ಅತಿ ಆಸೆ ಗತಿ ಗೆಡಿಸುತ್ತೆ. ಥಿಯೇಟರ್​ನವರಿಗೆ ಟಾಂಗ್ ಕೊಟ್ಟ ಶಿವಣ್ಣ!

ಬೆಂಗಳೂರು: ತೆಲುಗಿನ ಹಾಗೂ ಬಹುನಿರೀಕ್ಷಿತ ಪ್ಯಾನ್ ಇಂಡಿಯನ್ ಸಿನಿಮಾ ಆದ ‘RRR’ ನಾಳೆ ರಿಲೀಸ್ ಆಗಲಿದ್ದು ಇದರಿಂದ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ ಕೊನೆಯ ಚಿತ್ರ ‘ ಜೇಮ್ಸ್ ‘ ಅನ್ನು ಚಿತ್ರಮಂದಿರಗಳಿಂದ ಎತ್ತಂಗಡಿ ಮಾಡಲಾಗುತ್ತಿದೆ ಎಂಬ ಕಿಚ್ಚು ವ್ಯಾಪಿಸುತ್ತಿದ್ದಂತೆ ನಟ ಶಿವರಾಜ್​ಕುಮಾರ್ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇಂದು ಸುದ್ದಿಗೋಷ್ಠಿ ನಡೆಸಿ ವಿವಾದಕ್ಕೆ ತೆರೆ ಎಳೆಯಲು ಯ್ನತಿಸಿದರು . ಈ ಸಂದರ್ಭದಲ್ಲಿ ಮಾತಾಡಿದ ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ , ‘ ಥಿಯೇಟರ್ ಸಮಸ್ಯೆ ಬರುತ್ತೆ – ಹೋಗುತ್ತೆ . ಮಾತುಕತೆ ಕೆಲವು ‌ಸಲ‌ ಅಗ್ರಿಮೆಂಟ್​ನಲ್ಲಿ‌ ಆಗುತ್ತೆ , ಕೆಲವು ಟೈಮ್ ಮಾತಿನ ಮೇಲೆ ನಿಂತಿರುತ್ತೆ . ಡಿಸ್ಟ್ರಿಬ್ಯೂಟರ್ ಹಾಗೂ ಎಕ್ಸಿಬ್ಯೂಟರ್​ಗಳ ಮಧ್ಯೆ ಯಾವ ರೀತಿ ಮಾತುಕತೆ ಆಗಿತ್ತೋ ಅದು ಗೊತ್ತಿಲ್ಲ . ಆದರೆ , ನಾನು ಎಲ್ಲರ ಪರವಾಗಿ ನಿಲ್ತೀನಿ . ನಮ್ಮ ಸಿನಿಮಾ ಇಂಡಸ್ಟ್ರಿ ಒಂದು ಕುಟುಂಬ ಇದ್ದಂತೆ . ಸಿಎಂ ಮಾತನಾಡಿದ್ದಾರೆ , ನಮ್ಮ ಸಮಸ್ಯೆಗೆ ಸ್ಪಂದಿಸಿದ್ದಾರೆ’ ಎಂದಿದ್ದಾರೆ.’ಅಭಿಮಾನಿಗಳು ಆತಂಕ ಪಡಬೇಡಿ . ನನ್ನ ತಮ್ಮನ‌ ಸಿನಿಮಾ ಅಂತ‌ ನಾನು ಬಂದು ಮಾತನಾಡಿಲ್ಲ . ಯಾವ ಕನ್ನಡ ಸಿನಿಮಾ ಬಂದರೂ ನಾನು ಮುಂದಾಳತ್ವ ವಹಿಸ್ತೇನೆ ‘, ಎಂದು ಹೇಳಿದ್ದಾರೆ . ಇದಿಷ್ಟೆ ಅಲ್ಲದೇ , ತಮ್ಮ ಮಾತನ್ನು ಮುಂದುವರಿಸಿದ ಶಿವಣ್ಣ ‘ ಯಾವುದೇ ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುತ್ತಿರುವ ಸಂದರ್ಭದಲ್ಲಿ ಅದನ್ನು ತೆಗೆಯಬಾರದು . ಅದು ಯಾವುದೇ ಸಿನಿಮಾವಾಗಿದ್ದರೂ ನಾವು ಅವರ ಪರವಾಗಿ ನಿಲ್ಲಬೇಕು . ಅತೀ ಹೆಚ್ಚು ಹಣ ಸಿಗುತ್ತದೆ ಎಂದು ಚಿತ್ರಮಂದಿರದವರು , ಥಿಯೇಟರ್ ಓನರ್​ಗಳು ಆಸೆ ಪಡೋಕೆ ಹೋಗಬಾರದು ‘, ಎಂಬ ಕಿವಿ ಮಾತನ್ನು ಶಿವಣ್ಣ ಹೇಳಿದ್ದಾರೆ . ಈಗಾಗಲೇ ‘ ದಿ ಕಾಶ್ಮೀರ್ ಫೈಲ್ಸ್ ‘ ಎಂಬ ಹಿಂದಿ ಚಿತ್ರದಿಂದ ಕನ್ನಡದ ‘ ಹರೀಶ್ ವಯಸ್ಸು 36’ ಸಿನಿಮಾಗೆ ಸಿಕ್ಕಾಪಟ್ಟೆ ಲಾಸ್ ಆಗಿದೆ . ಮಂಗಳೂರಿನಲ್ಲಿ ಹಲವು PVR ಸ್ಕ್ರೀನ್​ಗಳನ್ನು ಕಿತ್ತುಕೊಂಡು ‘ ದಿ ಕಾಶ್ಮೀರ್ ಫೈಲ್ಸ್ ‘ ಚಿತ್ರವನ್ನು ಅಲ್ಲಿ ಪ್ರದರ್ಶನ ಮಾಡಲಾಗುತ್ತಿದೆ ಎಂಬ ವಿಷಯ ಇಡೀ ರಾಜ್ಯಕ್ಕೆ ಗೊತ್ತಾಗಿದೆ .

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ಲೋಡ್ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತರ್ನ್ ತರನ್ ಗ್ರಾಮದಲ್ಲಿ ಗುಂಡಿಯಲ್ಲಿ ಬಿದ್ದು ಮೂವರು ಸಾವನ್ನಪ್ಪಿದ್ದಾರೆ, ಒಬ್ಬರು ಗಾಯಗೊಂಡಿದ್ದಾರೆ

Thu Mar 24 , 2022
ಬುಧವಾರ ನೌರಂಗಾಬಾದ್ ಗ್ರಾಮದ ಬಳಿಯ ಗೋಯಿಂಡ್ವಾಲ್-ಟಾರ್ನ್ ತರನ್ ರಸ್ತೆಯಲ್ಲಿರುವ ಗಿರಣಿಯಲ್ಲಿ ಮೇವು ತಯಾರಿಸಲು ಬಳಸುವ ಹೊಂಡದಲ್ಲಿ ಬಿದ್ದು ಮೂವರು ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಮಲ್ಮೊಹ್ರಿ ಗ್ರಾಮದ ಹರ್ಭಜನ್ ಸಿಂಗ್ ಮತ್ತು ಅವರ ಸೋದರಳಿಯ ದಿಲ್ಬಾಗ್ ಸಿಂಗ್ ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ವ್ಯಕ್ತಿ ಧೋಟೈನ್ ಗ್ರಾಮದ ದಿಲ್ಬಾಗ್ ಸಿಂಗ್ ಎಂದು ಗುರುತಿಸಲಾಗಿದೆ. ಹರ್ಭಜನ್ ಮತ್ತು ಅವರ ಸೋದರಳಿಯರು ಗಿರಣಿಯನ್ನು ಹೊಂದಿದ್ದರು – ಬಿಎಸ್ ಆಗ್ರೋ ಫೀಡ್ ಮತ್ತು ಆಯಿಲ್ […]

Advertisement

Wordpress Social Share Plugin powered by Ultimatelysocial