ಬೆಂಗಳೂರು: ಪಾದರಾಯನಪುರದಲ್ಲಿ‌ ಗಲಭೆ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರ ಕೊರೊನಾ ತಪಾಸಣೆಯ ಫಲಿತಾಂಶ ಇಂದು ಕೈ ಸೇರುವ ಸಾಧ್ಯತೆ ಇದೆ. ಪೊಲೀಸ್ ಸಿಬ್ಬಂದಿ, ಗಲಾಟೆ ಪ್ರಕರಣ ಆರೋಪಿಗಳ ಪತ್ತೆ ಕರ್ತವ್ಯದಲ್ಲಿ ತೊಡಗಿದ್ದರು.  ಬಂಧನದ ಬಳಿಕ ರಾಮನಗರ ಜೈಲಿನಲ್ಲಿ ಇರಿಸಿದ್ದ ವೇಳೆ ಐವರು ಆರೋಪಿಗಳಲ್ಲಿ ಸೋಂಕು ಇರೋದು ದೃಢಪಟ್ಟಿತ್ತು. ಹೀಗಾಗಿ ಕಿಡಿಗೇಡಿಗಳ ಪತ್ತೆಗೆ ಶ್ರಮಿಸಿದ್ದ ಪಶ್ಚಿಮ, ಕೇಂದ್ರ, ಉತ್ತರ ವಿಭಾಗ ಹಾಗೂ ಸಿಸಿಬಿ ಪೊಲೀಸರನ್ನ ಕೊರೊನಾ ತಪಾಸಣೆಗೆ ಒಳಪಡಿಸಲಾಗಿತ್ತು. ಮೈಸೂರು ರಸ್ತೆಯ ಸಿಎಆರ್ […]

ತಿರುವನಂತಪುರಂ: ಕೊರೊನಾ ಸೋಂಕು ಹರಡದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂದ್ರೆ ಜನ ಈ ಬಗ್ಗೆ ಹೆಚ್ಚು ಗಮನ ಕೊಡ್ತಿಲ್ಲ. ಹೀಗಾಗಿ ಕೇರಳದ ತನ್ನೀರ್ ಮುಕ್ಕೋಮ್ ಅನ್ನೋ ಗ್ರಾಮದಲ್ಲಿ ಮನೆಯಿಂದ ಯಾರೇ ಹೊರಬಂದ್ರೂ ಕೊಡೆಯೊಂದನ್ನ ಹಿಡಿದುಕೊಂಡೇ ಬರೋದನ್ನ ಕಡ್ಡಾಯಗೊಳಿಸಿದೆ. ಈ ಮೂಲಕ ಗ್ರಾಮದಲ್ಲಿ ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳಲು ಪ್ಲಾನ್ ಮಾಡಲಾಗಿದೆ. ಇದರ ಫೋಟೋವನ್ನ ಕೇರಳ ಹಣಕಾಸು ಸಚಿವ ಥಾಮಸ್ ಐಸಾಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕೊಡೆಗಳನ್ನ ಸಬ್ಸಿಡಿ ದರದಲ್ಲಿ ನೀಡಲಾಗಿದೆ ಅಂತ […]

ರಿಯಾಧ್: ಅಪ್ರಾಪ್ತರಾಗಿದ್ದಾಗ ನಡೆಸಿದ ಅಪರಾಧಗಳಿಗಾಗಿ ಯಾವುದೇ ವ್ಯಕ್ತಿಗೆ ಸೌದಿ ಅರೇಬಿಯಾ ಇನ್ನು ಮುಂದೆ ಮರಣದಂಡನೆ ವಿಧಿಸುವುದಿಲ್ಲ ಎಂದು ಸರಕಾರದ ಮಾನವ ಹಕ್ಕುಗಳ ಸಂಸ್ಥೆಯ ದೊರೆ ಸಲ್ಮಾನ್ ಅವರ ರಾಜಾಜ್ಞೆಯನ್ನು ಹೊರಡಿಸಿದೆ. ಈ ರಾಜಾಜ್ಞೆಯಂತೆ ಅಪ್ರಾಪ್ತರಿರುವಾಗ ಅಪರಾಧವೆಸಗಿದವರಿಗೆ ಮರಣದಂಡನೆ ವಿಧಿಸದೆ ಹತ್ತು ವರ್ಷ ಮೀರದ ಸೆರೆವಾಸ ಶಿಕ್ಷೆಯನ್ನು ವಿಧಿಸಲಾಗುವುದು. ಈ ಅವಧಿಯನ್ನು ಅವರು ಬಾಲಾಪರಾಧಿಗಳ ಕೇಂದ್ರಗಳಲ್ಲಿ ಕಳೆಯಬೇಕಿದೆ ಎಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಅವ್ವದ್ ಅಲವ್ವದ್ ಹೇಳಿದ್ದಾರೆ. ಇರಾನ್ ಮತ್ತು […]

ಕೊರೊನಾ ಪರೀಕ್ಷೆಗಾಗಿ ಚೀನಾದಿಂದ ಭಾರತಕ್ಕೆ ಬಂದ ವೈದ್ಯಕೀಯ ಸಲಕರಣೆಗಳು ನಕಲಿಯಾದವು, ಮತ್ತು ಅವುಗಳು ರೋಗ ಪರೀಕ್ಷೆಯಲ್ಲಿ ನಂಬಲರ್ಹವಾದ ಫಲಿತಾಂಶವನ್ನು ತೋರಿಸುತ್ತಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿದ್ದವು. ಇದನ್ನ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಕೂಡ ಗಂಭೀರವಾಗಿ ಪರಿಗಣಿಸಿ ಚೀನಾದಿಂದ ಬಂದ ಪರೀಕ್ಷಾ ಸಾಧನಗಳು ಬಳಕೆಗೆ ಯೋಗ್ಯವೋ ಅಲ್ಲವೋ ಎನ್ನುವ ಬಗ್ಗೆ ಪರೀಕ್ಷೆಗಳನ್ನು ನಡೆಸುತ್ತಲೇ ಇತ್ತು. ಇದೀಗ   ICMR ರಾಜ್ಯ ಸರ್ಕಾರಗಳಿಗೆ ಆ್ಯಂಟಿ ಬಾಡಿ ಬ್ಲಡ್ ಟೆಸ್ಟ್ಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಹೊರಡಿಸಿದ್ದು  […]

ಚಿನ್ನದ ಹುಡುಗಿ ಹಿಮಾ ದಾಸ್‌ಗಾಗಿಯೇ ಆಡಿಡಾಸ್ ಕಂಪನಿ ವಿಶೇಷವಾಗಿ ಅವರ ಹೆಸರಿರುವ ಬೂಟುಗಳನ್ನ ತಯಾರಿಸುತ್ತಿದೆ. ಹಿಮಾ, ತಮ್ಮ ಮೊದಲ ನ್ಯಾಷನಲ್ಸ್ನಲ್ಲಿ ಬೂಟುಗಳ ಮೇಲೆ ತಾವೇ ಕೈಯಿಂದ ಆಡಿಡಾಸ್ ಅಂತ ಬರೆದುಕೊಂಡಿದ್ದರಂತೆ. ಈಗ ಕಂಪನಿಯೇ ಸ್ವತಃ ತನಗಾಗಿ ತನ್ನ ಹೆಸರಿನಲ್ಲಿ ಶೂ ತಯಾರಿಸುತ್ತಿದೆ ಅಂತ ಹೇಳಿದ್ದಾರೆ. ನಮ್ಮ ಅದೃಷ್ಟ ಯಾವಾಗ ಬದಲಾಗುತ್ತೆ ಅಂತ ಯಾರಿಂದಲೂ ಊಹಿಸಲು ಸಾಧ್ಯವಿಲ್ಲ ಅಂತ ಕ್ರಿಕೆಟರ್ ಸುರೇಶ್ ರೈನಾ ಜೊತೆಗಿನ ಲೈವ್ ಚಾಟ್‌ನಲ್ಲಿ ಮಾತಾಡುವಾಗ ಹಿಮಾ  ಹೇಳಿದ್ದಾರೆ. […]

ಪುಣೆ : ಪುಣೆಯ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ಯುವಾಗ ಕೋವಿಡ್ -೧೯ ಶಂಕಿತ ನಾಲ್ವರು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಓರ್ವ ಮಹಿಳೆ ಸೇರಿದಂತೆ ನಾಲ್ಕು ಜನರೂ ಕೊರೊನಾ ವೈರಸ್ ಸೋಂಕಿತನ ದ್ವಿತೀಯ ಸಂಪರ್ಕಿಗಳಾಗಿದ್ದರು. ಅವರನ್ನು ಆಂಬ್ಯುಲೆನ್ಸ್ನಲ್ಲಿ ಸಿಂಹಗಢ ರಸ್ತೆ ಪ್ರದೇಶದಲ್ಲಿನ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ಯಲಾಗುತ್ತಿತ್ತು’ ಎಂದು ಸಿಂಹಗಢ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕ್ವಾರೆಂಟೈನ್ ಕೇಂದ್ರದ ಬಳಿ ಆಂಬ್ಯುಲೆನ್ಸ್ ನಿಲ್ಲಿಸಿದ್ದಾಗ, ನಾಲ್ವರು ತಪ್ಪಿಸಿಕೊಂಡು ಓಡಿಹೋದರು’ ಎಂದು ಪೊಲಿಸರು ತಿಳಿಸಿದ್ದಾರೆ.ತಪ್ಪಿಸಿಕೊಂಡವರನ್ನು ಪತ್ತೆ […]

ನ್ಯೂಯಾರ್ಕ್: ಕೊರೋನಾ ವೈರಸ್ ಕುರಿತಂತೆ ಸಾಧ್ಯವಾದಷ್ಟೂ ಮಟ್ಟಿಗೆ ಹರಡಿರುವ ತಪ್ಪು ಮಾಹಿತಿಗೆ ಸಾಮಾಜಿಕ ಜಾಲತಾಣಗಳೇ ಮೂಲ. ಆನ್ನೆನ್ಬರ್ಗ್ ವಿಜ್ಞಾನ ಸಮೀಕ್ಷೆಯಲ್ಲಿ ಮಾರ್ಚ್ ತಿಂಗಳಲ್ಲಿ ಕೋವಿಡ್-೧೯ ಗೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಿ, ಅಮೆರಿಕದ ೧,೦೦೮ ವಯಸ್ಕರನ್ನು ಪ್ರಶ್ನೆ ಕೇಳಲಾಗಿತ್ತು. ಈ ಪೈಕಿ ಪ್ರತಿಕ್ರಿಯೆ ನೀಡಿರುವವರ ಪೈಕಿ ಹಲವರು ಕೋವಿಡ್-೧೯ ಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ಲಭ್ಯವಾಗಲು ಸಾಮಾಜಿಕ ಜಾಲತಾಣಗಳು ಹಾಗೂ ಕೆಲವು ಮಾಧ್ಯಮಗಳೂ ಕಾರಣ ಎಂಬುದನ್ನು ಯೂನಿವರ್ಸಿಟಿ ಆಫ್ ಪೆನ್ಸಲ್ವೇನಿಯಾ ಹಾಗೂ […]

ನವದೆಹಲಿ: ಲಾಕ್‌ಡೌನ್ ಹಿನ್ನಲೆಯಲ್ಲಿ  ಕೌಟುಂಬಿಕ ಹಿಂಸಾಚಾರ ಪ್ರಕರಣಗಳ ಪ್ರಮಾಣ ಹೆಚ್ಚಾಗುತ್ತಿರುವುದರ ಬಗ್ಗೆ ದೆಹಲಿ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಕೌಟುಂಬಿಕ ಹಿಂಸೆಗೆ ಸಂಬಂಧಿಸಿದ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಹೈಕೋರ್ಟ್ ಆದೇಶ ನೀಡಿದೆ. ಸಹಾಯವಾಣಿ ಮತ್ತು ವಾಟ್ಸಾಪ್ ಸಂಖ್ಯೆಗಳ ಮೂಲಕ ಸಂತಸ್ತçರಿಗೆ ಶೀಘ್ರವಾಗಿ ದೂರು ನೀಡಲು ಸಹಾಯವಾಗಬೇಕು. ಈನಿಟ್ಟಿನಲ್ಲಿ ಅಧಿಕಾರಿಗಳು ತ್ವರಿತವಾಗಿ ಕ್ರಮಕೈಗೊಳ್ಳಬೇಕು ಎಂದು ದೆಹಲಿ ಮುಖ್ಯ ನ್ಯಾಯಾಲಯ ಆದೇಶಿಸಿದೆ. ಕೌಟುಂಬಿಕ ಹಿಂಸೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಒಳಗಾದವರನ್ನು […]

ಲಂಡನ್: ಲಾಕ್‌ಡೌನ್ ಜಾರಿ ಆದಾಗಿನಿಂದ ಇಡೀ ಜಗತ್ತು ಸ್ಥಬ್ಧಗೊಂಡಂತೆಯೇ ಇದೆ. ಬಹುತೇಕ ಕಡೆ ರಸ್ತೆಗಳು ಖಾಲಿ ಹೊಡೀತಿವೆ. ಜನರು ತಮ್ಮ ಮನೆಗಳಲ್ಲೇ ಇದ್ದಾರೆ. ಲಾಕ್‌ಡೌನ್‌ನಿಂದಾಗಿ ಕೌಟುಂಬಿಕ ಕಲಹಗಳು ಹೆಚ್ಚಾಗಿವೆ ಅನ್ನೋ ವರದಿಗಳು ಕೂಡ ಇದೇ ವೇಳೆ ಹೊರ ಬಿದ್ದಿವೆ. ಲಂಡನ್‌ವೊಂದರಲ್ಲೇ ೬ ವಾರಗಳಲ್ಲಿ ಕೌಟುಂಬಿಕ ಕಲಹದ ಕೇಸ್‌ನಲ್ಲಿ ೪,೦೯೩ ಮಂದಿಯನ್ನ ಬಂಧಿಸಲಾಗಿದೆ. ಅಲ್ಲಿ ಲಾಕ್‌ಡೌನ್ ಜಾರಿಯಾಗಿ ೬ ವಾರಗಳಲ್ಲಿ (ಮಾ. ೯ ರಿಂದ ಏ. ೧೯ರವರೆಗೆ) ಇಷ್ಟು ಜನರನ್ನ ಬಂಧಿಸಲಾಗಿದೆ. […]

ಹೊಸದಿಲ್ಲಿ: ದೇಶದಲ್ಲಿ ಕೊರೋನ ವೈರಸ್ ಹರಡುವುದನ್ನು ತಡೆಗಟ್ಟಲು ಕೇಂದ್ರ ಜಾರಿಗೊಳಿಸಿರುವ ಲಾಕ್‌ಡೌನ್ ಹಾಟ್‌ಸ್ಪಾಟ್‌ಗಳಲ್ಲಿ ಮುಂದುವರಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ನಡೆದ ವಿಡಿಯೋ ಸಮ್ಮೇಳನದಲ್ಲಿ ಮುಖ್ಯಮಂತ್ರಿಗಳಿಗೆ ತಿಳಿಸಿದರು. ಕೋವಿಡ್ -೧೯ಗೆ ಸಂಬಂಧಿಸಿ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಂವಾದ ನಡೆಸಿದ ಪಿಎಂ ಮೋದಿ ಮೇ ೩ಕ್ಕೆ ಎರಡನೇ ಹಂತದ ಲಾಕ್ ಡೌನ್ ಕೊನೆಗೊಳ್ಳಲಿದ್ದು, ಬಳಿಕ ದೇಶಾದ್ಯಂತ ಲಾಕ್‌ಡೌನ್ ವಿಸ್ತರಿಸುವ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

Advertisement

Wordpress Social Share Plugin powered by Ultimatelysocial