ಕಫ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

ಕಫ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

ಚಳಿಗಾಲದಲ್ಲಿ ಕಫದ ಸಮಸ್ಯೆ ಸಾಮಾನ್ಯ. ಸ್ವಲ್ಪ ಕಫವಾದ್ರೂ ಕೆಲವರು ವೈದ್ಯರ ಬಳಿ ಓಡ್ತಾರೆ. ಅದ್ರ ಬದಲು ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಮನೆ ಮದ್ದು ಸೇವನೆ ಮಾಡುವುದು ಬಹಳ ಒಳ್ಳೆಯದು.

ಕಫದಿಂದ ಬಳಲುತ್ತಿರುವವರು ಈ ಕೆಲ ಔಷಧಿಯನ್ನು ಮನೆಯಲ್ಲಿಯೇ ಮಾಡಿ ಸೇವನೆ ಮಾಡಿ.

ಕೆಲವೇ ದಿನಗಳಲ್ಲಿ ಕಫ ಮಾಯವಾಗಿ ಆರಾಮ ಸಿಗುತ್ತದೆ.

ಒಂದು ಚಮಚ ಜೇನುತುಪ್ಪ ಹಾಗೂ ಅರ್ಧ ಚಮಚ ಶುಂಠಿ ಪುಡಿಯನ್ನು ಒಂದು ಕಪ್ ಬಿಸಿಬಿಸಿ ನಿಂಬೆ ನೀರಿನೊಂದಿಗೆ ಬೆರೆಸಿ ಕುಡಿಯಿರಿ.

ಒಂದು ಹಿಡಿ ಒಣ ದ್ರಾಕ್ಷಿಗೆ ಅರ್ಧ ಚಮಚ ಶುಂಠಿ ಪುಡಿ ಉದುರಿಸಿ ತಿನ್ನಿ.

ಒಂದು ಚಮಚ ಶುಂಠಿ ಪುಡಿಯನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಕುಡಿಯಿರಿ.

ಬೆಳಿಗ್ಗೆ ಹಾಗೂ ರಾತ್ರಿ ಹಾಲಿಗೆ ಅರಿಶಿನ ಪುಡಿ ಬೆರೆಸಿ ಕುಡಿಯಿರಿ.

ಸ್ವಲ್ಪ ಒಣ ದ್ರಾಕ್ಷಿಯನ್ನು ಬಿಸಿ ನೀರಿಗೆ ಹಾಕಿ ಕುದಿಸಿ. ನಂತ್ರ ಅದಕ್ಕೆ ನಿಂಬೆ ರಸವನ್ನು ಬೆರೆಸಿ ಕುಡಿಯಿರಿ.

ಶುಂಠಿ ಪುಡಿ, ಕಲ್ಲುಸಕ್ಕರೆ ಹಾಗೂ ತುಳಸಿ ಎಲೆಯನ್ನು ರಸವನ್ನು ಕುದಿಸಿ, ಈ ಮಿಶ್ರಣವನ್ನು ದಿನಕ್ಕೆ 2-3 ಬಾರಿ ಸೇವಿಸಿ.

ಒಂದು ಕಪ್ ನೀರಿಗೆ 5-6 ತುಳಸಿ ಎಲೆಯನ್ನು ಹಾಕಿ ಚೆನ್ನಾಗಿ ಕುದಿಸಿ. ಇದನ್ನು ದಿನಕ್ಕೆ 2-3 ಬಾರಿ ಕುಡಿಯಿರಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಳಿಗಾಲದಲ್ಲಿ 'ಶುಂಠಿ ಟೀʼ ಕುಡಿಯುವ ಮೊದಲು ಓದಿ ಈ ಸುದ್ದಿ

Thu Jan 6 , 2022
6ಅನೇಕರು ಶುಂಠಿ ಟೀ ಇಷ್ಟಪಡ್ತಾರೆ. ಚಳಿಗಾಲದಲ್ಲಿ ಅನೇಕರು ಶುಂಠಿ ಟೀ ಕುಡಿಯುತ್ತಾರೆ. ಅತ್ಯುತ್ತಮ ರುಚಿ ಹಾಗೂ ತೂಕ ಕಡಿಮೆ ಮಾಡಲು ಇದು ಸಹಾಯಕಾರಿ ಎಂಬುದು ಎಲ್ಲರಿಗೂ ಗೊತ್ತು. ಆದ್ರೆ ಚಳಿಗಾಲದಲ್ಲಿ ಶುಂಠಿ ಟೀ ಸೇವನೆ ಮಾಡುವುದು ಹಾನಿಕರ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಟೀ ಯಾವುದೇ ಇರಲಿ, ಮಿತಿ ಮೀರಿದ್ರೆ ಆರೋಗ್ಯಕ್ಕೆ ಹಾನಿಕರ. ಪ್ರತಿ ದಿನ ಒಬ್ಬ ವ್ಯಕ್ತಿಗೆ 5 ಗ್ರಾಂ ಶುಂಠಿ ಸಾಕು. ಅದಕ್ಕಿಂತ ಹೆಚ್ಚು ಶುಂಠಿ […]

Advertisement

Wordpress Social Share Plugin powered by Ultimatelysocial