ಬಾಲ್ಯ ವಿವಾಹ ನಿಗ್ರಹಕ್ಕೆ ಅಸ್ಸಾಂ ಸಿಎಂ ಬಿಸ್ವಾ ಪಣ;

ಗುವಾಹಟಿ: ರಾಜ್ಯದಲ್ಲಿನ ಬಾಲ್ಯ ವಿವಾಹ ಪಿಡುಗನ್ನು ಕೊನೆಗಾಣಿಸುವ ಸಂಕಲ್ಪ ದೃಢವಾಗಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ(ಫೆ.03)ದ ಪೊಲೀಸರ ಬೃಹತ್ ಕಾರ್ಯಾಚರಣೆಯಲ್ಲಿ 1,800ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ಇಂದು ಬೆಳಗ್ಗೆಯಿಂದಲೇ ಬಾಲ್ಯ ವಿವಾಹ ವಿರುದ್ಧದ ಕಾರ್ಯಾಚರಣೆ ಆರಂಭಗೊಂಡಿದ್ದು, ಇನ್ನೂ ಕೆಲವು ದಿನಗಳ ಕಾಲ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಹೇಳಿದರು.

ಶೂನ್ಯ ಸಹಿಷ್ಣುತೆಯ ಮನೋಭಾವದಿಂದ ಬಾಲ್ಯ ವಿವಾಹ ಪಿಡುಗಿನ ವಿರುದ್ಧ ಕಾರ್ಯಾಚರಣೆ ನಡೆಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಸಿಎಂ ಹಿಮಂತ್ ಬಿಸ್ವಾ ತಿಳಿಸಿದ್ದಾರೆ. ರಾಜ್ಯದಲ್ಲಿ ಬಾಲ್ಯ ವಿವಾಹ ನಿಗ್ರಹ ತಡೆ ಕಾಯ್ದೆಯನ್ನು ಉಲ್ಲಂಘಿಸಿರುವ 1,800ಕ್ಕೂ ಅಧಿಕ ಮಂದಿಯನ್ನು ಈವರೆಗೆ ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಇದು ಮಹಿಳೆಯರ ಮೇಲಿನ ಪೈಶಾಚಿಕ ಹಾಗೂ ಕ್ಷಮಿಸಲಾರದ ಕೃತ್ಯವಾಗಿದೆ ಎಂದು ಬಿಸ್ವಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಈಗಾಗಲೇ ರಾಜ್ಯಾದ್ಯಂತ 4,000ಕ್ಕೂ ಅಧಿಕ ಬಾಲ್ಯ ವಿವಾಹ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುಂಬೈನಲ್ಲಿ ಉಗ್ರದಾಳಿ ನಡೆಸುವುದಾಗಿ ಬೆದರಿಕೆ .

Fri Feb 3 , 2023
ಮುಂಬೈನಲ್ಲಿ ಉಗ್ರಾದಾಳಿ ನಡೆಸುವುದಾಗಿ ಬೆದರಿಕೆ ಇ-ಮೇಲ್ ಬಂದಿದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ನಾನು ತಾಲಿಬಾನಿ ಸದಸ್ಯ ಎಂದು ಹೇಳಿಕೊಂಡಿರುವ ಅಪರಿಚಿತ ವ್ಯಕ್ತಿಯಿಂದ ರಾಷ್ಟ್ರೀಯ ತನಿಖಾ ಸಂಸ್ಥೆಯ ಮೇಲ್ ಐಡಿಗೆ ಮೇಲ್ ಬಂದಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ಮಹಾರಾಷ್ಟ್ರದ ವಿವಿಧ ನಗರಗಳಲ್ಲಿ ಪೊಲೀಸ್ ಎಚ್ಚರ ವಹಿಸಿದ್ದಾರೆ. ಮುಂಬೈನಲ್ಲಿ ಭಯೋತ್ಪಾದಕ ದಾಳಿ ನಡೆಯಲಿದೆ, ನಾನು ತಾಲಿಬಾನಿ ಸದಸ್ಯ ಎಂದು ಹೇಳಿಕೊಂಡಿರುವ ಮೇಲ್ ದೊರಕಿದೆ. ಬೆದರಿಕೆ ಇ-ಮೇಲ್ ನಂತರ ಮುಂಬೈ ಪೊಲೀಸರು ಎನ್‌ಐಎ ಜತೆ ಜಂಟಿ […]

Advertisement

Wordpress Social Share Plugin powered by Ultimatelysocial