ಅಶ್ವಿನ್-ಅಯ್ಯರ್ ಅಮೋಘ ಜೊತೆಯಾಟ, ಭಾರತಕ್ಕೆ 3 ವಿಕೆಟ್‌ಗಳ ರೋಚಕ ಜಯ

 

 

ವಿಚಂದ್ರನ್ ಅಶ್ವಿನ್ ಮತ್ತು ಶ್ರೇಯಸ್ ಅಯ್ಯರ್ ಅಮೋಘ ಜೊತೆಯಾಟದ ನೆರವಿನಿಂದ ಭಾರತ ತಂಡ ಬಾಂಗ್ಲಾದೇಶದ ವಿರದ್ಧದ 2ನೇ ಟೆಸ್ಟ್‌ನಲ್ಲಿ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.145 ರನ್‌ಗಳ ಗುರಿಯನ್ನು ಬೆನ್ನತ್ತಿದ ಭಾರತ 3ನೇ ದಿನದಾಂತ್ಯಕ್ಕೆ 45 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು.4ನೇ ದಿನದಾಟ ಆರಂಭವಾಗುತ್ತಿದ್ದಂತೆ ಭಾರತ ಆಘಾತ ಅನುಭವಿಸಿತು. ಜಯದೇವ್ ಉನಾದ್ಕತ್ 13 ರನ್ ಗಳಿಸಿದ್ದಾಗ ಔಟ್ ಆದರು, ನಂತರ ಬಂದ ರಿಷಬ್ ಪಂತ್ ಕೂಡ 9 ರನ್‌ ಗಳಿಸುವಷ್ಟರಲ್ಲಿ ಔಟ್ ಆಗುವ ಮೂಲಕ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿತು.ಜೋಫ್ರಾ ಆರ್ಚರ್, ಬುಮ್ರಾ ಇದ್ದರೂ ಮುಂಬೈ ಇಂಡಿಯನ್ಸ್ ಬೌಲಿಂಗ್ ದುರ್ಬಲವಾಗಿದೆ ಎಂದ ಮಾಜಿ ಕ್ರಿಕೆಟಿಗಭಾರತ ತಂಡ 74 ರನ್ ಗಳಿಸಿದ್ದಾಗ ಅಕ್ಷರ್ ಪಟೇಲ್ ಔಟಾಗುವ ಮೂಲಕ 7 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯಲ್ಲಿತ್ತು. ಆದರೆ, ಶ್ರೇಯಸ್ ಅಯ್ಯರ್ ಮತ್ತು ರವಿಚಂದ್ರನ್ ಅಶ್ವಿನ್ ಒತ್ತಡದ ನಡುವೆಯೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಭಾರತಕ್ಕೆ 3 ವಿಕೆಟ್‌ ರೋಚಕ ಜಯ ತಂದುಕೊಟ್ಟರು. ಈ ಜಯದೊಂದಿಗೆ ಭಾರತ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ವೈಟ್ ವಾಷ್ ಮಾಡಿದೆ. 8ನೇ ವಿಕೆಟ್‌ಗೆ ಈ ಜೋಡಿ ಅಜೇಯ 71 ರನ್‌ ಕಲೆಹಾಕಿತು.ಸೋಲಿನ ಭೀತಿಯಲ್ಲಿದ್ದ ಟೀಂ ಇಂಡಿಯಾ145 ರನ್‌ಗಳ ಗುರಿಯನ್ನು ಬೆನ್ನತ್ತಿದ ಟೀಂ ಇಂಡಿಯಾ 74 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿ ಸಿಲುಕಿತು. ಪ್ರಮುಖ ಬ್ಯಾಟರ್ ಗಳು ಕೈಕೊಟ್ಟ ಕಾರಣ ಭಾರತ ತಂಡ ಗೆಲ್ಲುವುದು ಕಷ್ಟ ಎನ್ನುವಂತಾಗಿತ್ತು.ಶುಭಮನ್ ಗಿಲ್ (7), ಕೆಎಲ್ ರಾಹುಲ್ (2), ಚೇತೇಶ್ವರ ಪೂಜಾರ (6), ವಿರಾಟ್ ಕೊಹ್ಲಿ (1), ರಿಷಬ್ ಪಂತ್ (9), ಜಯದೇವ್ ಉನಾದ್ಕತ್ (13) ರನ್‌ ಗಳಿಸಿ ಔಟಾದರು. 34 ರನ್‌ ಗಳಿಸಿದ್ದ ಅಕ್ಷರ್ ಪಟೇಲ್‌ ಕೂಡ ಔಟಾಗುವ ಮೂಲಕ ಭಾರತದ ಸೋಲಿನ ಭೀತಿ ಹೆಚ್ಚಾಗಿತ್ತು. ಮೆಹಿದಿ ಹಸನ್ ಮೀರಜ್ 5 ವಿಕೆಟ್‌ ಪಡೆಯುವ ಮೂಲಕ ಭಾರತದ ಬ್ಯಾಟರ್ ಗಳನ್ನು ಕಾಡಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

 

 

Please follow and like us:

Leave a Reply

Your email address will not be published. Required fields are marked *

Next Post

*ಕರ್ನಾಟಕ ರಾಜ್ಯ ರೈತ ಸಂಘ*

Sun Dec 25 , 2022
  *ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸುವರ್ಣಸೌಧ ಬೆಳಗಾವಿಯಲ್ಲಿ ಮುತ್ತಿಗೆ ಹೋರಾಟ ನಡೆಸಲಾಯಿತುಅಧ್ಯಕ್ಷರಾದ*ಶ್ರೀ ಚೂನಪ್ಪ ಪೂಜೇರಿ ಮತ್ತು ಕಾರ್ಯಾಧ್ಯಕ್ಷರಾದ ಮಹೇಶ್ ಗೌಡ ಸುಬೇದಾರ್ ನೇತೃತ್ವದಲ್ಲಿ ಸುವರ್ಣ ಸೌಧ ಮುತ್ತಿಗೆ ನಡೆಸಿದರು ಯಾದಗಿರಿ ಮತ್ತು ಕಲ್ಬುರ್ಗಿ ಜಿಲ್ಲೆಯ ರೈತರ ಸಮಸ್ಯೆ ಕುರಿತು ಪರಿಹರಿಸಬೇಕು ಎಂದು ಒತ್ತಾಯ ಮಾಡಲಾಯಿತುಖರೀದಿ ಕೇಂದ್ರ ಆರಂಭಸಿ ರೈತರ ಸಂಪೂರ್ಣ ಬೆಳೆ ಖರೀದಿ ಮಾಡಬೇಕು ಯೋಗ್ಯವಾದ ಬೆಲೆ ನಿಗದಿ ಮಾಡಬೇಕುಕಲಬುರ್ಗಿ ಜಿಲ್ಲೆಯ ರೈತರ ಬೆಳೆ […]

Advertisement

Wordpress Social Share Plugin powered by Ultimatelysocial