ಎಎಸ್‌ಐ ಗೋಪಾಲ್ ದಾಸ್‌ಗೆ ಸಚಿವರನ್ನು ಕೊಲ್ಲುವ ಸ್ಪಷ್ಟ ಉದ್ದೇಶ ಇತ್ತು.

ಭುವನೇಶ್ವರ: ಆರೋಪಿ ಸಹಾಯಕ ಸಬ್ ಇನ್‌ಸ್ಪೆಕ್ಟರ್ (ಎಎಸ್‌ಐ) ಗೋಪಾಲ್ ದಾಸ್ ಸಚಿವರನ್ನು ಕೊಲ್ಲುವ “ಸ್ಪಷ್ಟ ಉದ್ದೇಶ” ಹೊಂದಿದ್ದ ಎಂದು ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ಅವರ ಹತ್ಯೆಗೆ ಸಂಬಂಧಿಸಿದಂತೆ ಒಡಿಶಾ ಪೊಲೀಸರು ತನ್ನ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.

60ರ ವಯಸ್ಸಿನ ಸಚಿವರ ಮೇಲೆ ಎಎಸ್‌ಐ ಗುಂಡು ಹಾರಿಸಿದ ವೇಳೆ ಸ್ಥಳದಲ್ಲಿದ್ದ ಬ್ರಜರಾಜನಗರ ಪೊಲೀಸ್ ಠಾಣೆ ಪ್ರಭಾರಿ ಇನ್ಸ್‌ಪೆಕ್ಟರ್ (ಐಐಸಿ) ಪ್ರದ್ಯುಮ್ನ್ಯ ಕುಮಾರ್ ಸ್ವೈನ್ ಅವರು ಎಫ್ ಐಆರ್ ನಲ್ಲಿ ಈ ಕುರಿತು ಹೇಳಿದ್ದಾರೆ. ಸಚಿವರು ರವಿವಾರ ಚಿಕಿತ್ಸೆಯ ವೇಳೆ ಮೃತಪಟ್ಟಿದ್ದರು.

“ಕಾರ್ಯಕ್ರಮಕ್ಕಾಗಿ ಸಂಚಾರ ತೆರವು ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಗಾಂಧಿ ಚೌಕ್ ಪೊಲೀಸ್ ಔಟ್‌ಪೋಸ್ಟ್‌ನ ಎಎಸ್‌ಐ ಗೋಪಾಲ್ ದಾಸ್ ಇದ್ದಕ್ಕಿದ್ದಂತೆ ಸಚಿವರ ಸಮೀಪಕ್ಕೆ ಬಂದು ತಮ್ಮ ಸರ್ವೀಸ್ ಪಿಸ್ತೂಲ್‌ನಿಂದ ಅತ್ಯಂತ ಸಮೀಪದಿಂದ ಗುಂಡು ಹಾರಿಸಿದ್ದ. ಆತನಲ್ಲಿ ಕೊಲ್ಲುವ ಸ್ಪಷ್ಟಉದ್ದೇಶ ಇತ್ತು,” ಎಂದು ಬ್ರಜರಾಜನಗರ ಪೊಲೀಸ್ ಠಾಣೆಯಲ್ಲಿ ಐಐಸಿ ದೂರು ದಾಖಲಿಸಿದ್ದಾರೆ.

ಎಎಸ್‌ಐ ಗೋಪಾಲ್ ಹಾರಿಸಿದ್ದ 2ನೇ ಸುತ್ತಿನ ಗುಂಡು ಪ್ರಭಾರಿ ಇನ್ಸ್‌ಪೆಕ್ಟರ್ (ಐಐಸಿ) ಪ್ರದ್ಯುಮ್ನ್ಯ ಕುಮಾರ್ ಉಂಗುರದ ಬೆರಳಿಗೆ ತಗಲಿತ್ತು

ಗುಂಡು ಸಚಿವರ ಎದೆಗೆ ತಗುಲಿ ಅವರು ಕೆಳಗೆ ಬಿದ್ದಿದ್ದಾರೆ. ಸಚಿವರ ದೇಹದ ಮೇಲೆ ಗುಂಡಿನ ಗಾಯದಿಂದ ಅಪಾರ ರಕ್ತಸ್ರಾವವಾಗಿತ್ತು, ಕಾನ್‌ಸ್ಟೆಬಲ್ ಕೆಸಿ ಪ್ರಧಾನ್ ಅವರೊಂದಿಗೆ ಆರೋಪಿ ಎಎಸ್‌ಐ ಅನ್ನು ನಾವು ಹಿಡಿದೆವು ಎಂದು ಐಐಸಿ ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೋರಾಟಗಾರ ಜಾವೇದ್ ಮುಹಮ್ಮದ್ ಗೆ ಜಾಮೀನು ಮಂಜೂರುಗೊಳಿಸಿದ ನ್ಯಾಯಾಲಯ.

Tue Jan 31 , 2023
ಪ್ರಯಾಗರಾಜ್: ಪ್ರಯಾಗರಾಜ್ ಹಿಂಸಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಗುರುತಿಸಲ್ಪಟ್ಟಿದ್ದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತ ಜಾವೇದ್ ಮುಹಮ್ಮದ್ ಅವರಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರುಗೊಳಿಸಿದೆ. ಘಟನೆ ವೇಳೆ ಮುಹಮ್ಮದ್ ಅಲ್ಲಿ ಸೇರಿದ್ದ ಜನರನ್ನು ಪ್ರಚೋದಿಸುತ್ತಿದ್ದರು, ಶಸ್ತ್ರಗಳನ್ನು ಹೊಂದಿದ್ದರು ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ್ದರು ಎಂಬುದನ್ನು ಎಫ್‌ಐಆರ್ ಅಥವಾ ಪ್ರಾಸಿಕ್ಯೂಶನ್ ಹೇಳಿಕೆಗಳು ಪುಷ್ಠೀಕರಿಸುತ್ತಿಲ್ಲ ಎಂದು ಜಾಮೀನು ಮಂಜೂರುಗೊಳಿಸುವ ವೇಳೆ ನ್ಯಾಯಮೂರ್ತಿ ಸಮೀರ್ ಜೈನ್ ಹೇಳಿದರು. “ಅರ್ಜಿದಾರ ಹಿಂಸೆಯಲ್ಲಿ ಪ್ರಮುಖ […]

Advertisement

Wordpress Social Share Plugin powered by Ultimatelysocial