ಬೆಂಕಿ ಆಕಸ್ಮಿಕ: ಬಿಡಿ ಘಟಕಕ್ಕೆ ಅಪಾರ ಹಾನಿ.

 

ಬಾಲಾಜಿ ಬಿಡಿ ತಯಾರಿಕ ಕಂಪನಿಯ ಲಕ್ಷ್ಮೇಶ್ವರ ಪಟ್ಟಣದ ಬೈಯಾರ ಓಣಿಯಲ್ಲಿನ ಬಿಡಿ ತಯಾರಿಕ ಘಟಕಕ್ಕೆ ಆಕಸ್ಮಿಕ ಬೆಂಕಿ ಬಿದ್ದ ಅವಘಡದಿಂದ ಘಟಕದಲ್ಲಿ ತಯಾರಿಸಿದ ಬಿಡಿಗಳು, ಬಿಡಿ ತಯಾರಿಕ ಕಚ್ಚಾ ಸಾಮಗ್ರಿಗಳಾದ ಎಲೆ, ತಂಬಾಕು ಹಾಗೂ ಇತರೆ ವಸ್ತುಗಳು ಭಸ್ಮಗೊಂಡಿದ್ದು, ಘಟಕದ ತಗಡುಗಳು ಬೆಂಕಿಗಾಹುತಿಯಾಗಿದೆ.

ಮಹಮ್ಮದ್ ಗೌಸ್ ಜಮಖಂಡಿ ಎಂಬುವವರಿಗೆ ಸೇರಿದ ಬಿಡಿ ತಯಾರಿಕ ಘಟಕ ಭಸ್ಮಗೊಂಡಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಮಹಮ್ಮದ್ ಗೌಸ್ ಮತ್ತು ಬಿಡಿ ಕಾರ್ಮಿಕರು ಅವರು ಘಟಕದ ಬಾಗಿಲು ಮುಚ್ಚಿ ಶುಕ್ರವಾರದ ಪ್ರಾರ್ಥನೆಗೆ ತೆರಳಿದ್ದರು. ಮದ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಘಟಕದಲ್ಲಿ ಏಕಾಯಕಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸ್ಥಳೀಯರು ಬೆಂಕಿ ನಂದಿಸಲು ಮುಂದಾಗಿದ್ದಲ್ಲದೆ, ಅಗ್ನಿ ಶಾಮಕ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ಮನೆಯ ಚಾವಣಿ, ಘಟಕದಲ್ಲಿ ಬಿಡಿ, ತಂಬಾಕು, ಎಲೆ ಹಾಗೂ ಘಟಕದ ತಗಡುಗಳು ಆಹುತಿಯಾಗಿದ್ದವು.

ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿ ನಂದಿಸುವ ವೇಳೆ ಸ್ಥಳೀಯರು ಸಹಾಯ ಮಾಡಿದ್ದಾರೆ.

ಶುಕ್ರವಾರ ಸಂತೆ ಇರುವ ಹಿನ್ನೆಲೆಯಲ್ಲಿ ಅಂಗಡಿಯಲ್ಲಿ ತಾಯಾರಿಸಿದ 1.20 ಲಕ್ಷ ರೂ. ಗಳ ಬೆಲೆ ಬಾಳುವ ಬಿಡಿ ಮತ್ತು ತಂಬಾಕು, ಎಲೆಗಳು ನಷ್ಟಯಾಗಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮನೆಯಲ್ಲಿ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿ ಬಂಧನ.

Fri Dec 16 , 2022
ಮನೆಯಲ್ಲಿ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿ ಬಂಧನ.ಗುಂಡ್ಲುಪೇಟೆ ತಾಲ್ಲೂಕಿನ ಅಣ್ಣೂರುಕೇರಿ ಗ್ರಾಮದ ಶಿವನಾಗಶೆಟ್ಟಿ ಎಂಬವನನ್ನು ಬಂಧಿಸಲಾಗಿದ್ದು ಬೆಳ್ಳಶೆಟ್ಟಿ ಮತ್ತು ಕರಿಯಶೆಟ್ಟಿ ಎಂಬ ಇಬ್ಬರು ಆರೋಪಿಗಳು‌ ಪರಾರಿಯಾಗಿದ್ದಾರೆ.ಖಚಿತ ಮಾಹಿತಿ ಮೇರೆಗೆ ಗುಂಡ್ಲುಪೇಟೆ ಬಫರ್ ಜೊನ್ ವಲಯದ ವಲಯ ಅರಣ್ಯಧಿಕಾರಿಗಳು ಮತ್ತು ಚಾಮರಾಜನಗರದ ಸೈಬರ್ ಕ್ರೈಮ್ ಜಂಟಿ‌ಯಾಗಿ ದಾಳಿ ನಡೆಸಿ‌ ಅಕ್ರಮವಾಗಿ ಬೆಳೆದಿದ್ದ 6 ಗಾಂಜಾ ಗಿಡ ಕಂಡುಬಂದಿದೆ.ಮನೆಯನ್ನು ಕೂಲಕುಂಷವಾಗಿ ಪರಿಶೀಲಿಸಿದಾಗ ಸುಮಾರು 5 ಕೆ.ಜಿ ಜಿಂಕೆ ಮಾಂಸ ಮತ್ತು ಅಕ್ರಮ ಬೇಟೆಗಾಗಿ […]

Advertisement

Wordpress Social Share Plugin powered by Ultimatelysocial