ಧಗಧಗಿಸಿ ಹೊತ್ತಿ ಉರಿದ ಸ್ವಾತಂತ್ರ್ಯ ಸೇನಾನಿ ರೈಲು….

ಬಿಹಾರ: ಇಲ್ಲಿನ ಮಧುಬನಿ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿದ್ದಂತ ಸ್ವಾತಂತ್ರ್ಯ ಸೇನಾನಿ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡು, ಧಗಧಗಿಸಿ ಹೊತ್ತಿ ಉರಿದಿರುವಂತ ಭೀಕರ ಅಗ್ನಿ ಅವಘಡ ಸಂಭವಿಸಿದೆ.

ದೆಹಲಿಯಿಂದ ಬಿಹಾರದ ಮಧುಬನಿಗೆ ಬಂದಿದ್ದಂತ ಸ್ವಾತಂತ್ರ್ಯ ಸೇನಾನಿ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿದ ಪರಿಣಾಮ, ರೈಲು ಬೋಗಿ ಸುಟ್ಟು ಕರಕಲಾಗಿವೆ.

ಅಂದಹಾಗೇ ಕಳೆದ ರಾತ್ರಿ ದೆಹಲಿಯಿಂದ ಬಂದು ಮಧುಬನಿಯಲ್ಲಿ ನಿಂತಿದ್ದ ಕಾರಣ, ಯಾವುದೇ ಪ್ರಯಾಣಿಕರು ರೈಲಿನಲ್ಲಿ ಇರಲಿಲ್ಲ. ಹೀಗಾಗಿ ಪ್ರಾಣಾಪಾಯ ಕೂಡ ಸಂಭವಿಸಿಲ್ಲ. ಕೂಡಲೇ ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ಸಿಬ್ಬಂದಿ, ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ನಿಲ್ದಾಣದಲ್ಲಿ ನಿಂತಿದ್ದ ರೈಲೊಂದು ನೋಡನೋಡುತ್ತಿದ್ದಂತೆಯೇ ಹೊತ್ತಿ ಉರಿದಿರುವ ಘಟನೆ ಬಿಹಾರದ ಮಧುಬಾನಿ ರೈಲು ನಿಲ್ದಾಣದಲ್ಲಿ ನಡೆದಿದೆ.

Sat Feb 19 , 2022
ನಿಲ್ದಾಣದಲ್ಲಿ ನಿಂತಿದ್ದ ರೈಲೊಂದು ನೋಡನೋಡುತ್ತಿದ್ದಂತೆಯೇ ಹೊತ್ತಿ ಉರಿದಿರುವ ಘಟನೆ ಬಿಹಾರದ ಮಧುಬಾನಿ ರೈಲು ನಿಲ್ದಾಣದಲ್ಲಿ ನಡೆದಿದೆ. ಈ ರೈಲು ಸಂಪೂರ್ಣವಾಗಿ ಖಾಲಿ ಇದ್ದ ಕಾರಣ ಯಾವುದೇ ಸಾವು – ನೋವು ಸಂಭವಿಸಿಲ್ಲ. ರೈಲಿನ ಬೋಗಿಗಳಿಗೆ ಬೆಂಕಿ ತಗುಲುತ್ತಿದ್ದಂತೆಯೇ ಸಾರ್ವಜನಿಕರು ನೀರು ತಂದು ಎರಚಿದರಾದರೂ ಬೆಂಕಿ ತೀವ್ರವಾಗಿ ವ್ಯಾಪಿಸಿದ ಕಾರಣ ಅದು ಸಾಧ್ಯವಾಗಲಿಲ್ಲ. ರೈಲಿನ ಬೋಗಿಗಳಿಗೆ ಬೆಂಕಿ ತಗುಲಲು ಕಾರಣವೇನೆಂಬುದು ತಿಳಿದುಬಂದಿಲ್ಲ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada […]

Advertisement

Wordpress Social Share Plugin powered by Ultimatelysocial