ಕೆರೆಯಲ್ಲಿ ಪತ್ತೆಯಾದ ಅಪರಿಚಿತ ವ್ಯಕ್ತಿ ಶವದ ಹಿಂದೆ ರೋಚಕ ಟ್ವಿಸ್ಟ್.

ಶವದ ಹಿಂದೆ ತನಿಖೆಗೆ ಬಿದ್ದ ಪೊಲೀಸರಿಗೆ ಸಿಕ್ತು ಲವ್ ಲಿಂಕ್

ಹೊಸಕೋಟೆ ಅಮಾನಿಕೆರೆಯಲ್ಲಿ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿ ಶವ.

ಜನವರಿ ಆರರಂದು ಪತ್ತೆಯಾಗಿದ್ದ 30 ವರ್ಷ ವಯಸ್ಸಿನ ಯುವಕನ ಶವ.

ಶವ ಪತ್ತೆಯಾದ 24 ಗಂಟೆಯಲ್ಲಿ ಅಸಲಿಯತ್ತು ಪತ್ತೆ ಹಚ್ಚಿದ ಪೊಲೀಸರು.

ಬೇರೆಡೆ ಕೊಲೆ ಮಾಡಿ ಕೆರೆಯಲ್ಲಿ ಶವ ಎಸೆದು ಹೋಗಿದ್ದ ಹಂತಕರು.

ಅಪರಿಚಿತ ವ್ಯಕ್ತಿ ಶವದ ಸುಳಿವು ಕೊಟ್ಟ ಕೈಮೇಲಿನ ಹಚ್ಚೆ.

ಹಚ್ಚೆ ಮೂಲಕ ಕೊಲೆಯಾದ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ ಪೊಲೀಸರು.

ನಂದಿನಿ ಲೇಔಟ್ ನಿವಾಸಿ ಗೋಪಾಲ ಎಂಬಾತನ ಕೊಲೆ.

ಜನವರಿ ಒಂದರಂದು ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದ ಗೋಪಾಲ.

ನಂತರ ಆರೇಳು ದಿನವಾದ್ರು ಮನೆಗೆ ಬಾರದ ಗೋಪಾಲ.

ಈ ಬಗ್ಗೆ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲು

ಇದೇ ವೇಳೆ ಅವಲಹಳ್ಳಿ ಪೊಲೀಸರಿಂದ ಶವದ ಗುರುತು ಪತ್ತೆ ಕಾರ್ಯ.

ಪೊಲೀಸರ ಪರಿಶೀಲನೆ ವೇಳೆ ಎಡಗೈ ಮೇಲೆ ಅಮ್ಮ, ಸಾರ ಅನ್ನೋ ಹಚ್ಚೆ ಪತ್ತೆ.

ಹಾಗೂ ಬಲಗೈ ಮೇಲೆ ಯಶು ಎಂಬ ಹಚ್ಚೆ ಪತ್ತೆ.

ಕೈನ ಒಂದೊಂದು ಬೆರಳ ಮೇಲೆ ಒಂದೊಂದು ಅಕ್ಷರ ಹಾಕಿಸಿದ್ದ ಗೋಪಾಲ.

ಬೆರಳುಗಳ ಮೇಲೆ RADHE ಎಂದು ಹಾಕಿಸಿದ್ದ ಗೋಪಾಲ.

ಇವೆಲ್ಲವನ್ನ ಕಂಡ ಪೊಲೀಸರಿಗೆ ಇದೊಂದು ಪ್ರೀತಿ ವಿಚಾರ ಅನ್ನೋ ಸಂಶಯ ಮೂಡಿತ್ತು.

ತನಿಖೆ ಮುಂದುವರೆಸಿದ ಪೊಲೀಸರಿಗೆ ಸಿಕ್ಕಿತ್ತು ಹಂತಕರ ಸುಳಿವು.

ಆರೋಪಿ ಮುನಿಯಾ ಎಂಬಾತನ ಹುಡುಗಿಗೆ ಕಿಚಾಯಿಸಿದ್ದ ಕೊಲೆಯಾದ ಗೋಪಾಲ.

ಕಳೆದ ನಾಲ್ಕು ವರ್ಷಗಳಿಂದ ಲವಲ್ಲಿದ್ದ ಆರೋಪಿ ಮುನಿಯಾ.

ಮೃತ ಗೋಪಾಲ ಕೂಡ ಆಕೆಯ ಬೆನ್ನು ಬಿದ್ದು, ಕಿಚಾಯಿಸಲು ಮುಂದಾಗಿದ್ದ.

ಜನವರಿ ಒಂದರಂದು ಕೆಲಸಕ್ಕೆ ಹೋಗಿದ್ದ ಗೋಪಾಲ.

ಅಂದೇ ಕೆಲಸ ಮುಗಿದ ನಂತರ ಗೋಪಾಲಬ ಕರೆದೊಯ್ದು ಪಾರ್ಟಿ ಮಾಡಿದ ಆರೋಪಿಗಳು.

ತನ್ನ ಮೂವರು ಸ್ನೇಹಿತರೊಂದಿಗೆ ಸೇರಿ ಗೋಪಾಲನ‌ ಮೇಲೆ ಹಲ್ಲೆ ನಡೆಸಿ ಹತ್ಯೆ.

ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ತೆ ಮಾಡಿದ ಮುನಿಯಾ ಮತ್ತು ಗ್ಯಾಂಗ್.

ಕೊಲೆ ಮಾಡಿ ಹೊಸಕೋಟೆ ಅಮಾನಿಕೆರೆಗೆ ಶವ ಎಸೆದು ಪರಾರಿಯಾಗಿದ್ದ ಆರೋಪಿಗಳು.

ಸದ್ಯ ಮುನಿಯಾ ಸೇರಿ ಮೂವರನ್ನ ಬಂಧಿಸಿರುವ ಆವಲಹಳ್ಳಿ ಪೊಲೀಸರು.

ಅವಲಹಳ್ಳಿ ಪೊಲೀಸರಿಂದ ಮುಂದುವರಿದ ತನಿಖೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದ 'ಯಾವ ಇಲಾಖೆ'ಯಲ್ಲಿ 'ಎಷ್ಟು ಹುದ್ದೆ ಖಾಲಿ' ಇವೆ ಗೊತ್ತಾ?

Wed Jan 18 , 2023
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ ಎನ್ನುವಂತೆ ಸರ್ಕಾರದಿಂದ 7ನೇ ವೇತನ ಆಯೋಗ ರಚಿಸಲಾಗಿತ್ತು. ಅಲ್ಲದೇ ಆಯೋಗಕ್ಕೆ ಬೇಕಿದ್ದಂತ ಅಧಿಕಾರಿಗಳನ್ನು ನೇಮಕ ಮಾಡಿತ್ತು. ಈ ಬೆನ್ನಲ್ಲೇ ರಾಜ್ಯದ ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಮಂಜೂರಾಗಿದ್ದು, ಕಾರ್ಯ ನಿರ್ವಹಿಸುತ್ತಿರುವವರು ಎಷ್ಟು ಹಾಗೂ ಖಾಲಿ ಇರುವಂತ ಹುದ್ದೆಗಳು ಎಷ್ಟು ಎನ್ನುವ ಮಾಹಿತಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ವಿಶೇಷ ರಾಜ್ಯ ಪತ್ರವನ್ನು ಪ್ರಕಟಿಸಲಾಗಿದ್ದು, ರಾಜ್ಯ ಸರ್ಕಾರದಿಂದ ಸರ್ಕಾರಿ […]

Advertisement

Wordpress Social Share Plugin powered by Ultimatelysocial