‘ಅಶ್ವಿನಿ ನಕ್ಷತ್ರ’ ಖ್ಯಾತಿ ನಟಿ ಪ್ರಿಯಾ ಕೆಸರೆ ನಟನೆಯಿಂದ ದೂರ ಉಳಿದಿದ್ದೇಕೆ?

‘ಅಶ್ವಿನಿ ನಕ್ಷತ್ರ’ ಸೀರಿಯಲ್ ಪ್ರಿಯರಿಗೆ ತೀರಾ ಪರಿಚಿತವಾಗಿರುವ ಹೆಸರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ ‘ಅಶ್ವಿನಿ ನಕ್ಷತ್ರ’ವೂ ಒಂದು. ‘ಅಶ್ವಿನಿ ನಕ್ಷತ್ರ’ ಧಾರಾವಾಹಿಯಲ್ಲಿ ಖಳನಾಯಕಿ ಭಾವನಾ ಆಗಿ ಅಭಿನಯಿಸಿದ್ದ ಪ್ರಿಯಾ ಕೆಸರೆ ಬರೋಬ್ಬರಿ ಎರಡು ವರ್ಷಗಳಿಂದ ಬಣ್ಣದ ಲೋಕದಿಂದ ಕಾಣೆಯಾಗಿದ್ದಾರೆ.ಅರ್ಥಾತ್ ಯಾವ ಧಾರಾವಾಹಿಯಲ್ಲಾಗಲಿ ಅಥವಾ ಸಿನಿಮಾಗಳಲ್ಲಿ ಆಗಲಿ ಆಕೆ ಕಾಣಿಸಿಕೊಳ್ಳುತ್ತಿಲ್ಲ.ಎರಡು ವರ್ಷದ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ ಪ್ರಿಯಾ ಕೆಸರೆ ಸದ್ಯ ಮುದ್ದು ಮಗನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗನ ಆರೈಕೆಯ ಸಲುವಾಗಿ ನಟನೆಯಿಂದ ಪ್ರಿಯಾ ಕೊಂಚ ಬ್ರೇಕ್ ಪಡೆದುಕೊಂಡಿದ್ದರೂ ಅವರನ್ನು ಅರಸಿ ಬರುವ ಅವಕಾಶಗಳಿಗೇನೂ ಕೊರತೆಯಿಲ್ಲ.”ಇತ್ತೀಚೆಗಷ್ಟೇ ಮಗನಿಗೆ ಮೂರು ವರ್ಷ ತುಂಬಿತು. ಮಗನ ಸಲುವಾಗಿ ನಾನು ಬಣ್ಣದ ಲೋಕದಿಂದ ಬ್ರೇಕ್ ಪಡೆದುಕೊಂಡಿದ್ದೆ. ಈಗ ನಟನಾ ಜಗತ್ತಿನಿಂದ ಆಫರ್‌ಗಳು ಬರುತ್ತಿದೆ. ಒಮ್ಮೆ ನಟನೆಗೆ ಇಳಿದರೆ, ಮತ್ತೆ ಈ ಕ್ಷೇತ್ರದಲ್ಲಿಯೇ ನಾನು ಬ್ಯುಸಿಯಾಗಿ ಬಿಡುತ್ತೇನೆ. ಶೂಟಿಂಗ್, ಮನೆ ಹೆಕ್ಟಿಕ್ ಆಗುತ್ತದೆ. ಸದ್ಯ ಮಗನೊಂದಿಗೆ ಕಾಲ ಕಳೆಯುವ ನಿರ್ಧಾರ ಮಾಡಿದ್ದೇನೆ” ಎಂದು ಹಲವು ಸಂದರ್ಶನಗಳಲ್ಲಿ ನಟಿ ಪ್ರಿಯಾ ಕೆಸರೆ ಹೇಳಿದ್ದಾರೆ.ಪತ್ರಿಕೋದ್ಯಮ ಪದವೀಧರೆಮಲೆನಾಡ ಬೆಡಗಿ ಪ್ರಿಯಾ ಕೆಸರೆ ಪತ್ರಿಕೋದ್ಯಮದಲ್ಲಿ ಪದವಿ ಪಡೆದುಕೊಂಡಿದ್ದಾರೆ. ಪದವಿಯ ಬಳಿಕ ಉದ್ಯೋಗದ ಸಲುವಾಗಿ ಬೆಂಗಳೂರಿನತ್ತ ಮುಖ ಮಾಡಿದ ಪ್ರಿಯಾ ಖಾಸಗಿ ವಾಹಿನಿಯೊಂದರಲ್ಲಿ ಕೆಲಸ ಮಾಡುವ ಅವಕಾಶ ಪಡೆದುಕೊಂಡರು.ಸಣ್ಣ ವಯಸ್ಸಿನಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದ ಪ್ರಿಯಾ ನಾಟಕಗಳಲ್ಲಿ ಬಣ್ಣ ಹಚ್ಚಿದ್ದೇ ಹೆಚ್ಚು. ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಿಯಾಗೆ ಮುಂದೆ ನಟನೆಯಲ್ಲಿ ಮುಂದುವರಿಯುವ ಬಯಕೆ ಉಂಟಾಯಿತು. ಅದೇ ಕಾರಣದಿಂದ ಕೆಲಸಕ್ಕೆ ವಿದಾಯ ಹೇಳಿ ಪೂರ್ಣ ಪ್ರಮಾಣದ ನಟಿಯಾಗುವ ನಿರ್ಧಾರ ಮಾಡಿದರು.ಅಭಿನಯ ತರಂಗದಲ್ಲಿ ಕಲಿಕೆಯಾವಾಗ ನಟಿಯಾಗಬೇಕು ಎಂದು ಪ್ರಿಯಾ ಕೆಸರೆ ಧೃಡನಿರ್ಧಾರ ಮಾಡಿದ್ರೋ ಆಗ ಅವರು ಅಭಿನಯತರಂಗ ನಾಟಕ ತಂಡ ಸೇರಿದರು. ಆರು ತಿಂಗಳುಗಳ ಕಾಲ ಅಭಿನಯ ತರಂಗ ತಂಡದಲ್ಲಿ ಇದ್ದ ಪ್ರಿಯಾ ನಾಟಕದಲ್ಲಿ ನಟಿಸುವುದನ್ನು ಮತ್ತಷ್ಟು ಚೆನ್ನಾಗಿ ಅಭ್ಯಾಸ ಮಾಡಿದ್ರು. ನಟನೆಯ ಜೊತೆಗೆ ಟೆಕ್ನಿಕಲ್‌ನತ್ತ ವಿಶೇಷ ಆಸಕ್ತಿ ಹೊಂದಿದ್ದ ಪ್ರಿಯಾ ಎಡಿಟಿಂಗ್ ಕೂಡಾ ಕಲಿತುಕೊಂಡರು.’ಸಿಂಧೂರ’ ಮೊದಲ ಧಾರಾವಾಹಿ’ಸಿಂಧೂರ’ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಪ್ರಿಯಾ ಮತ್ತೆ ಹಿಂತಿರುಗಿ ನೋಡಿದ್ದಿಲ್ಲ. ‘ಒಂದಾನೊಂದು ಕಾಲದಲ್ಲಿ’, ‘ಮೂಕಾಂಬಿಕಾ’, ‘ಬಂಗಾರ’, ‘ರಥಸಪ್ತಮಿ’, ‘ಯುಗಾದಿ’, ‘ಮದುಮಗಳು’, ‘ಕನಕ’, ‘ಗೃಹಲಕ್ಷ್ಮಿ’, ‘ಗುಂಡ್ಯಾನ ಹೆಂಡ್ತಿ’, ‘ಒಲವು’, ‘ಕಾರ್ತಿಕ ದೀಪ’, ‘ತಂಗಾಳಿ’, ‘ಅಮ್ಮ ನಿನಗಾಗಿ’, ‘ಅಶ್ವಿನಿ ನಕ್ಷತ್ರ’ ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ಕಿರುತೆರೆ ಜಗತ್ತಿನಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದರು.ಖಳನಾಯಕಿಯಾಗಿ ಕಿರುತೆರೆಗೆ ಪಾದಾರ್ಪಣೆ ಮಾಡಿದ ಪ್ರಿಯಾ ಕೆಸರೆ ಮುಂದೆ ಹೆಚ್ಚಿನ ಧಾರಾವಾಹಿಗಳಲ್ಲಿ ಖಳನಾಯಕಿಯಾಗಿ ಮಿಂಚಿದ್ದು ವಿಶೇಷ. ನೆಗೆಟಿವ್ ಪಾತ್ರಗಳೆಂದರೆ ನನಗೆ ಅಚ್ಚುಮೆಚ್ಚು ಎಂದು ಹೇಳುವ ಪ್ರಿಯಾ ಈಗಲೂ ಅಶ್ವಿನಿ ನಕ್ಷತ್ರದ ಭಾವನಾ ಆಗಿಯೇ ಫೇಮಸ್ಸು. ಧಾರಾವಾಹಿ ಮುಗಿದು ವರ್ಷ ಮೂರು – ನಾಲ್ಕು ಕಳೆಯುತ್ತಾ ಬಂದರೂ ಇಂದಿಗೂ ಪ್ರಿಯಾ ಕೆಸರೆ ಅಂದ ತಕ್ಷಣ ನೆನಪಾಗುವುದು ಭಾವನಾ ಪಾತ್ರ. ಮನೋಜ್ಞ ನಟನೆಯ ಮೂಲಕ ಕಿರುತೆರೆ ರಂಗದಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ಪ್ರಿಯಾ ಕೆಸರೆ ಮತ್ಯಾವಾಗ ಬಣ್ಣ ಹಚ್ಚುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಮುಂದಿನ ದಿನಗಳಲ್ಲಿ ಸಿಗಬೇಕಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಸಿ ಹೋಗುವಂತೆ ಉಜ್ಜಿ ಪಾತ್ರೆ ತೊಳೆಯುತ್ತಿರುವ ಕೋತಿ

Tue Jan 10 , 2023
ಸಾಮಾಜಿಕ ಮಾಧ್ಯಮದಲ್ಲಿ ಪ್ರತಿದಿನ ಪ್ರಾಣಿಗಳ ಅನೇಕ ವಿಶಿಷ್ಟ ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ನೋಡಲು ಮುದ್ದಾಗಿರುತ್ತವೆ, ಇನ್ನೂ ಕೆಲವು ನಗು ತರಿಸುತ್ತವೆ. ಇದೀಗ ಅಂತದ್ದೇ ಒಂದು ವಿಡಿಯೋ ವೈರಲ್‌ ಆಗುತ್ತಿದ್ದು, ಇದನ್ನು ನೋಡಿ ನೀವೂ ನಗೋದು ಗ್ಯಾರಂಟಿ ವೈರಲ್‌ ಆಗಿರುವ ವಿಡಿಯೋದಲ್ಲಿ ಕೋತಿಯೊಂದು ಆರಾಮಾಗಿ ಕುಳಿತು ಪಾತ್ರೆಯೊಂದನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಮಸಿ ಹೋಗೋವರ್ಗೂ ಉಜ್ಜಿ ತೊಳೆಯುತ್ತಿರುವುದನ್ನು ನೋಡಬಹುದು. ಈ ವೀಡಿಯೋ ನೋಡಿದ ಜನರು ‘ಈ ಜಗತ್ತಿನಲ್ಲಿ ಅಸಾಧ್ಯವಾದುದು […]

Advertisement

Wordpress Social Share Plugin powered by Ultimatelysocial