ಪ್ರೀತಿಯಿಂದ ಸಾಕಿದ ಬೆಕ್ಕನ್ನು ಸಾಯಿಸಿದ ನೆರೆಮನೆಯವ

ಪ್ರೀತಿಯಿಂದ ಸಾಕಿದ ಬೆಕ್ಕನ್ನು ಸಾಯಿಸಿದ ನೆರೆಮನೆಯವನನ್ನು ಜೈಲಿಗಟ್ಟಿದ ದಂಪತಿ

ಥಲಾಯಝಾಂ: ಬೆಕ್ಕನ್ನು ಸಾಯಿಸಿದ ಆರೋಪದ ಅಡಿಯಲ್ಲಿ ದಂಪತಿ ಪಕ್ಕದ ಮನೆಯವನ ವಿರುದ್ಧ ದೂರು ದಾಖಲಿಸಿ ಆತನನ್ನು ಜೈಲಿಗಟ್ಟಿದ ಘಟನೆಯು ಕೇರಳದ ವೈಯಕ್ಕೊಂನ ಥಲಾಯಝಾಂನಲ್ಲಿ ನಡೆದಿದೆ.

ಸಂಬಂಧಿಕರ ಮನೆಗೆ ತೆರಳಿದ್ದ ರಾಜು ಹಾಗೂ ಸುಜಾತಾ ದಂಪತಿ ವಾಪಸ್​ ಮನೆಗೆ ಮರಳುವ ವೇಳೆಯಲ್ಲಿ ಪ್ರೀತಿಯಿಂದ ಸಾಕಿದ ಬೆಕ್ಕು ರಕ್ತದ ಮಡುವಿನಲ್ಲಿ ಬಿದ್ದಿತ್ತು.

ಕೂಡಲೇ ಅವರು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಕೊಟ್ಟಾಯಂ ಪಶು ಆಸ್ಪತ್ರೆಯಲ್ಲಿ ಬೆಕ್ಕಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೂ ಅದು ಮೃತಪಟ್ಟಿತ್ತು

ರಾಜು ಹಾಗೂ ಸುಜಾತಾ ಎಂಬ ದಂಪತಿ ಪ್ರೀತಿಯಿಂದ ಸಾಕಿದ ಬೆಕ್ಕನ್ನು ಸಾಯಿಸಿದ ಆರೋಪದಡಿಯಲ್ಲಿ ನೆರೆಮನೆಯಾತನನ್ನು ಜೈಲಿಗಟ್ಟಿದ್ದಾರೆ.

8 ತಿಂಗಳ ಪ್ರಾಯದ ಬೆಕ್ಕು ನೆರೆಮನೆಯ ರಮೇಶ್​ ಮನೆಗೆ ತೆರಳಿ ಆತ ಸಾಕಿದ್ದ ಗುಬ್ಬಚ್ಚಿಯನ್ನು ಕಚ್ಚಿತ್ತು ಎನ್ನಲಾಗಿದೆ. ಈ ಬೆಕ್ಕು ತನ್ನ ಪಕ್ಷಿಗೆ ಹಾನಿ ಮಾಡುತ್ತದೆ ಎಂದು ಕೋಪಗೊಂಡ ರಾಜೇಶ್​ ಬೆಕ್ಕಿನ ಮೇಲೆ ಫೈರಿಂಗ್​ ನಡೆಸಿದ್ದ.

ಬೆಕ್ಕಿನ ಸಾವಿಗೆ ಕಾರಣನಾದ ರಾಜೇಶ್​ ವಿರುದ್ಧ ರಾಜು ಹಾಗೂ ಸುಜಾತಾ ದಂಪತಿ ವಯಕ್ಕೋಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಪೊಲೀಸರು ಆತನನ್ನು ಬಂಧಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

2030ರೊಳಗೆ `ರಾಷ್ಟ್ರೀಯ ಶಿಕ್ಷಣ ನೀತಿ' ಜಾರಿಗೆ ತರುತ್ತೇವೆ : ಬಿ.ಸಿ.ನಾಗೇಶ್

Thu Dec 16 , 2021
ಬೆಳಗಾವಿ : 2030ರೊಳಗೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುತ್ತೇವೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಟಾಸ್ಕ್ ಪೋರ್ಸ್ ಸಮಿತಿ ರಚನೆ ಆಗಿದೆ. ಅಂಗನವಾಡಿ ಮತ್ತು ಪ್ರಾಥಮಿಕ ಶಿಕ್ಷಣ ಶಿಕ್ಷಕರಿಗೆ ತರಬೇತಿ ನೀಡುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ವಿಧಾನಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಚಿವ ಬಿ.ಸಿ.ನಾಗೇಶ್, 2030ರೊಳಗೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುತ್ತೇವೆ. ಮುಂದಿನ ವರ್ಷದಲ್ಲಾದ್ರೂ ರಾಷ್ಟ್ರೀಯ ಶಿಕ್ಷಣ ನೀತಿ ಪರಿಚಯಿಸುವ ಇರಾದೆ […]

Advertisement

Wordpress Social Share Plugin powered by Ultimatelysocial