ಮೈಗ್ರೇನ್ ಸಮಸ್ಯೆ ಇರುವವರು ತಿನ್ನುವ-ಕುಡಿಯುವ ಆಹಾರದ ಕಡೆ ತುಂಬಾನೇ ಗಮನ ನೀಡಬೇಕು.

 

 ನಿಮಗೆ ಸೇರದ ಒಂದು ಆಹಾರ ತಿಂದರೆ ಸಾಕು, ಆ ದಿನ ಪೂರ್ತಿ ತಲೆ ನೋವಿನಿಂದ ಬಳಲಬೇಕಾಗುತ್ತದೆ. ಕೆಲವರಿಗೆ ತಲೆನೋವಿನಿಂದ ವಾಂತಿ ಕೂಡ ಉಂಟಾಗುವುದು.ಆದ್ದರಿಂದ ಮೈಗ್ರೇನ್‌ ಸಮಸ್ಯೆ ಇರುವವರು ಈ ಬಗೆಯ ಆಹಾರಗಳನ್ನು ದೂರ ಇಡಬೇಕು:ನೀವು ಕಾಫಿ ಹೆಚ್ಚಾಗಿ ಕುಡಿದರೆ ಅಥವಾ ಕೆಫೀನ್ ಇರುವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿದರೆ ತಲೆ ನೋವು ಹೆಚ್ಚಾಗುವುದು.ತಲೆನೋವು ಬಂದಾಗ ಕೆಲವರು ಟೀ ಅಥವಾ ಕಾಫಿ ಕುಡಿದರೆ ರಿಲೀಫ್ ಆಗುತ್ತದೆ ಎಂದು ಕುಡಿಯತ್ತಾರೆ, ಆದರೆ ಹೆಚ್ಚು ಟೀ-ಕಾಫಿ ಕುಡಿದಾಗ ಕೆಫೀನ್‌ ಅಂಶ ಹೆಚ್ಚಾಗಿ ತಲೆನೋವು ಉಂಟಾಗುವುದು.ಕೆಫೀನ್‌ ಇರುವ ಪದಾರ್ಥಗಳು  ಕಾಫಿ  ಟೀ  ಚಾಕೋಲೇಟ್ಕೃತಕ ಸಿಹಿ ಸೇರಿಸಿ ತಯಾರಿಸಿದ ಸಿಹಿ ತಿಂಡಿಗಳನ್ನು ತಿನ್ನಬೇಡಿ. ಸಿಹಿ ತಿಂಡಿಗಳನ್ನು ತುಂಬಾ ತಿಂದರೆ ಮೈಗ್ರೇನ್‌ ತಲೆನೋವು ಹೆಚ್ಚಾಗುವುದು.ಮದ್ಯಪಾನ ಕುಡಿದರೆ ತಲೆನೋವು ಉಂಟಾಗುವುದು ಅದರಲ್ಲೂ ಮೈಗ್ರೇನ್‌ ಇರುವವರು ಮದ್ಯಪಾನ ಮಾಡಿದರೆ ತಲೆನೋವು ಮತ್ತಷ್ಟು ಹೆಚ್ಚಾಗುವುದು. ರೆಡ್‌ವೈನ್‌ ಕೂಡ ಮೈಗ್ರೇನ್ ಹೆಚ್ಚಿಸುವುದು.ಅಮೆರಿಕನ್ ಮೈಗ್ರೇನ್‌ ಫೌಂಡೇಷನ್ ಪ್ರಕಾರ ಮದ್ಯಪಾನದ ನಂತರ ಮೈಗ್ರೇನ್ ಹೆಚ್ಚಿಸುವ ಮತ್ತೊಂದು ಆಹಾರವೆಂದರೆ ಅದು ಚಾಕೋಲೇಟ್ ಎಂದು ಹೇಳಿದೆ. ಮೈಗ್ರೇನ್ ಸಮಸ್ಯೆಯಿದ್ದರೆ ಚಾಕೋಲೇಟ್‌ ತಿನ್ನಬೇಡಿ.ಸಂಸ್ಕರಿಸಿದ ಮಾಂಸ, ಸಾಸೇಜ್‌ ಇವುಗಳಲ್ಲಿ ಪ್ರಿಸರ್‌ವೇಟಿವ್ ನೈಟ್ರೇಟ್ಸ್ ಇರುತ್ತದೆ. ಇಂಥ ಆಹಾರಗಳನ್ನು ತಿನ್ನುವುದರಿಮದ ಕೂಡ ಮೈಗ್ರೇನ್ ಹೆಚ್ಚುವುದು.ಚೀಸ್‌ನಲ್ಲಿ tyramine ಎಂಬ ಅಂಶ ಇರುತ್ತದೆ, ಚೀಸ್‌ ಹಳೆಯದಾಗುತ್ತಿದ್ದಂತೆ ಪ್ರೊಟೀನ್‌ ಒಡೆಯುತ್ತದೆ. ಇಂಥ ಆಹಾರ ತಿಂದಾಗ ಅದು ಕುಡ ಮೈಗ್ರೇನ್ ಸಮಸ್ಯೆ ಹೆಚ್ಚಿಸುವುದು.ಮೈಗ್ರೇನ್ ಇರುವವರು ಹುದುಗು ಬರಿಸಿದ ಆಹಾರ ಸೇವಿಸಬೇಡಿ, ಉಪ್ಪಿನಕಾಯಿ ಬಳಸಬೇಡಿ. ಇವುಗಳನ್ನು ತಿಂದರೆ ಮೈಗ್ರೇನ್ ಹೆಚ್ಚುವುದು.ಐಸ್ ಕ್ರೀಮ್ ತಿನ್ನುವುದು, ತಣ್ಣೆಯ ಜ್ಯೂಸ್‌ ಕುಡಿಯುವುದು ಇವೆಲ್ಲಾ ಮೈಗ್ರೇನ್ ಹೆಚ್ಚಲು ಕಾರಣವಾಗಿದೆ.ತುಂಬಾ ಉಪ್ಪಿನಂಶವಿರುವ ಆಹಾರಗಳನ್ನು ತಿನ್ನಬೇಡಿ. ಸ್ನ್ಯಾಕ್ಸ್, ಪಾಪ್‌ಕಾರ್ನ್‌ ಇಂಥ ಆಹಾರಗಳನ್ನು ತಿನ್ನಬೇಡಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಪಾಯಕಾರಿ ಓಮಿಕ್ರಾನ್‌ ನ ಬಿಎ.2 ಉಪ ರೂಪಾಂತರಿ: ಅಧ್ಯಯನದಲ್ಲಿ ಶಾಕಿಂಗ್‌ ಸಂಗತಿ ತಿಳಿಸುತ್ತಿದೆ...

Sat Feb 19 , 2022
ಕೊರೋನ ವೈರಸ್‌ನ ಓಮಿಕ್ರಾನ್ ರೂಪಾಂತರದ BA.2 ಉಪಪ್ರಬೇಧವು ವೇಗವಾಗಿ ಹರಡುವುದು ಮಾತ್ರವಲ್ಲದೆ ಹೆಚ್ಚು ತೀವ್ರವಾದ ಸೋಂಕು ಉಂಟುಮಾಡಬಹುದು ಎಂದು ಪ್ರಯೋಗಾಲಯದ ಅಧ್ಯಯನವೊಂದು ತಿಳಿಸುತ್ತಿದೆ. ಬಯೋರಿಕ್ಸ್‌ವಿನಲ್ಲಿ ಇತ್ತೀಚೆಗೆ ಪೋಸ್ಟ್ ಮಾಡಲಾದ ಸಂಶೋಧನೆಯ ಈ ಅಂಶಗಳು ಇನ್ನೂ ಉನ್ನತ ಹಂತದ ವಿಶ್ಲೇಷಣೆಗೆ ಒಳಗಾಗಿಲ್ಲ. BA.2 ಉಪ-ವ್ಯತ್ಯಯವು ಕೊರೊನಾ ವೈರಸ್‌ ನ ಹಳೆಯ ರೂಪಾಂತರಗಳಂತೆ ಗಂಭೀರವಾದ ಅನಾರೋಗ್ಯ ಉಂಟುಮಾಡುವ ಸಾಮರ್ಥ್ಯ ಹೊಂದಿರಬಹುದು ಎಂದು ಈ ಅಧ್ಯಯನ ತೋರಿಸುತ್ತದೆ. BA.2 ರೂಪಾಂತರವು BA.1ಗಿಂತ ಹೆಚ್ಚು ಹರಡುತ್ತದೆ […]

Advertisement

Wordpress Social Share Plugin powered by Ultimatelysocial