ರುಚಿಕರವಾದ ಎಗ್ ಬಿರಿಯಾನಿ

 ಮಾಂಸಾಹಾರ ಪ್ರಿಯರಿಗೆ ಸವಿಯಲು ಬಗೆ ಬಗೆಯ ರುಚಿಕರ ಖಾದ್ಯಗಳಿವೆ.
ನಾನ್‍ವೆಜ್ ಅಡುಗೆಯಲ್ಲಿ ಮೊಟ್ಟೆ ಬಿರಿಯಾನಿ ಸರಳವಾಗಿ ಮಾಡುವ ಅಡುಗೆಯಲ್ಲಿ ಒಂದಾಗಿದೆ.

ಈ ಅಡುಗೆಗೆ ಹೆಚ್ಚಿನ ಸಮಯ, ಪರಿಶ್ರಮವೂ ಅಗತ್ಯವಿಲ್ಲ. ನಾನ್ವೆಜ್ ಅಡುಗೆಯಲ್ಲಿ ಹೊಸ ಪ್ರಯತ್ನ ಮಾಡುವವರಿಗೂ ಇದು ಕಷ್ಟವೆನಿಸುವುದಿಲ್ಲ. ಈ ವಿಧಾನವನ್ನು ಅನುಸರಿಸಿ ಮನೆಯಲ್ಲೇ ಮೊಟ್ಟೆ ಬಿರಿಯಾನಿ ಮಾಡಿ, ಅದರ ರುಚಿ ಸವಿದು ಎಂಜಾಯ್ ಮಾಡಿ.

ಬೇಕಾಗುವ ಪದಾರ್ಥಗಳು
ಅಕ್ಕಿ- 2ಕಪ್
ಮೊಟ್ಟೆ- 5
ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ- ಸ್ವಲ್ಪ
ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
ಹಸಿಮೆಣಸಿನ ಕಾಯಿ- 3
ಈರುಳ್ಳಿ- 2
ಟೊಮೆಟೋ- 2
ಕೊಬ್ಬಂಬರಿ ಸೊಪ್ಪು- ಸ್ವಲ್ಪ
ಮೊಸರು – ಅರ್ಧ ಕಪ್
ದನಿಯಾ ಪುಡಿ- 1 ಚಮಚ
ಖಾರದ ಪುಡಿ- 1 ಚಮಚ
ಬಿರಿಯಾನಿ ಮಸಾಲೆ ಪುಡಿ- 2 ಚಮಚ
ಅರಿಶಿಣದ ಪುಡಿ- ಅರ್ಧ ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಅಡುಗೆ ಎಣ್ಣೆ- ಅಧ ಕಪ್
ತುಪ್ಪ- 2 ಚಮಚ

ಮಾಡುವ ವಿಧಾನ
*ಮೊದಲಿಗೆ ಒಲೆಯ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ತುಪ್ಪ ಹಾಗೂ ಅಡುಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ನಂತರ ಇದಕ್ಕೆ ಚಕ್ಕೆ, ಲವಂಗ, ಪಲಾವ್ ಎಲೆ, ಏಲಕ್ಕಿ, ಕಲ್ಲು ಹೂ ಹಾಕಿ ಫ್ರೈ ಮಾಡಿಕೊಳ್ಳಬೇಕು.

* ನಂತರ ಈರುಳ್ಳಿ ಹಾಗೂ ಹಸಿಮೆಣಸಿನ ಕಾಯಿ ಹಾಕಿ ಕೆಂಪಗೆ ಹುರಿದುಕೊಳ್ಳಿ. ಬಳಿಕ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕೊತ್ತಂಬರಿ ಸೊಪ್ಪು ಹಾಗೂ ಟೊಮೆಟೋವನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ.
*ತದನಂತರ ಖಾರದ ಪುಡಿ, ಅರಿಶಿಣ, ದನಿಯಾ ಪುಡಿ ಹಾಗೂ ಬಿರಿಯಾನಿ ಮಸಾಲಾ ಪುಡಿ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು.

* ಬಳಿಕ ಮೊಸಲು ಕುದಿಸಿ. ಅಳತೆಗೆ ತಕ್ಕಷ್ಟು ನೀರು ಹಾಗೂ ನೆನೆಸಿಟ್ಟುಕೊಂಡ ಅಕ್ಕಿಯನ್ನು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ 2-3 ಕೂಗು ಕೂಗಿಸಿಕೊಂಡು, ಬೇಯಿಸಿದ ಮೊಟ್ಟೆಗಳನ್ನು ಮಿಶ್ರಣ ಮಾಡಿದರೆ, ರುಚಿಕರವಾದ ಎಗ್ ಬಿರಿಯಾನಿ ಸವಿಯಲು ಸಿದ್ಧ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

latest News:ಮೋದಿ ರ‍್ಯಾಲಿಗೆ ಜನ ಸೇರಿಸಲು ಜಿಲ್ಲಾಡಳಿತದಿಂದ ಸೂಚನೆ;

Tue Dec 28 , 2021
ಲಖನೌ: ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ಮಂಗಳವಾರ ಆಯೋಜನೆ ಆಗಿದೆ. ರ‍್ಯಾಲಿಗೆ ಸುಮಾರು 75 ಸಾವಿರ ಜನರನ್ನು ಕರೆತರುವಂತೆ ಸರ್ಕಾರದ ವಿವಿಧ ಇಲಾಖೆಗಳಿಗೆ ಕಾನ್ಪುರದ ಜಿಲ್ಲಾಡಳಿತ ಅಧಿಕೃತ ಸೂಚನೆ ನೀಡಿದೆ. ಮೋದಿ ಅವರು ಕಾನ್ಪುರದ ಮೆಟ್ರೊ ರೈಲು ಉದ್ಘಾಟಿಸಿದ ಬಳಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಆರೋಗ್ಯ, ಆಹಾರ, ತೋಟಗಾರಿಕೆ, ಸಮಾಜ ಕಲ್ಯಾಣ, ಕಾರ್ಮಿಕ, ಗ್ರಾಮೀಣಾಭಿವೃದ್ಧಿ ಮತ್ತು ಇತರ ಇಲಾಖೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆ. ಸರ್ಕಾರದ ವಿವಿಧ […]

Advertisement

Wordpress Social Share Plugin powered by Ultimatelysocial