ಮಧ್ಯಪ್ರದೇಶ: ಕೊರೊನಾ ಲಾಕ್ ಡೌನ್ ದೇಶದಾದ್ಯಂತ ಘೋಷಣೆ ಮಾಡಿದ ಮೇಲೆ ಮದ್ಯ ಮಾರಾಟ ಸಂಪೂರ್ಣ ನಿಂತುಹೋಗಿದೆ. ಒಂದಕ್ಕೆ ಎರಡು ಪಟ್ಟು, ಹತ್ತು ಪಟ್ಟು ಹಣ ಕೊಟ್ಟು ಖರೀದಿ ಮಾಡುತ್ತಿರುವ ಪ್ರಕರಣಗಳು ಅಲ್ಲಿಲ್ಲಿ ಕಂಡುಬರುತ್ತಿವೆ. ಆದರೆ ಮಧ್ಯಪ್ರದೇಶದಲ್ಲಿ ತೀರ ಅಪರೂಪದ ಪ್ರಕರಣವೊಂದು ಕಂಡುಬಂದಿದೆ. ಸ್ಯಾನಿಟೈಜರ್ ದ್ರವವನ್ನೇ ಬಳಸಿಕೊಂಡು ಮದ್ಯ ತಯಾರಿಸಿದ್ದ ವ್ಯಕ್ತಿಯನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಅಂದಹಾಗೆ, ಹ್ಯಾಂಡ್ ಸ್ಯಾನಿಟೈಜರ್ ನಲ್ಲಿ ಇರುವ ಅತಿ ಮುಖ್ಯ ವಸ್ತುವೇ ಆಲ್ಕೋಹಾಲ್. ಆರೋಪಿಯ ಹೆಸರು […]

ಹೈದರಾಬಾದ್: ಕೊರೊನಾ ವೈರಸ್‌ನ ಸಂಕಷ್ಟದಿಂದ  ತೀವ್ರವಾಗಿ ಬಳಲುತ್ತಿರುವ ರಾಷ್ಟ್ರಗಳ ಸಹಾಯಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಮತ್ತು ಯುರೋಪಿಯನ್ ಇನ್ವೆಸ್ಟಮೆಂಟ್ ಬ್ಯಾಂಕ್ (ಇಐಬಿ) ಕೈಜೋಡಿಸಿವೆ. ಇಐಬಿ ವಿಶ್ವದ ಅತಿದೊಡ್ಡ ಸಾರ್ವಜನಿಕ ಬ್ಯಾಂಕ್ ಆಗಿರುವುದು ಗಮನಾರ್ಹ. ಕೋವಿಡ್ ಪರಿಣಾಮದಿಂದ ಆಫ್ರಿಕಾ ದೇಶಗಳಲ್ಲಿ ಉದ್ಭವಿಸಿರುವ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ಬಿಕ್ಕಟ್ಟುಗಳ ನಿವಾರಣೆಗೆ ಇಐಬಿ ೧.೪ ಬಿಲಿಯನ್ ಯುರೋ ಹಣಕಾಸು ಸಹಾಯ ನೀಡಲಿದೆ. ವಿಶ್ವಸಂಸ್ಥೆಯ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿನ ಅನುಭವ ಹಾಗೂ ಹಣಕಾಸು […]

ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಪ್ರೇಯಸಿ ಕ್ಯಾರಿ ಸೈಮಂಡ್ಸ್ ತಮ್ಮ ಮಗನಿಗೆ ವಿಲ್ಫ್ರೆಡ್ ಲಾರಿ ನಿಕೋಲಸ್ ಜಾನ್ಸನ್ ಎಂದು ಹೆಸರಿಟ್ಟಿದ್ದಾರೆ. ಕೊರೊನ ಸೋಂಕಿನಿಂದ ತಮ್ಮನ್ನು ಕಾಪಾಡಿದ ಇಬ್ಬರು ವೈದ್ಯರಿಗೆ ಬೋರಿಸ್ ಈ ಮೂಲಕ ಗೌರವ ಸಲ್ಲಿಸಿದ್ದಾರೆ. ಮೂರು ದಿನದ ಮಗುವಿನ ಪೋಟೋವನ್ನು ಇನ್ಸ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಸೈಮಂಡ್ಸ್, ತಮ್ಮ ಮಗನ ಹೆಸರಿನ ಆಯ್ಕೆಯ ಬಗ್ಗೆ ವಿವರಿಸಿದ್ದಾರೆ. ಅಲ್ಲದೆ ತನ್ನ ಪತ್ನಿಯ ಹೆರಿಗೆ ಸಮಯದಲ್ಲಿ ಶುಶ್ರೂಷೆ ಮಾಡಿದ ಲಂಡನ್ […]

ನವದೆಹಲಿ: ಲಾಕ್‌ಡೌನ್‌ನಿಂದಾಗಿ ದೇಶದ ಹಲವು ಭಾಗಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರು ತಮ್ಮ ಮನೆಗಳಿಗೆ ಹಿಂದಿರುಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರವು ಅವಕಾಶ ಕಲ್ಪಿಸುತ್ತಿವೆ. ಅದಕ್ಕೂ ಮುನ್ನವೇ ಕೆಲವು ಜನ ಕಾಂಕ್ರೀಟ್ ಮಿಕ್ಸರ್‌ನೊಳಗೆ ಕುಳಿತು ಪ್ರಯಾಣಿಸುವ ಮಾರ್ಗ ಕಂಡು ಕೊಂಡಿದ್ದಾರೆ. ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಕಾಂಕ್ರೀಟ್ ಮಿಕ್ಸರ್ ವಾಹನದೊಳಗೆ ಕುಳಿತು ೧೮ ಕಾರ್ಮಿಕರು ಪ್ರಯಾಣಿಸುತ್ತಿದ್ದುದು ಕಂಡುಬಂದಿದೆ. ಈ ಕುರಿತು ಎಎನ್‌ಐ ಸುದ್ದಿಸಂಸ್ಥೆ ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ೪೧ ಸೆಕೆಂಡ್‌ಗಳಿರುವ […]

ನ್ಯೂಯಾರ್ಕ್ : ಸಾಮಾನ್ಯ ಕೊರೊನಾ ಸೋಂಕಿತರಿಗಿAತ ಕ್ಯಾನ್ಸರ್ ಇರುವ ಕೊರೊನಾ ಸೋಂಕಿತರ ಮರಣ ಪ್ರಮಾಣ ಹೆಚ್ಚಿರುವ ಸಾಧ್ಯತೆ ಇದೆ ಎಂದು ಅಮೆರಿಕದಲ್ಲಿರುವ ಭಾರತೀಯ ಮೂಲದ ಸಂಶೋಧಕರ ತಂಡ ಹೇಳಿದೆ. ಅಮೆರಿಕದ ಆಲ್ಬರ್ಟ್ ಐನ್‌ಸ್ಟಿನ್ ಕಾಲೇಜ್ ಆಫ್ ಮೆಡಿಸಿನ್‌ನ ಸಂಶೋಧಕ ವಿಕಾಸ್ ಮೆಹ್ತಾ ”ನಾವು ಕ್ಯಾನ್ಸರ್ ರೋಗಿಗಳಿಗೆ ಸೋಂಕು ಬರದಂತೆ ತಡೆಗಟ್ಟುವುದು ಹೇಗೆ ಎಂಬ ಬಗ್ಗೆ ಸಂಶೋಧನೆ ನಡೆಸುತ್ತಿದ್ದೇವೆ. ಜೊತೆಗೆ ಕೊರೊನಾ ಸೋಂಕು ಕ್ಯಾನ್ಸರ್ ಇರುವವರ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆಯೂ […]

ಮುಂಬೈ: ದೇಶಾದ್ಯಂತ ಆಕ್ರೋಶ ಸೃಷ್ಟಿಸಿರುವ ಪಾಲ್ಘರ್ ಗುಂಪು ಥಳಿತ ಪ್ರಕರಣದ ಆರೋಪಿಗಳಲ್ಲೊಬ್ಬನಿಗೆ ಕೊರೋನ ಸೋಂಕು ದೃಢಪಟ್ಟಿದೆ. ಆತನನ್ನು ಆರಂಭದಲ್ಲಿ ಪಾಲ್ಘರ್ ಗ್ರಾಮೀಣ ಆಸ್ಪತ್ರೆಯ ಐಸೊಲೇಶನ್ ವಾಡ್ರಲ್ಲಿರಿಸಲಾಗಿತ್ತಾದರೂ ನಂತರ ಜೆ ಜೆ ಆಸ್ಪತ್ರೆಯ ಕೈದಿಗಳ ವಾರ್ಡ್ಗೆ ಸ್ಥಳಾಂತರಿಸಲಾಗಿದೆ. ಮಕ್ಕಳ ಅಪಹರಣಕಾರರೆಂಬ ಶಂಕೆಯಿಂದ ಇಬ್ಬರು ಸಾಧುಗಳು ಮತ್ತವರ ಕಾರು ಚಾಲಕನ ಹತ್ಯೆಗೆ ಕಾರಣವಾದ ಪಾಲ್ಘರ್ ಘಟನೆ ಸಂಬಂಧ ಪೊಲೀಸರು ಬಂಧಿಸಿದ್ದ ಒಂಬತ್ತು ಅಪ್ರಾಪ್ತರು ಸೇರಿದಂತೆ ೧೧೫ ಮಂದಿಯಲ್ಲಿ ಈ ಆರೋಪಿಯೂ ಸೇರಿದ್ದಾನೆ. ಅಪ್ರಾಪ್ತರನ್ನು […]

ನ್ಯೂಯಾರ್ಕ್ : ಕೊರೊನಾ ವೈರಸ್ ಹುಟ್ಟಿದ್ದು ವುಹಾನ್ ಪ್ರಯೋಗಾಲಯದಲ್ಲೇ ಎಂದು ಆರೋಪಿಸಿದ ಬೆನ್ನಲ್ಲೇ, ವುಹಾನ್ ನಗರದಲ್ಲಿ ಏಕಾಏಕಿ ಹರಡಿದ ಕೊರೊನಾ ವೈರಸ್ ಪರಿಸ್ಥಿತಿಯನ್ನು ಚೀನಾ, ತಪ್ಪಾಗಿ ನಿರ್ವಹಿಸಿದೆ ಎಂದು ಶ್ವೇತಭವನ(ಡಬ್ಲೂಹೆಚ್‌ಒ) ಆರೋಪಿಸಿದೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಚೀನಾದ ವುಹಾನ್ ನಗರದಲ್ಲಿ ಮೊದಲ ಬಾರಿಗೆ ವರದಿಯಾದ ಮಾರಣಾಂತಿಕ ಕೊರೊನಾ ವೈರಸ್, ಇದುವರೆಗೆ ೬೪,೦೦೦ ಅಮೆರಿಕನ್ನರು ಸೇರಿದಂತೆ ಜಾಗತಿಕವಾಗಿ ಸುಮಾರು ೨,೪೦,೦೦೦ ಕ್ಕೂ ಹೆಚ್ಚು ಜನರನ್ನು ಬಲಿ ಪಡೆದುಕೊಂಡಿದೆ. ವಿಶ್ವದಾದ್ಯಂತ ೩೪ […]

ಉತ್ತರ ಕೊರಿಯಾ :ತೀವ್ರ ಅನಾರೋಗ್ಯ, ಜೀವನ್ಮರಣ ಹೋರಾಟ ಮತ್ತು ನಿಗೂಢ ಕಣ್ಮರೆ ಸುದ್ದಿಗಳಿಂದಾಗಿ ಭಾರೀ ಚರ್ಚೆಗೆ ಕಾರಣರಾಗಿದ್ದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಕಿಮ್ ಹಠಾತ್ ಪ್ರತ್ಯಕ್ಷರಾಗಿರುವುದರಿಂದ ಎಲ್ಲ ವದಂತಿಗಳು ಮತ್ತು ಊಹಾಪೋಹಾಗಳಿಗೆ ತೆರೆ ಬಿದ್ದಂತಾಗಿದೆ. ಕಳೆದ ಮೂರು ವಾರಗಳಿಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಬಗ್ಗೆ ಕೆಲವು ಸುದ್ದಿಗಳು ವ್ಯಾಪಕವಾಗಿ ಹಬ್ಬಿತ್ತು. ಅವರು ಸರ್ಜರಿಗೆ ಒಳಗಾದ ಬಳಿಕ ಕೋಮಾ ಸ್ಥಿತಿಯಲ್ಲಿದ್ದಾರೆ ಎಂದು ಒಂದು […]

ಮಧ್ಯಪ್ರದೇಶ:ಮದುವೆ ಮಾಡಿಸಲು ಲಾಕ್‌ಡೌನ್ ಕಾರಣದಿಂದ ಪುರೋಹಿತರು ಸಿಕ್ಕಿಲ್ಲ ಎಂದು ಪೋಲಿಸ್ ಅಧಿಕಾರಿಯೇ ಪೌರೋಹಿತ್ಯ ವಹಿಸಿದ್ದಾರೆ. ಈ ಘಟನೆ ಮಧ್ಯಪ್ರದೇಶದ ನರಸಿಂಹಪುರ ಜಿಲ್ಲೆಯಲ್ಲಿ ನಡೆದಿದೆ. ಲಾಕ್‌ಡೌನ್ ಪಾಲಿಸುವುದಕ್ಕೆ ಪೋಲಿಸ್ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಇದೇ ಕಾರಕ್ಕೆ ಮಹಿಳಾ ಪಿಎಸ್‌ಐಗೆ ಪೌರೋಹಿತ್ಯ ವಹಿಸುವು ಅನಿವಾರ್ಯವಾಗಿತ್ತು. ಈಲ್ಲೆಯ ಶ್ರೀನಗರದ ಲಕ್ಮಣ್ ಚೌಧರಿ ಹಾಗೂ ಇತ್ವಾರಾ ಬಜಾರ್‌ನ ರುತು ಚೌಧರಿಗೆ ವಿವಾಹ ನಿಶ್ಚಯವಾಗಿತ್ತು. ಅವರು ಸ್ಥಳೀಯ ಆಡಳಿತದಿಂದ ಜೋಟೇಶ್ವರದ ಪಾರ್ವತಿ ದೇವಸ್ಥಾನದಲ್ಲಿ ಮದುವೆಗೆ ಅನುಮತಿ ಪಡೆದಿದ್ದರು. ಆದ್ರೆ […]

ಮಹಾರಾಷ್ಟ್ರ: ದೇಶದಲ್ಲಿ ಡೆಡ್ಲಿ ವೈರಸ್ ಕೊರೊನಾ ಆರ್ಭಟ ಜೋರಾಗಿದೆ. ಅತಿ ಹೆಚ್ಚು ಪ್ರಕರಣ ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಿವೆ. ಇದರ ಮಧ್ಯೆ ಅಲ್ಲಿನ ಸರ್ಕಾರ ಮಹತ್ವದ ಆದೇಶ ಹೊರಹಾಕಿದೆ. ರಾಜ್ಯದಲ್ಲಿನ ಎಲ್ಲರಿಗೂ ಉಚಿತ ಆರೋಗ್ಯ ವಿಮೆ ಮಾಡಿಸಲು ನಿರ್ಧಾರ ಕೈಗೊಂಡಿರುವ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ, ಮಹಾತ್ಮ ಜ್ಯೋತಿಬಾ ಪುಲೆ ಜನ್ ಆರೋಗ್ಯ ಯೋಜನೆ ಅಡಿ ಎಲ್ಲರಿಗೂ ಉಚಿತವಾಗಿ ಚಿಕಿತ್ಸೆ ನೀಡಲು ಮುಂದಾಗಿದೆ. ನಿನ್ನೆ ನಡೆದ ಸಚಿವ ಸಂಪುಟದಲ್ಲಿ ಈ ಮಹತ್ವದ ನಿರ್ಧಾರ […]

Advertisement

Wordpress Social Share Plugin powered by Ultimatelysocial