ಪಿಎಸ್‍ಐ ನೇಮಕಾತಿ ಪ್ರಕರಣದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ !

 

ಬೆಂಗಳೂರು,ಮೇ5- ಪಿಎಸ್‍ಐ ನೇಮಕಾತಿ ಪ್ರಕರಣದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ವಿರುದ್ಧ ಕಾಂಗ್ರೆಸ್ ಪಕ್ಷದವರು ಹಿಟ್ ಅಂಡ್ ರನ್ ಕೇಸ್ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಒಂದು ಜವಾಬ್ದಾರಿಯುತ ಪಕ್ಷ. ಅಧಿಕೃತ ಪ್ರತಿಪಕ್ಷವಾಗಿ ಒಬ್ಬರ ಮೇಲೆ ಆರೋಪ ಮಾಡುವಾಗ ಸಾಕ್ಷ್ಯಾಧಾರಗಳನ್ನು ಒದಗಿಸಬೇಕು. ಸುಮ್ಮನೆ ಹಿಟ್ ಅಂಡ್ ರನ್ ಕೇಸ್ ಮಾಡಬಾರದು ಎಂದು ತರಾಟೆಗೆ ತೆಗೆದುಕೊಂಡರು.

ನೀವು ಸಚಿವರ ವಿರುದ್ಧ ಮಾಡುತ್ತಿರುವ ಆರೋಪಗಳಿಗೆ ಸಾಕ್ಷ್ಯಾಧಾರಗಳಾದರೂ ಏನಿದೆ? ಸುಮ್ಮನೆ ರಾಜಕೀಯ ಆರೋಪ ಮಾಡಬೇಕು ಎಂಬ ಕಾರಣಕ್ಕಾಗಿ ಮಾಡಬೇಡಿ. ಸುದ್ದಿಗಾಗಿ ಆರೋಪ ಮಾಡಿದರೆ ಜನರು ನಂಬುತ್ತಾರೆಯೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಅಕಾರ ಅವಯಲ್ಲಿ ಎಷ್ಟು ಅಕ್ರಮಗಳು ನಡೆದಿವೆ ಎಂಬುದು ಅವರಿಗೆ ಗೊತ್ತಿಲ್ಲವೇ. ಪಿಎಸ್‍ಐ ನೇಮಕಾತಿ, ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಸಾಲು ಸಾಲು ಹಗರಣಗಳು ನಡೆದವು. ನಮ್ಮ ಸರ್ಕಾರದ ಬಗ್ಗೆ ಮಾತನಾಡಲು ಅವರಿಗೆ ಏನು ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಒಳಪಡಿಸಿದ್ದೇವೆ.

ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ಸಿಕ್ಕಿ ಹಾಕಿಕೊಂಡಿದ್ದಾರೆ. ನಮ್ಮ ಬಣ್ಣ ಎಲ್ಲಿ ಬಯಲಾಗಿ ಬಿಡುತ್ತದೆಯೋ ಎಂಬ ಅಳುಕಿನಿಂದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಸುಮ್ಮನೆ ಬಿಡುವುದಿಲ್ಲ. ದಿವ್ಯಾ ಹಾಗರಗಿ ಸೇರಿದಂತೆ ಇನ್ನು ಕೆಲವರು ಸಿಕ್ಕಿ ಬೀಳಲಿದ್ದಾರೆ. ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ಮತ್ತು ನಿಷ್ಠೂರವಾಗಿ ತನಿಖೆ ನಡೆಸಬೇಕೆಂದು ಅಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ. ಇದರ ಪರಿಣಾಮವೇ ಅನೇಕರು ಸಿಕ್ಕಿ ಬೀಳುತ್ತಿದ್ದಾರೆ ಎಂದರು.

ಯಾವುದೇ ಪಕ್ಷವಿರಲಿ, ಯಾರೇ ಇರಲಿ ಅಕಾರಿಗಳೇ ಇರಲಿ ಸುಮ್ಮನೆ ಬಿಡುವುದಿಲ್ಲ. ಯಾರ ಬಳಿ ಏನೇ ಸಾಕ್ಷಾಧಾರಗಳಿದ್ದರೂ ತನಿಖಾ ತಂಡಕ್ಕೆ ಕೊಡಲಿ. ನಿಮ್ಮ ಅಕಾರ ಅವಯಲ್ಲಿ ನಡೆದಾಗ ಎಷ್ಟು ಜನರನ್ನು ಬಂಸಿದ್ದೀರಿ ಎಂದು ಸಿಎಂ ಪ್ರಶ್ನೆ ಮಾಡಿದರು.

ಯಾವ ಅಕ್ರಮದ ಬಗ್ಗೆಯೂ ಸರಿಯಾಗಿ ತನಿಖೆಯನ್ನೇ ಮಾಡಲಿಲ್ಲ. ಎಲ್ಲವನ್ನೂ ಮುಚ್ಚಿ ಹಾಕುವ ಪ್ರಯತ್ನ ಮಾಡಿದರು. ಈಗ ನಮ್ಮ ಸರ್ಕಾರದ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಜನತೆ ಖಂಡಿತವಾಗಿಯೂ ಇದನ್ನು ನಂಬುವುದಿಲ್ಲ ಎಂದು ತಿಳಿಸಿದರು.

ಬಜೆಟ್‍ನಲ್ಲಿ ಘೋಷಣೆ ಮಾಡಿರುವ ಕಾರ್ಯಕ್ರಮಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸುವಂತೆ ಅಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ವಿಳಂಬ ಮಾಡದಂತೆ ಸೂಚಿಸಲಾಗಿದೆ ಎಂದರು.

ನಾಳೆಯಿಂದ ರಾಗಿ ಬೆಳೆಯುವ ಜಿಲ್ಲೆಗಳಲ್ಲಿ ಖರೀದಿ ಪ್ರಕ್ರಿಯೆಗೆ ನೋಂದಣಿ ಆರಂಭವಾಗಲಿದೆ. ಹೆಚ್ಚುವರಿಯಾಗಿ ಎರಡು ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಖರೀದಿ ಮಾಡಲಾಗುವುದು. ಮೊದಲು ನೋಂದಣಿ ನಂತರ ಆಯ್ದ ಕೇಂದ್ರಗಳಲ್ಲಿ ಖರೀದಿ ಆರಂಭವಾಗಲಿದೆ ಎಂದು ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರೈಲ್ವೆ ನೇಮಕಾತಿ ಮಂಡಳಿ (RRB) ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಅನುಕೂಲಕರ ಪ್ರಯಾಣಕ್ಕಾಗಿ ದಕ್ಷಿಣ ರೈಲ್ವೆ

Thu May 5 , 2022
ರೈಲ್ವೆ ವಿಭಾಗವು ವಿಶೇಷ ರೈಲುಗಳನ್ನು ಪ್ರಕಟಿಸಿದೆ. ಹೆಚ್ಚುವರಿ ಕೋಚ್ ಜೊತೆಗೆ ಓಡುವ ಈ ರೈಲುಗಳ ವೇಳಾಪಟ್ಟಿ ವಿವರ ಇಲ್ಲಿದೆ. ಮೇ 9 ಮತ್ತು 10, 2022 ರಂದು ನಡೆಯಲಿರುವ RRB NTPC CBT 2 ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಅನುಕೂಲಕ್ಕಾಗಿ, ಕೊಚುವೇಲಿ-ತಾಂಬರಂ ವಲಯದಲ್ಲಿ ಒಂದು ಜೋಡಿ ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ.  ರೈಲು ಸಂಖ್ಯೆ, ಎಲ್ಲಿಂದ- ಎಲ್ಲಿಗೆ- ಯಾವ ರೀತಿಯ ರೈಲು- ಎಂದಿನಿಂದ ಪ್ರಯಾಣ ಆರಂಭ 1. ರೈಲು ಸಂಖ್ಯೆ. 06005 […]

Advertisement

Wordpress Social Share Plugin powered by Ultimatelysocial