮತ, ಒಬ್ಬರೇ […]

Advertisement

Wordpress Social Share Plugin powered by Ultimatelysocial