ಕೋಟ್ಯಾಂತರ ರೂ. ಆಸ್ತಿಯ ಒಡತಿ ಶಿಲ್ಪಾ ಶೆಟ್ಟಿ.! ಪತ್ನಿ ಹೆಸರಿಗೆ 38.5 ಕೋಟಿ ಮೌಲ್ಯದ ಪ್ಲಾಟ್ ಗಳನ್ನ ವರ್ಗಾವಣೆ ಮಾಡಿದ ರಾಜ್ ಕುಂದ್ರಾ

 

ಅಶ್ಲೀಲ ಚಿತ್ರಗಳ ನಿರ್ಮಾಣ ಪ್ರಕರಣದಲ್ಲಿ ಸೆರೆವಾಸ ಅನುಭವಿಸಿದ್ದ ಉದ್ಯಮಿ ರಾಜ್ ಕುಂದ್ರಾ ಈಗ ಮತ್ತೊಂದು ವಿಷಯದಲ್ಲಿ ಸುದ್ಧಿ ಆಗಿದ್ದಾರೆ. ತಮ್ಮ ಪತ್ನಿ ಹಾಗೂ ನಟಿ ಶಿಲ್ಪಾ ಶೆಟ್ಟಿ ಹೆಸರಿಗೆ 38.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವರ್ಗಾವಣೆ ಮಾಡಿದ್ದಾರೆ.‌ಕಳೆದ ವರ್ಷ ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ಚಿತ್ರ ನಿರ್ಮಾಣ ಮಾಡಿದ ಆರೋಪದ ಮೇಲೆ ಬಂಧಿಯಾಗಿದ್ದರು.ಆ ಸಂದರ್ಭದಲ್ಲಿ ನಟಿ ಶಿಲ್ಪಾ ಶೆಟ್ಟಿ ತನ್ನ ಕಷ್ಟ ಕಾಲದಲ್ಲಿ ಗೌಪ್ಯತೆಯನ್ನು ಗೌರವಿಸುವಂತೆ ಜನರಲ್ಲಿ ಕೇಳಿಕೊಂಡಿದ್ದರು. ಇದೀಗ 6 ತಿಂಗಳುಗಳ ಬಳಿಕ ರಾಜ್ ಕುಂದ್ರಾ ತಮ್ಮ 38.5 ಕೋಟಿ ಮೌಲ್ಯದ ಆಸ್ತಿಯನ್ನು ಪತ್ನಿ ಹೆಸರಿಗೆ ವರ್ಗಾಯಿಸಿದ್ದಾರೆ.Squarefeatindia.com (ಸ್ಕ್ವಾರ್‌ಫೀಟ್ ಡಾಟ್ ಕಾಂ)ನ ನೋಂದಣಿ ದಾಖಲೆಗಳ ಪ್ರಕಾರ ಉದ್ಯಮಿ ರಾಜ್ ಕುಂದ್ರಾ ತಮ್ಮ ಪತ್ನಿಯ ಹೆಸರಿಗೆ 38.5 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಬರೆದಿರುವುದಾಗಿ ಉಲ್ಲೇಖವಾಗಿದೆ. ಜುಹುನಲ್ಲಿರುವ ಓಷನ್ ವ್ಯೂ ಹೆಸರಿನ ಕಟ್ಟಡದಲ್ಲಿನ ಒಟ್ಟು 5 ಫ್ಲಾಟ್‌ಗಳನ್ನು ಪತ್ನಿಯ ಹೆಸರಿಗೆ ವರ್ಗಾಯಿಸಿದ್ದಾರೆ ಎಂದು Squarefeatindia.com ನ ಸಂಸ್ಥಾಪಕ ವರುಣ್ ಸಿಂಗ್ ತಿಳಿಸಿದ್ದಾರೆ. ಸದ್ಯ ಹಲವು ಸಿನಿಮಾ ಹಾಗೂ ರಿಯಾಲಿಟಿ ಶೋ ಗಳಲ್ಲಿ ಬ್ಯೂಸಿಯಾಗಿರುವ ಶಿಲ್ಪಾ ಹೊಸದಾಗಿ 38.5 ಕೋಟಿ ಮೌಲ್ಯದ ಆಸ್ತಿಗೆ ಒಡತಿಯಾಗಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

VIRAL NEWS:ನೋರಾ ಫತೇಹಿ ಹಸಿದ ಸಿಂಹಕ್ಕೆ ಆಹಾರ ನೀಡುತ್ತಾಳೆ, ಅದನ್ನು ಹೇಗೆ ಮಾಡಬೇಕೆಂದು ತೋರಿಸುತ್ತಾಳೆ;

Fri Feb 4 , 2022
ನೋರಾ ಫತೇಹಿ ಪ್ರಸ್ತುತ ದುಬೈನಲ್ಲಿದ್ದಾರೆ ಮತ್ತು ತನ್ನ ಎಲ್ಲಾ ಅನುಭವಗಳನ್ನು ತನ್ನ ಅಭಿಮಾನಿಗಳು ಮತ್ತು ಅನುಯಾಯಿಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ. ಇಂದು, ಫೆಬ್ರವರಿ 4, ನಟಿ ತನ್ನ ವೀಡಿಯೊವನ್ನು ಕೈಬಿಟ್ಟಳು, ಅಲ್ಲಿ ಅವಳು ಹಸಿದ ಸಿಂಹಕ್ಕೆ ತನ್ನ ಕೈಗಳಿಂದ ಆಹಾರವನ್ನು ನೀಡುತ್ತಿರುವುದನ್ನು ಕಾಣಬಹುದು. ಕ್ಲಿಪ್‌ನಲ್ಲಿ ನೋರಾ ಸಾಹಸವನ್ನು ಆನಂದಿಸುತ್ತಿರುವಂತೆ ತೋರುತ್ತಿದ್ದರೆ, ಅವರು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ‘ಭಯಾನಕ’ ಎಂದು ಕರೆದರು. ನೋರಾ ಸಿಂಹಕ್ಕೆ ಬರಿಗೈಯಿಂದ ಆಹಾರ ನೀಡುತ್ತಾಳೆ ಅವರ […]

Advertisement

Wordpress Social Share Plugin powered by Ultimatelysocial