ಚಳಿಗಾಲದಲ್ಲಿ ‘ಶುಂಠಿ ಟೀʼ ಕುಡಿಯುವ ಮೊದಲು ಓದಿ ಈ ಸುದ್ದಿ

ಚಳಿಗಾಲದಲ್ಲಿ 'ಶುಂಠಿ ಟೀʼ ಕುಡಿಯುವ ಮೊದಲು ಓದಿ ಈ ಸುದ್ದಿ

6ಅನೇಕರು ಶುಂಠಿ ಟೀ ಇಷ್ಟಪಡ್ತಾರೆ. ಚಳಿಗಾಲದಲ್ಲಿ ಅನೇಕರು ಶುಂಠಿ ಟೀ ಕುಡಿಯುತ್ತಾರೆ. ಅತ್ಯುತ್ತಮ ರುಚಿ ಹಾಗೂ ತೂಕ ಕಡಿಮೆ ಮಾಡಲು ಇದು ಸಹಾಯಕಾರಿ ಎಂಬುದು ಎಲ್ಲರಿಗೂ ಗೊತ್ತು. ಆದ್ರೆ ಚಳಿಗಾಲದಲ್ಲಿ ಶುಂಠಿ ಟೀ ಸೇವನೆ ಮಾಡುವುದು ಹಾನಿಕರ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಟೀ ಯಾವುದೇ ಇರಲಿ, ಮಿತಿ ಮೀರಿದ್ರೆ ಆರೋಗ್ಯಕ್ಕೆ ಹಾನಿಕರ. ಪ್ರತಿ ದಿನ ಒಬ್ಬ ವ್ಯಕ್ತಿಗೆ 5 ಗ್ರಾಂ ಶುಂಠಿ ಸಾಕು. ಅದಕ್ಕಿಂತ ಹೆಚ್ಚು ಶುಂಠಿ ಸೇವನೆ ಮಾಡಿದ್ರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಹೆಚ್ಚು ಶುಂಠಿಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ. ಹೊಟ್ಟೆಯಲ್ಲಿ ಸಮಸ್ಯೆ ಕಾಡುತ್ತದೆ. ಹೆಚ್ಚು ಶುಂಠಿಯನ್ನು ಸೇವಿಸುವುದರಿಂದ ನಿದ್ರಾಹೀನತೆ ಕಾಡುತ್ತದೆ. ಆಮ್ಲೀಯ ಸಮಸ್ಯೆ ಕಾಡುತ್ತದೆ.

ಶುಂಠಿಯ ಸೇವನೆಯು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಸಕ್ಕರೆ ಮಟ್ಟವು ಸಾಮಾನ್ಯಕ್ಕಿಂತ ಕಡಿಮೆಯಿದ್ದರೆ, ಶುಂಠಿಯ ಅತಿಯಾದ ಸೇವನೆಯನ್ನು ತಪ್ಪಿಸಬೇಕು. ಶುಂಠಿಯನ್ನು ಅತಿಯಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಕುಸಿತ ಉಂಟಾಗುತ್ತದೆ.

ವೈದ್ಯರ ಪ್ರಕಾರ, ಗರ್ಭಿಣಿ ದಿನದಲ್ಲಿ 2.5 ಗ್ರಾಂ ಗಿಂತ ಹೆಚ್ಚು ಶುಂಠಿಯನ್ನು ಸೇವಿಸಬಾರದು. ಅಜೀರ್ಣ ಸಮಸ್ಯೆಗಳಿದ್ದರೆ ದಿನಕ್ಕೆ 1.2 ಗ್ರಾಂ ಗಿಂತ ಹೆಚ್ಚು ಶುಂಠಿಯನ್ನು ಸೇವಿಸಬಾರದು. ಮಹಿಳೆಯರು ತೂಕ ಇಳಿಸಿಕೊಳ್ಳಲು ಶುಂಠಿ ಸೇವಿಸುತ್ತಾರೆ. ಅಂತವರು ದಿನಕ್ಕೆ ಒಂದು ಗ್ರಾಂ ಶುಂಠಿಯನ್ನು ಮಾತ್ರ ಸೇವಿಸಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತೂಕ ಇಳಿಸಲು ಅಂಜೂರ ತುಂಬಾ ಸಹಕಾರಿ

Thu Jan 6 , 2022
 ಒಣಗಿಸಿದ ಅಂಜೂರದಲ್ಲಿ ಪ್ರೋಟೀನ್, ನಾರಿನಾಂಶ ಮತ್ತು ಸಣ್ಣ ಪ್ರಮಾಣದ ಕೊಬ್ಬು ಹಾಗೂ ಕ್ಯಾಲ್ಸಿಯಂ, ಪೊಟಾಶಿಯಂ,ಕಬ್ಬಿಣಾಂಶ ಮತ್ತು ತಾನ್ರ ಇದ್ದು ಇದು ದೇಹಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಒದಗಿಸಲು ಸಹಕಾರಿ. ಇದರಲ್ಲಿ ನಾರಿನಾಂಶ, ಪ್ರೋಟೀನ್ ಇರುವ ಕಾರಣದಿಂದಾಗಿ ಹೆಚ್ಚು ಅನಗತ್ಯ ಆಹಾರಗಳನ್ನು ತಿನ್ನದಂತೆ ತಡೆಯುತ್ತದೆ. ಇದರಿಂದ ದೇಹದ ತೂಕ ನಿರ್ವಹಣೆ ಮಾಡುವುದು ಸುಲಭ. ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದರೆ, ಇದನ್ನ ಸಂಜೆಯ ಸಮಯದಲ್ಲಿ ಸೇವನೆ ಮಾಡುವುದು ಹೆಚ್ಚು ಪ್ರಯೋಜನ ನೀಡುತ್ತದೆ. […]

Advertisement

Wordpress Social Share Plugin powered by Ultimatelysocial