ಅಶುತೋಷ್ ಗೋವಾರಿಕರ್ ಇಂದಿನ ಚಿತ್ರರಂಗದ ಪ್ರಬುದ್ಧ ನಿರ್ದೇಶಕರ ಸಾಲಿನಲ್ಲಿ ಮಿಂಚುವವರಲ್ಲಿ ಪ್ರಮುಖ ಹೆಸರು.

ಅಶುತೋಷ್ ಗೋವಾರಿಕರ್ 1964ರ ಫೆಬ್ರುವರಿ 15ರಂದು ಮುಂಬೈನಲ್ಲಿ ಜನಿಸಿದರು. ಓದಿನಲ್ಲಿ ರಸಾಯನ ಶಾಸ್ತ್ರದ ಪದವಿ ಪಡೆದರು. ಮೊದಲಿನಿಂದಲೂ ಅಶುತೋಷ್ ಅವರಿಗೆ ನಾಟಕ, ಜನಪದ ನೃತ್ಯ, ಸಂಗೀತಗಳಲ್ಲಿ ಆಸಕ್ತಿ. ಹೀಗಾಗಿ ಅವರು ಮೊದಲು ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.ಹಲವು ಹಿಂದಿ, ಮರಾಠಿ ಚಿತ್ರಗಳಲ್ಲಿ ನಟಿಸಿದ ಅಶುತೋಷ್ ಗೋವಾರಿಕರ್ 1993ರಲ್ಲಿ ಚಲನಚಿತ್ರ ನಿರ್ದೇಶನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಅವರ ‘ಲಗಾನ್’ ಚಿತ್ರ ಪ್ರೇಕ್ಷಕರಿಗೆ, ವಿಮರ್ಶಕರಿಗೆ ಇಷ್ಟವಾಗಿದ್ದು ಮಾತ್ರವಲ್ಲದೆ ಮೊಟ್ಟಮೊದಲ ಬಾರಿಗೆ ಭಾರತದ ಸಿನಿಮಾ ರಂಗವನ್ನು ಆಸ್ಕರ್ ಪ್ರಶಸ್ತಿಯ ಹೆಬ್ಬಾಗಿಲವರೆಗೂ ತಂದಿತ್ತು. ‘ಲಗಾನ್’, ‘ಸ್ವದೇಸ್’, ‘ಜೋಧಾ ಅಕ್ಬರ್’, ‘ವಾಟ್ ಈಸ್ ಯುವರ್ ರಾಶೀ’, ಖೇಲೇನ್ ಹಮ್ ಜೀ ಜಾನ್ ಸೇ’, ‘ಮೊಹೆಂಜೊ ದಾರೋ’, ‘ಪಾಣಿಪತ್’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿ ಅವುಗಳಲ್ಲಿ ಹಲವು ಚಿತ್ರಗಳ ನಿರ್ಮಾಪಕರೂ ಆಗಿದ್ದಾರೆ. ಹಲವು ಚಿತ್ರಗಳಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಏಳು ಅಂತರರಾಷ್ಟ್ರೀಯ ಚಲನಚಿತ್ರ ಪಶಸ್ತಿಗಳು, ಹಲವಾರು ಫಿಲ್ಮ್ ಫೇರ್ ಪ್ರಶಸ್ತಿಗಳು ಹಾಗೂ ರಾಷ್ಟ್ರೀಯ ಚಲನಚಿತ್ರ ಪಶಸ್ತಿಗಳೂ ಸೇರಿದಂತೆ ಹಲವಾರು ಮಹತ್ವದ ಗೌರವಗಳು ಅಶುತೋಷ್ ಗೋವಾರಿಕರ್ ಅವರಿಗೆ ಸಂದಿವೆ.ಸಂಸ್ಕೃತಿ, ಸಂಗೀತ, ಕಲಾತ್ಮಕ ಮತ್ತು ಚಾರಿತ್ರಿಕ ಗುಣಗಳನ್ನು ಸಿನಿಮಾದಲ್ಲಿ ಸಂಯೋಜಿಸುವುದರ ಮೂಲಕ ಸಾಂಸ್ಕೃತಿಕ ಲೋಕಕ್ಕೊಂದು ಹೊಸ ಆಯಾಮವನ್ನು ಹಾಕಿಕೊಟ್ಟು ವಿಶಿಷ್ಟತೆಯನ್ನು ಸಾಧಿಸಿರುವ ಅಶುತೋಷ್ ಗೋವಾರಿಕರ್ ಸಿನಿಮಾ ಲೋಕದಲ್ಲಿ ಹೊಸ ಭರವಸೆಯನ್ನು ಮೂಡಿಸಿದವರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಛತ್ತೀಸ್‌ಗಢದಲ್ಲಿ ಮಾಮಾ ಬೇರ್ ಮತ್ತು ಅವರ 2 ಮರಿಗಳ ಗೇಟ್‌ಕ್ರಾಶ್ ವೆಡ್ಡಿಂಗ್ ರಿಸೆಪ್ಷನ್

Fri Feb 18 , 2022
    ವೈರಲ್ ವಿಡಿಯೋ: ಆಹಾರ ಮತ್ತು ಆಶ್ರಯಕ್ಕಾಗಿ ಕಾಡು ಪ್ರಾಣಿಗಳು ವಸತಿ ಪ್ರದೇಶಗಳಿಗೆ ಅಲೆದಾಡುವ ವೀಡಿಯೊಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಾಮಾನ್ಯವಾಗಿದೆ. ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ನಡೆದ ಮದುವೆಯ ಆರತಕ್ಷತೆ ಸಮಾರಂಭದಲ್ಲಿ ಇಬ್ಬರು ಆಹ್ವಾನಿಸದ ಅತಿಥಿಗಳು ವಿವಾಹವನ್ನು ಗೇಟ್‌ಕ್ರಾಶ್ ಮಾಡಿದರು. ವೀಡಿಯೊವೊಂದರಲ್ಲಿ, ತಾಯಿ ಕರಡಿ ಮತ್ತು ಅವಳು ಪಾರ್ಟಿ ನಡೆಯುವ ಸ್ಥಳದಲ್ಲಿ ಅಡ್ಡಾಡುತ್ತಿರುವುದನ್ನು ನೋಡುತ್ತಿರುವ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ತಾಯಿ ಕರಡಿ ತನ್ನ ಬೆನ್ನಿನ ಮೇಲೆ ಸವಾರಿ […]

Advertisement

Wordpress Social Share Plugin powered by Ultimatelysocial