ಅಪಾಯಕಾರಿ ಓಮಿಕ್ರಾನ್‌ ನ ಬಿಎ.2 ಉಪ ರೂಪಾಂತರಿ: ಅಧ್ಯಯನದಲ್ಲಿ ಶಾಕಿಂಗ್‌ ಸಂಗತಿ ತಿಳಿಸುತ್ತಿದೆ…

ಕೊರೋನ ವೈರಸ್‌ನ ಓಮಿಕ್ರಾನ್ ರೂಪಾಂತರದ BA.2 ಉಪಪ್ರಬೇಧವು ವೇಗವಾಗಿ ಹರಡುವುದು ಮಾತ್ರವಲ್ಲದೆ ಹೆಚ್ಚು ತೀವ್ರವಾದ ಸೋಂಕು ಉಂಟುಮಾಡಬಹುದು ಎಂದು ಪ್ರಯೋಗಾಲಯದ ಅಧ್ಯಯನವೊಂದು ತಿಳಿಸುತ್ತಿದೆ.

ಬಯೋರಿಕ್ಸ್‌ವಿನಲ್ಲಿ ಇತ್ತೀಚೆಗೆ ಪೋಸ್ಟ್ ಮಾಡಲಾದ ಸಂಶೋಧನೆಯ ಈ ಅಂಶಗಳು ಇನ್ನೂ ಉನ್ನತ ಹಂತದ ವಿಶ್ಲೇಷಣೆಗೆ ಒಳಗಾಗಿಲ್ಲ.

BA.2 ಉಪ-ವ್ಯತ್ಯಯವು ಕೊರೊನಾ ವೈರಸ್‌ ನ ಹಳೆಯ ರೂಪಾಂತರಗಳಂತೆ ಗಂಭೀರವಾದ ಅನಾರೋಗ್ಯ ಉಂಟುಮಾಡುವ ಸಾಮರ್ಥ್ಯ ಹೊಂದಿರಬಹುದು ಎಂದು ಈ ಅಧ್ಯಯನ ತೋರಿಸುತ್ತದೆ.

BA.2 ರೂಪಾಂತರವು BA.1ಗಿಂತ ಹೆಚ್ಚು ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

“ಎಲ್ಲಾ ಉಪರೂಪಾಂತರಗಳ ಪೈಕಿ, BA.2 ಪೈಕಿಯು BA.1ಗಿಂತ ಹೆಚ್ಚು ಹರಡುತ್ತದೆ. ಆದಾಗ್ಯೂ, ತೀವ್ರತೆಯ ವಿಷಯದಲ್ಲಿ ಯಾವುದೇ ವ್ಯತ್ಯಾಸವಿಲ್ಲ” ಎಂದು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಕೋವಿಡ್-19 ತಾಂತ್ರಿಕ ಮುಖ್ಯಸ್ಥರಾದ ಮಾರಿಯಾ ವ್ಯಾನ್ ಕೆರ್ಖೋವಾ ಹೇಳುತ್ತಾರೆ.

ಇತ್ತೀಚಿನ ಅಧ್ಯಯನವೊಂದರಲ್ಲಿ, ಟೋಕಿಯೊ ವಿಶ್ವವಿದ್ಯಾನಿಲಯದ ಸಂಶೋಧಕರ ನೇತೃತ್ವದ ಜಪಾನಿನ ತಂಡವೊಂದು ಒಮಿಕ್ರಾನ್‌ನ BA.1 ಉಪ-ರೂಪಾಂತರವು BA.2 ಉಪ-ರೂಪಾಂತರದಂತೆಯೇ ಕೋವಿಡ್-19 ಲಸಿಕೆಗಳಿಂದ ಉಂಟಾಗುವ ರೋಗನಿರೋಧಕ ಶಕ್ತಿಯನ್ನು ಪ್ರತಿರೋಧಿಸಿ ನಿಲ್ಲುತ್ತದೆ ಎಂದು ಕಂಡುಹಿಡಿದಿದೆ.

“ಲಸಿಕೆ-ಪ್ರೇರಿತ ಮಾನವ ರೋಗನಿರೋಧಕ ಶಕ್ತಿಯು BA.1 ನಂತೆ BA.2 ವಿರುದ್ಧ ಕಾರ್ಯನಿರ್ವಹಿಸಲು ವಿಫಲವಾಗಿದೆ ಎಂದು ನ್ಯೂಟ್ರಾಲೈಸೇಶನ್ ಪ್ರಯೋಗಗಳು ತೋರಿಸುತ್ತವೆ” ಎಂದು ಅಧ್ಯಯನದ ಲೇಖಕರು ಹೇಳಿದ್ದಾರೆ.

ನವೆಂಬರ್ 2021ರಲ್ಲಿ ಬೋಟ್ಸ್ವಾನಾ ಮತ್ತು ದಕ್ಷಿಣ ಆಫ್ರಿಕಾದಿಂದ ಒಮಿಕ್ರಾನ್‌ಅನ್ನು ಮೊದಲ ಬಾರಿಗೆ ಕಂಡ ಕುರಿತು ವರದಿ ಮಾಡಲಾಗಿದೆ. ಅದರ BA.1 ಉಪ-ರೂಪಾಂತರವು ಪ್ರಪಂಚದಾದ್ಯಂತ ವೇಗವಾಗಿ ಹರಡಿದ್ದು, ಡೆಲ್ಟಾದಂತಹ ಇತರ ರೂಪಾಂತರಗಳನ್ನು ಈ ವಿಚಾರದಲ್ಲಿ ಮೀರಿಸಿದೆ.

ಈ ವರ್ಷದ ಫೆಬ್ರವರಿಯ ಹೊತ್ತಿಗೆ, ಒಮಿಕ್ರಾನ್‌ನ ಮತ್ತೊಂದು ಉಪರೂಪವಾದ BA.2 ವಂಶಾವಳಿಯು ಡೆನ್ಮಾರ್ಕ್ ಮತ್ತು ಬ್ರಿಟನ್‌ನಂಥ ದೇಶಗಳಲ್ಲಿ ಪತ್ತೆಯಾಗಿದೆ.

BA.2 ಉಪರೂಪಾಂತರವು BA.1ಅನ್ನು ಮೀರಿಸಲು ಪ್ರಾರಂಭಿಸಿದೆ, ಹಾಗೂ ಇದು ಮೂಲ ಒಮಿಕ್ರಾನ್‌ಗಿಂತ ಹೆಚ್ಚು ಹರಡುತ್ತದೆ ಎಂದು ತೋರುತ್ತಿರುವುದಾಗಿ ಸಂಶೋಧಕರು ಹೇಳಿದ್ದಾರೆ.

“BA.2 ಓಮಿಕ್ರಾನ್ ರೂಪಾಂತರವೆಂದು ಪರಿಗಣಿಸಲಾಗಿದ್ದರೂ, ಅದರ ಜೀನೋಮಿಕ್ ಅನುಕ್ರಮವು BA.1 ಗಿಂತ ಹೆಚ್ಚು ವಿಭಿನ್ನವಾಗಿದೆ, ಇದು BA.2ನ ವೈರಾಣು ಗುಣಲಕ್ಷಣಗಳು BA.1ಗಿಂತ ಭಿನ್ನವಾಗಿದೆ ಎಂದು ಸೂಚಿಸುತ್ತದೆ” ಎಂದು ಲೇಖಕರು ಒತ್ತಿ ತೋರುತ್ತಾರೆ.

ಸಂಶೋಧಕರು ಹ್ಯಾಮ್ಸ್ಟರ್‌ಗಳನ್ನು BA.2 ಮತ್ತು BA.1 ಸೋಂಕಿಗೆ ಒಳಪಡಿಸಿದ ವೇಳೆ, BA.2 ಸೋಂಕಿಗೆ ಒಳಗಾದ ಪ್ರಾಣಿಗಳು ಹೆಚ್ಚಿನ ಅನಾರೋಗ್ಯಕ್ಕೆ ಒಳಗಾದವು ಮತ್ತು ಅವುಗಳ ಶ್ವಾಸಕೋಶದ ಕಾರ್ಯ ಕೆಟ್ಟದಾಗಿತ್ತು ಎಂದು ಕಂಡುಕೊಂಡಿದ್ದಾರೆ.

ಅಂಗಾಂಶಗಳ ಮಾದರಿಗಳನ್ನು ನೋಡಿದಾಗ, BA.2-ಸೋಂಕಿತ ಹ್ಯಾಮ್ಸ್ಟರ್‌ಗಳ ಶ್ವಾಸಕೋಶಗಳು BA.1 ಸೋಂಕಿತರಿಗಿಂತ ಹೆಚ್ಚಿನ ಹಾನಿಗೆ ಒಳಗಾಗಿವೆ ಎಂದು ಅವರು ಹೇಳುತ್ತಾರೆ. ಸಂಶೋಧಕರ ಪ್ರಕಾರ, SARS-CoV-2 ನ ಹಿಂದಿನ ರೂಪಾಂತರಗಳೊಂದಿಗೆ ಸೋಂಕಿಗೆ ಒಳಗಾದ ಜನರ ಪ್ರತಿಕಾಯಗಳಿಗೆ ಇದು ನಿರೋಧಕವಾಗಿದೆ.

“ಹೆಚ್ಚಿನ ಪರಿಣಾಮಕಾರಿ ಸಂತಾನೋತ್ಪತ್ತಿ ಸಂಖ್ಯೆ ಮತ್ತು ಪ್ರತಿರಕ್ಷಣಾ ಪ್ರತಿರೋಧ ಹೊಂದಿರುವ BA.2ನ ಹರಡುವಿಕೆಯು ಮುಂದಿನ ದಿನಗಳಲ್ಲಿ ಜಾಗತಿಕ ಆರೋಗ್ಯಕ್ಕೆ ಗಂಭೀರ ಸಮಸ್ಯೆಯಾಗಬಹುದು ಎಂಬುದು ಸ್ಪಷ್ಟವಾಗಿದೆ” ಎಂದು ಲೇಖಕರು ಸೇರಿಸಿದ್ದಾರೆ.

ಸಂತಾನೋತ್ಪತ್ತಿ ಸಂಖ್ಯೆ ಎಂಬುದು ಸೋಂಕಿನ ಪ್ರಸರಣದ ಅಳತೆಯಾಗಿದೆ ಒಬ್ಬ ಸೋಂಕಿತ ವ್ಯಕ್ತಿಯಿಂದ ಸೃಷ್ಟಿಯಾಗುವ ಸೋಂಕಿತ ಜನರ ಸರಾಸರಿ ಸಂಖ್ಯೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಧಗಧಗಿಸಿ ಹೊತ್ತಿ ಉರಿದ ಸ್ವಾತಂತ್ರ್ಯ ಸೇನಾನಿ ರೈಲು....

Sat Feb 19 , 2022
ಬಿಹಾರ: ಇಲ್ಲಿನ ಮಧುಬನಿ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿದ್ದಂತ ಸ್ವಾತಂತ್ರ್ಯ ಸೇನಾನಿ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡು, ಧಗಧಗಿಸಿ ಹೊತ್ತಿ ಉರಿದಿರುವಂತ ಭೀಕರ ಅಗ್ನಿ ಅವಘಡ ಸಂಭವಿಸಿದೆ. ದೆಹಲಿಯಿಂದ ಬಿಹಾರದ ಮಧುಬನಿಗೆ ಬಂದಿದ್ದಂತ ಸ್ವಾತಂತ್ರ್ಯ ಸೇನಾನಿ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿದ ಪರಿಣಾಮ, ರೈಲು ಬೋಗಿ ಸುಟ್ಟು ಕರಕಲಾಗಿವೆ. ಅಂದಹಾಗೇ ಕಳೆದ ರಾತ್ರಿ ದೆಹಲಿಯಿಂದ ಬಂದು ಮಧುಬನಿಯಲ್ಲಿ ನಿಂತಿದ್ದ ಕಾರಣ, ಯಾವುದೇ ಪ್ರಯಾಣಿಕರು ರೈಲಿನಲ್ಲಿ ಇರಲಿಲ್ಲ. ಹೀಗಾಗಿ ಪ್ರಾಣಾಪಾಯ ಕೂಡ […]

Advertisement

Wordpress Social Share Plugin powered by Ultimatelysocial