ನವದೆಹಲಿ: ಗಲ್ಫ್ ರಾಷ್ಟ್ರಗಳು ಮತ್ತು ಬ್ರಿಟನ್ ಮುಂತಾದ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರಲು ಏರ್ ಇಂಡಿಯಾ ಮತ್ತು ಅದರ  ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್ಪ್ರೆಸ್ ಇಂದು ವಿಶೇಷ ವಿಮಾನ ಕಳಿಸುತ್ತಿದೆ. ವಂದೇ ಭಾರತ್ ಮಿಷನ್‌ನ ಮೂರನೇ ದಿನವಾದ ಇಂದು ಢಾಕಾ, ಸಿಂಗಾಪುರ, ನ್ಯೂಜೆರ್ಸಿ ಮತ್ತು ಕುವೈತ್‌ಗೆ ನಾಲ್ಕು ಏರ್ ಇಂಡಿಯಾ ವಿಮಾನಗಳು ಹಾರಲಿದ್ದು, ದೋಹಾ, ಮಸ್ಕತ್, ಕೌಲಾಲಂಪುರ್, ಶಾರ್ಜಾ ಮತ್ತು ಕುವೈತ್‌ಗೆ ವಾಪಸಾತಿ ಹಾರಾಟ ನಡೆಸಲಿದೆ.

ಕಾಬೂಲ್ : ಕಳೆದ ೨೪ ಗಂಟೆಯಲ್ಲಿ ೨೧೫ ಹೊಸ ಸೋಂಕು ಪ್ರಕರಣಗಳು ದೇಶದಲ್ಲಿ ಕಂಡು ಬಂದಿವೆ. ಅಲ್ಲದೇ ಆರೋಗ್ಯ ಸಚಿವ ಫಿರೋಜುದ್ದೀನ್ ಫಿರೋಜ್ ಅವರಿಗೆ ಶುಕ್ರವಾರ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ ಎಂದು ಆಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲೀಗ ಸುಮಾರು ೩,೭೦೦ ಕೊರೊನಾ ಪ್ರಕರಣಗಳು ವರದಿಯಾಗಿವೆ. ಈವರೆಗೆ ೧೦೦ಕ್ಕೂ ಹೆಚ್ಚು ಸಾವು ಸಂಭವಿಸಿರುವುದಾಗಿ ತಿಳಿದು ಬಂದಿದೆ.

ಕೊರೊನಾ ವೈರಸ್ ಅಟ್ಟಹಾಸದಿಂದ ಸಾಕಷ್ಟು ದೇಶಗಳ ಆರ್ಥಿಕತೆ ಮೇಲೆ ಭಾರಿ ಹೊಡೆತ ಬಿದ್ದಿದೆ. ಭಾರತ ಕೂಡ ಇದಕ್ಕೆ ಹೊರತಾಗಿಲ್ಲ. ಕೊರೊನಾ ಸಂಕಷ್ಟದ ಆರ್ಥಿಕತೆ ಮೇಲೆತ್ತಲು ಕೇಂದ್ರ ಸರ್ಕಾರ ಈ ವರ್ಷ ೧೨ಲಕ್ಷ ಕೋಟಿ ರೂಪಾಯಿ ಸಾಲ ಪಡೆಯುವ ಅಗತ್ಯ ಬಿಳಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಲಾಕ್‌ಡೌನ್‌ನಿಂದ ವ್ಯಾಪಾರ, ವಹಿವಾಟು ಸ್ಥಗಿತಗೊಂಡಿದ್ದು, ತೆರಿಗೆ ಸಂಗ್ರಹ ಸೇರಿದಂತೆ ಎಲ್ಲ ಆದಾಯ ಮೂಲಕ್ಕೂ ಹೊಡೆತ ಬಿದ್ದಿದೆ. ಹೀಗಾಗಿ ಕೇಂದ್ರ ಸರ್ಕಾರ ಪ್ರಸ್ತುತ […]

ಬರ್ಲಿನ್: ಚಂದ್ರನ ಮೇಲೆ ಕಾಂಕ್ರೀಟ್ ತಯಾರಿಸಲು ಮಾನವ ಮೂತ್ರವು ಒಂದು ದಿನ ಉಪಯುಕ್ತ ಘಟಕಾಂಶ ಆಗಲಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಮೂತ್ರದಲ್ಲಿನ ಸಂಯುಕ್ತವಾದ ‘ಯೂರಿಯಾ’ವು ಅದರ ಗಟ್ಟಿಮುಟ್ಟಾದ ಅಂತಿಮ ಸ್ವರೂಪ ಗಟ್ಟಿ ಆಗುವ ಮೊದಲು ‘ಚಂದ್ರನ ಕಾಂಕ್ರೀಟ್’ ಗೆ ಉಪಯೋಗಕಾರಿಯಾಗಿದೆ ಎಂಬುದನ್ನು ಇತ್ತೀಚಿನ ಅಧ್ಯಯನವೊಂದರಲ್ಲಿ ಸಂಶೋಧಕರು ಕಂಡುಕೊಂಡಿದ್ದಾರೆ ಎಂದು ಸಂಸ್ಥೆ ಹೇಳಿದೆ. ಚಂದ್ರನ ಮೇಲ್ಭಾಗದಲ್ಲಿ ಲಭ್ಯವಿರುವ ವಸ್ತುಗಳನ್ನು ಮಾತ್ರ ಬಳಸುವುದರಿಂದ ಭೂಮಿಯಿಂದ ಸರಬರಾಜಾಗುವ ಅಗತ್ಯ ಸರಕುಗಳ ಸಾಗಣೆ […]

ರಾಜ್ಯದ ೪.೦೧ ಕೋಟಿ ಪಡಿತರ ಚೀಟಿದಾರರಿಗೆ ಮೂರು ತಿಂಗಳ ಮಟ್ಟಿಗೆ ಪಡಿತರ ವಿತರಣೆಗಾಗಿ ಕೇಂದ್ರ ಸರ್ಕಾರ ೮.೫೧ ಮೆಟ್ರಿಕ್ ಲಕ್ಷ ಟನ್ ಉಚಿತ ಆಹಾರ ಧಾನ್ಯಗಳನ್ನು ಪೂರೈಸಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳಿಗೆ ೨.೧ಲಕ್ಷ ಟನ್ ಆಹಾರ ಧಾನ್ಯಗಳನ್ನು ನಿಗದಿಪಡಿಸಲಾಗಿದೆ. ಲಾಕ್‌ಡೌನ್ ಆದಾಗಿನಿಂದ ರಾಜ್ಯಕ್ಕೆ ೩೦೨ ರೈಲು ಲೋಡ್ ಆಹಾರ ಧಾನ್ಯಗಳನ್ನು ಕಳುಹಿಸಲಾಗಿದೆ ಹಾಗೂ ಅದಕ್ಕಾಗಿ ೨,೩೫೧ಕೋಟಿ ವೆಚ್ಚ ಭರಿಸುತ್ತಿದೆ ಎಂದು ಭಾರತ ಆಹಾರ […]

ನವದೆಹಲಿ: ಬಾಬರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ಆಗಸ್ಟ್ ೩೧ರೊಳಗೆ ತನ್ನ ತೀರ್ಪು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಲಖನೌನಲ್ಲಿನ ವಿಶೇಷ ಸಿಬಿಐ ನ್ಯಾಯಾಲಯವಕ್ಕೆ ನಿರ್ದೇಶನ ನೀಡಿದೆ. ಪ್ರಕರಣವು ೧೯೯೨ ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ್ದರ ಸಂಬಂಧವಾಗಿದ್ದು ಇದು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯ ನಂಟು ಹೊಂದಿದೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ನಡೆಸಿದ ಕೋರ್ಟ್ ವಿಚಾರಣಾ ನ್ಯಾಯಾಲಯದಲ್ಲಿ ಇದೇ ಮಾದರಿ ಅನುಸರಿಸಲು ಹೇಳಿದೆ. ಈ ಮುನ್ನ ೨೦೧೯ ರ […]

ಕಾಲಿವುಡ್‌ನಲ್ಲಿ ಮಕ್ಕಳ್ ಸೆಲ್ವನ್ ಎಂದೇ ಕರೆಸಿಕೊಂಡಿರುವ ನಟ ವಿಜಯ್ ಸೇತುಪತಿ ಇದೀಗ ವಿವಾದಕ್ಕೆ ಗುರಿಯಾಗಿದ್ದಾರೆ. ಖಾಸಗಿ ಕಾರ್ಯಕ್ರಮದ ಟಿವಿ ಶೋನಲ್ಲಿ ಮಾತನಾಡಿದ ವಿಜಯ್ ಸೇತುಪತಿ ದೇವಾಲಯದಲ್ಲಿ ವಿಗ್ರಹಗಳಿಗೆ ಸ್ನಾನ ಮಾಡುವುದನ್ನು ತೋರಿಸುತ್ತಾರೆ, ಬಟ್ಟೆ ಹಾಕುವಾಗ ಮಾತ್ರ ಪುರೋಹಿತರು ಬಾಗಿಲು ಹಾಕುತ್ತಾರೆ. ಅಲಂಕಾರ ಮಾಡುವಾಗ ತೋರಿಸಲ್ಲ ಯಾಕೆ ಎಂಬ ಮಾತನ್ನು ಆಡಿರುವುದು ತೀವ್ರ ವಿವಾದಕ್ಕೆ ಗುರಿಮಾಡಿದೆ. ವಿಜಯ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿರುವ ಅಖಿಲ ಭಾರತ ಹಿಂದೂ ಮಹಾ ಸಭಾ, ಹಿಂದೂ ದೇವಾಲಯಗಳಲ್ಲಿ […]

ದೆಹಲಿ :ಲಾಕ್‌ಡೌನ್‌ನಿಂದ ದೆಹಲಿ ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನು ಕರ್ನಾಟಕಕ್ಕೆ ವಾಪಾಸ್ ಕರೆತರಲು ವಿಶೇಷ ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಲು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯೆಲ್ ಅವರೊಂದಿಗೆ ಚರ್ಚಿಸುವುದಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ. ದೆಹಲಿ ಅಕ್ಕಪಕ್ಕದ ರಾಜ್ಯಗಳಲ್ಲಿರುವ ಕನ್ನಡಿಗರು ದೆಹಲಿಗೆ ಬರಲು ಬೇಕಾಗಿರುವ ಅಗತ್ಯ ಪಾಸುಗಳನ್ನು ಪಡೆಯುವ ವ್ಯವಸ್ಥೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದರು.

ಬೆಂಗಳೂರು: ಕೊರೋನಾ ವೈರಸ್ ಸೋಂಕು ಹರಡದಂತೆ ತಡೆಯಲು ಮಾಸ್ಕ್ ಮತ್ತು ಸ್ಯಾನಿಟೈಸರ್ ತೀರಾ ಸಾಮಾನ್ಯ ಅಗತ್ಯವಾಗಿದೆ. ಬಟ್ಟೆಯಿಂದ ಮಾಸ್ಕ್ ತಯಾರಿಸಬಹುದಾದ್ದರಿಂದ ಆ ಸಮಸ್ಯೆ ಇಲ್ಲ. ಆದರೆ, ಸ್ಯಾನಿಟೈಸರ್ ಕೊರತೆ ಎಲ್ಲೆಡೆ ಇದೆ. ಸ್ಯಾನಿಟೈಸರ್‌ಗೆ ಬೇಡಿಕೆ ಹೆಚ್ಚಾಗಿ ಹಲವೆಡೆ ನಕಲಿ ಸ್ಯಾನಿಟೈಸರ್‌ಗಳ ಮಾರಾಟವಾಗುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಅಕ್ಕಿಯಿಂದ ಸ್ಯಾನಿಟೈಸರ್ ತಯಾರಿಸುವ ಪ್ರಸ್ತಾಪ ಮಾಡಿದೆ. ಕೇಂದ್ರದ ಈ ಪ್ರಸ್ತಾಪವನ್ನು ಕೆಪಿಸಿಸಿ ಕಿಸಾನ್ ಸಭಾದ ಅಧ್ಯಕ್ಷ ಸಚಿನ್ ಮೀಗಾ ಕಟುವಾಗಿ […]

ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಅನೇಕರು ಕಾಲ್ನಡಿಗೆಯಲ್ಲಿ ಊರಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ದಾರಿ ಮಧ್ಯೆ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ಕೆಲ ಕಾರ್ಮಿಕರು ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಈ ಎಲ್ಲದರ ಮಧ್ಯೆ ಕಾರ್ಮಿಕನ ಚಪ್ಪಲಿ ಸುದ್ದಿಯಲ್ಲಿದೆ. ಪಂಜಾಬ್ ನಿಂದ ಹರಿಯಾಣಕ್ಕೆ ಹೊರಟ ಕಾರ್ಮಿಕರನ್ನು ಅಂಬಾಲಿಯಲ್ಲಿ ಪೊಲೀಸರು ತಡೆದಿದ್ದರು. ಪೊಲೀಸರ ಕೆಲವರ ಚಪ್ಪಲಿ ಪಡೆದಿದ್ದರು. ಆದ್ರೆ ಇದಕ್ಕೆ ಹೆದರದ ಕಾರ್ಮಿಕರು ನೀರಿನ ಬಾಟಲಿಯನ್ನು ಚಪ್ಪಲಿ ಮಾಡಿಕೊಂಡು ರಸ್ತೆಗಿಳಿದಿದ್ದಾರೆ. ಕಾರ್ಮಿಕರು ಹೆದ್ದಾರಿಗೆ ಬರ್ತಿದ್ದಂತೆ ತಡೆದ […]

Advertisement

Wordpress Social Share Plugin powered by Ultimatelysocial