ಹೋರಾಟಗಾರ ಜಾವೇದ್ ಮುಹಮ್ಮದ್ ಗೆ ಜಾಮೀನು ಮಂಜೂರುಗೊಳಿಸಿದ ನ್ಯಾಯಾಲಯ.

ಪ್ರಯಾಗರಾಜ್: ಪ್ರಯಾಗರಾಜ್ ಹಿಂಸಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಗುರುತಿಸಲ್ಪಟ್ಟಿದ್ದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತ ಜಾವೇದ್ ಮುಹಮ್ಮದ್ ಅವರಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರುಗೊಳಿಸಿದೆ.

ಘಟನೆ ವೇಳೆ ಮುಹಮ್ಮದ್ ಅಲ್ಲಿ ಸೇರಿದ್ದ ಜನರನ್ನು ಪ್ರಚೋದಿಸುತ್ತಿದ್ದರು, ಶಸ್ತ್ರಗಳನ್ನು ಹೊಂದಿದ್ದರು ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ್ದರು ಎಂಬುದನ್ನು ಎಫ್‌ಐಆರ್ ಅಥವಾ ಪ್ರಾಸಿಕ್ಯೂಶನ್ ಹೇಳಿಕೆಗಳು ಪುಷ್ಠೀಕರಿಸುತ್ತಿಲ್ಲ ಎಂದು ಜಾಮೀನು ಮಂಜೂರುಗೊಳಿಸುವ ವೇಳೆ ನ್ಯಾಯಮೂರ್ತಿ ಸಮೀರ್ ಜೈನ್ ಹೇಳಿದರು.

“ಅರ್ಜಿದಾರ ಹಿಂಸೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆಂದು ಈ ಹಂತದಲ್ಲಿ ಹೇಳಲಾಗದು,” ಎಂದು ನ್ಯಾಯಾಲಯ ಹೇಳಿದೆ.

ಪ್ರವಾದಿ ಮುಹಮ್ಮದ್ ವಿರುದ್ಧ ಅವಮಾನಕಾರಿ ಹೇಳಿಕೆಗಳನ್ನು ನೀಡಿದ್ದ ಇಬ್ಬರು ಬಿಜೆಪಿ ವಕ್ತಾರರು ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಲು ಮುಹಮ್ಮದ್ ಸಂಚು ಹೂಡಿದ್ದರೆಂದು ಆರೋಪಿಸಿ ಅವರನ್ನು ಜೂನ್ ತಿಂಗಳಿನಲ್ಲಿ ಬಂಧಿಸಲಾಗಿತ್ತು.

ಜೂನ್ 12 ರಂದು ಪ್ರಯಾಗರಾಜ್ ನ ಸಂಬಂಧಿತ ಪ್ರಾಧಿಕಾರ ಮುಹಮ್ಮದ್ ಅವರ ಮನೆಯನ್ನು ಅಕ್ರಮ ಕಟ್ಟಡವೆಂದು ಘೋಷಿಸಿ ಅದನ್ನು ನೆಲಸಮಗೊಳಿಸಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮುರಳಿ ವಿಜಯ್ ಗುಡ್ ಬೈ.

Tue Jan 31 , 2023
ಭಾರತೀಯ ಕ್ರಿಕೆಟ್ ತಂಡದ ಬ್ಯಾಟರ್ ಮುರಳಿ ವಿಜಯ್ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಇಂದು ವಿದಾಯ ಹೇಳಿದ್ದಾರೆ. ಟೀಂ ಇಂಡಿಯಾ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಪ್ರಮುಖ ಆಟಗಾರನಾಗಿದ್ದ ವಿಜಯ್ 2002 ರಿಂದ 2018ರ ವರೆಗೆ ಭಾರತ ತಂಡದಲ್ಲಿದ್ದರು. ಆ ಬಳಿಕ ಫಾರ್ಮ್ ಸಮಸ್ಯೆಯಿಂದ ತಂಡಕ್ಕೆ ಆಯ್ಕೆಯಾಗಲು ವಿಫಲರಾಗಿದ್ದರು.ನನ್ನ ಕನಸು ನನಸಾಗಲು ಸಹಕರಿಸಿದ ಕೋಚ್, ಮೆಂಟರ್, ಸಹ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಧನ್ಯವಾದ. ಕ್ರೀಡಾ ಬದುಕಿನ ಉತ್ತುಂಗದ ಮಟ್ಟವಾಗಿ ದೇಶಕ್ಕಾಗಿ ಆಡಿದ್ದೇನೆ ಎಂದು […]

Advertisement

Wordpress Social Share Plugin powered by Ultimatelysocial