ವಾಷಿಂಗ್ಟನ್: ಕೊರೋನಾ ಲಾಕ್ ಡೌನ್ ಕಾರಣದಿಂದ ಅನೇಕ ಹಿರಿಯ ನಾಗರಿಕರು, ಮಕ್ಕಳು, ಮಹಿಳೆಯರು ಬಹಳ ನೋವು ಅನುಭವಿಸುತ್ತಿರುತ್ತಾರೆ. ಹೊರಗೆ ಓಡಾಡಲು ಸಾಧ್ಯವಾಗುವುದಿಲ್ಲ, ತಮ್ಮ ಪ್ರೀತಿಪಾತ್ರರನ್ನು ನೋಡಲು ಆಗುವುದಿಲ್ಲ ಎಂದು ನೊಂದುಕೊಳ್ಳುತ್ತಿರುವರಿಗೆ ಖುಷಿಪಡಿಸಲು ಪಝಲ್, ಕಲರ್ ಪುಸ್ತಕ, ಕಲರ್ ಪೆನ್ಸಿಲ್ ಗಳನ್ನು ಪ್ಯಾಕ್ ಮಾಡಿ ಕಳುಹಿಸುತ್ತಿದ್ದಾರೆ ಹಿತಾ ಗುಪ್ತಾ. ಭಾರತೀಯ ಮೂಲದ ೧೫ ವರ್ಷದ ಹಿತಾ ಗುಪ್ತ ಅಮೆರಿಕದಲ್ಲಿ ನರ್ಸಿಂಗ್ ಹೋಂಗಳಲ್ಲಿರುವ ನೂರಾರು ಹಿರಿಯರು ಮತ್ತು ಮಕ್ಕಳಿಗೆ ಗಿಫ್ಟ್ ಪ್ಯಾಕ್ ಮತ್ತು […]

ನವದೆಹಲಿ: ಕೊರೊನಾ ಹಿನ್ನೆಲೆಯಲ್ಲಿ ಸಾಕಷ್ಟು ಹಣದ ಅವಶ್ಯಕತೆ ಇದೆ. ಖಾಸಗಿಯವರ ಆರ್ಥಿಕ ನೆರವಿನ ಹೊರತಾಗಿ ಕೇಂದ್ರದ ಎಲ್ಲಾ ಸಚಿವರು ಹಾಗೂ ಸಂಸದರ ವೇತನದಲ್ಲಿ ಶೇಕಡಾ ೩೦ರಷ್ಟು ಕಡಿತ ಮಾಡಲಾಗಿದೆ. ಇದೀಗ ಕೇಂದ್ರ ಸರ್ಕಾರಿ ನೌಕರರ ಡಿಎ ಹಾಗೂ ಪಿಂಚಣಿದಾರರ ಡಿಆರ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಈ ಭತ್ಯೆಗಳನ್ನು ೨೦೨೦ರ ಜನವರಿ ಒಂದರಿಂದ ೨೦೨೧ರ ಜುಲೈ ೦೧ ರವರೆಗೆ ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದಾಗಿ ತಿಳಿಸಿದೆ. ಕಳೆದ ಮಾರ್ಚ್ನಲ್ಲಿ […]

ನವದೆಹಲಿ : ಕೊರೊನಾ ಪೀಡಿತರಿಗೆ  ಕೇಂದ್ರ ಸರ್ಕಾರ ಸೀಮಿತ ಪ್ರಮಾಣದಲ್ಲಿ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಅನುಮತಿ ನೀಡಿದೆ. ದೆಹಲಿಯಲ್ಲಿ ಈವರೆಗೆ ನಾಲ್ವರು ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಿಲಾಗಿದ್ದು, ಇದಕ್ಕೆ ಧನಾತ್ಮಕ ಸ್ಪಂದನೆ ವ್ಯಕ್ತವಾಗಿದೆ ಎಂದು ಸಿಎಂ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯ ಲೋಕ್ ನಾಯಕ್ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಯಲ್ಲಿ ಕೆಲ ದಿನಗಳ ಹಿಂದೆ ನಾಲ್ವರು ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ […]

ಬೆಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಎಲ್ಲಾ ಮೆಡಿಕಲ್ ಶಾಪ್‌ಗಳು ಹಾಗೂ ಆಸ್ಪತ್ರೆಯ ಮೆಡಿಕಲ್ಸ್ನಲ್ಲಿ ಜ್ವರ, ನೆಗಡಿ ಹಾಗೂ ಕೆಮ್ಮಿಗೆ ಔಷಧಿ ಪಡೆಯುವವರ ವಿವರ ಪಡೆಯಬೇಕು ಎಂದು ಆದೇಶಿಸಲಾಗಿದೆ. ಈ ಸಂಬಂಧ ಇಂದು ಹೊಸ ಅಧಿಸೂಚನೆ ಜಾರಿ ಮಾಡಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಪ್ಯಾರಾಸಿಟಮಲ್, ಸಿರಪ್ ಹಾಗೂ ನೆಗಡಿ ಮಾತ್ರೆಗಳನ್ನು ಪಡೆದವರ ವಿವರ ಪಡೆಯಬೇಕು. ಎಲ್ಲರನ್ನ ಪತ್ತೆ ಮಾಡಲು ಅಡ್ರೆಸ್, ಫೋನ್ ನಂಬರ್ ಮತ್ತು ಲ್ಯಾಂಡ್ ಮಾರ್ಕ್ […]

ಕೊರೊನಾ ವಿರುದ್ಧ ಹೋರಾಡುತ್ತಿರುವವರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಸಹಾಯ ಮಾಡುತ್ತಾ, ಅವರ ಕೆಲಸವನ್ನು ಹುರಿದುಂಬಿಸುತ್ತಾ ಬಂದಿರುವ ಗ್ಲೋಬಲ್ ಐಕಾನ್ ಪ್ರಿಯಾಂಕ ಚೋಪ್ರಾ ಈಗ ೧೦,೦೦೦ ಆರೋಗ್ಯ ಕಾರ್ಯಕರ್ತರಿಗೆ ಪಾದರಕ್ಷೆ ನೀಡುವ ಮೂಲಕ ಮತ್ತೆ ಅವರನ್ನು ಬೆಂಬಲಿಸುತ್ತಿದ್ದಾರೆ. ಹರಿಯಾಣ, ಕೇರಳ, ಮಹಾರಾಷ್ಟ್ರ ಮತ್ತು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಆರೋಗ್ಯ ಕಾರ್ಯಕರ್ತರಿಗೆ ಶೂಸ್‌ಗಳನ್ನ ದೇಣಿಗೆಯಾಗಿ ನೀಡಿದ್ದಾರೆ. ಒಟ್ಟು ೧೦,೦೦೦ ಜೋಡಿ ಪಾದರಕ್ಷೆಯನ್ನು ನೀಡಿದ್ದು, ಈ ಬಗ್ಗೆ ತಮ್ಮ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. […]

ಬೀಜಿಂಗ್: ವಿಶ್ವ ಆರೋಗ್ಯ ಸಂಸ್ಥೆಗೆ ಆರ್ಥಿಕ ನೆರವು ನೀಡುವುದನ್ನು ಅಮೇರಿಕಾ ಸ್ಥಗಿತಗೊಳಿಸಿದ ಬೆನ್ನಲ್ಲೇ ಚೀನಾ ೩೦ ಮಿಲಿಯನ್ ಡಾಲರ್ ಅನುದಾನ ನೀಡುವುದಾಗಿ ಘೋಷಿಸಿದೆ. ಕೋವಿಡ್-೧೯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಸಮುದಾಯವನ್ನು ಎಚ್ಚರಿಸುವಲ್ಲಿ ವಿಫಲವಾಗಿದೆ ಎಂಬ ಕಾರಣಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದಿಂದ ಡಬ್ಲ್ಯು ಹೆಚ್ ಒಗೆ ನೀಡಲಾಗುತ್ತಿದ್ದ ಅನುದಾನವನ್ನು ಸ್ಥಗಿತಗೊಳಿಸಿದ್ದರು. ಈ ಬಗ್ಗೆ ವ್ಯಾಪಕ ಟೀಕೆಗಳೂ ವ್ಯಕ್ತವಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಚೀನಾ, ಅಮೆರಿಕದ […]

ಚಂಡೀಘಡ: ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ವೈದ್ಯರು, ಪೊಲೀಸರಂತೆ ಪತ್ರಕರ್ತರು ಕೂಡಾ ಹಗಲಿರುಳು ಸಮಾಜದ ಏಳ್ಗೆಗಾಗಿ ಶ್ರಮಿಸುತ್ತಿದ್ದಾರೆ. ಇದನ್ನು ಮನಗಂಡ ಹರಿಯಾಣ ಸರ್ಕಾರವು ಪ್ರತಿಯೊಬ್ಬ ಪತ್ರಕರ್ತರಿಗೆ ೧೦ ಲಕ್ಷ ರೂಪಾಯಿ ವಿಮೆಯನ್ನು ಘೋಷಿಸಿದೆ. ಭಾರತ ಲಾಕ್ ಡೌನ್ ಮಧ್ಯೆಯೂ ಕೊರೊನಾ ವೈರಸ್ ಕುರಿತು ಸುದ್ದಿಗಳನ್ನು ಮಾಡುವುದಕ್ಕಾಗಿ ಶ್ರಮಿಸುತ್ತಿರುವ ಪತ್ರಕರ್ತರಿಗೆ ಸರ್ಕಾರದಿಂದ ೧೦ ಲಕ್ಷ ರೂಪಾಯಿ ವಿಮೆ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತಿಳಿಸಿದ್ದಾರೆ.

ಗ್ಯಾಂಗ್‌ಟಾಕ್: ಕರೋನವೈರಸ್‌ನಿಂದಾಗಿ ಸಿಕ್ಕಿಂ ಪ್ರವಾಸೋದ್ಯಮ ಕ್ಷೇತ್ರಕ್ಕೆ ತೀವ್ರ ಪೆಟ್ಟು ಬಿದ್ದಿದೆ. ಏಕೆಂದರೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಈ ವರ್ಷದ ಕೈಲಾಸ ಮಾನಸಸರೋವರ ಯಾತ್ರೆಯನ್ನು ರದ್ದುಗೊಳಿಸಲಾಗಿದೆ. ಈ ಕುರಿತು ಸಿಕ್ಕಿಂ ಪ್ರವಾಸೋದ್ಯಮ ಸಚಿವ ಬಿ ಎಸ್ ಪಂಥ್ ಮಾಹಿತಿ ನೀಡಿದ್ದು, ಈ ‘ಬಾರಿ ಮಾನಸ ಸರೋವರ ಯಾತ್ರೆಯೂ ಇರುವುದಿಲ್ಲ ಹಾಗೂ ನಾಥು ಲಾ ಪಾಸ್ (ರಸ್ತೆ) ಮೂಲಕ ಭಾರತ ಮತ್ತು ಚೀನಾ ನಡುವಿನ ಗಡಿ ವ್ಯಾಪಾರ ಈ ವರ್ಷ ನಡೆಯುವುದಿಲ್ಲ’ ಎಂದಿದ್ದಾರೆ. ಪ್ರತಿ […]

ಯುಎಸ್ಎ: ಕೊರೊನಾ ವೈರಸ್ ನಿಂದ ಲಾಕ್ ಡೌನ್ ನಲ್ಲಿಯೂ ಸಹ ಲಾಭ ಪಡೆದಿರುವ ಕಂಪನಿಗಳು ಕೇವಲ ಬೆರಳೆಣಿಕೆಯಷ್ಟೇ. ನೆಟ್ಫ್ಲಿಸ್ ನಲ್ಲಿನ ಹೊಸ ಹಾಗೂ ವಿಭಿನ್ನ ಕಂಟೆಂಟ್ ನಿಂದ ಓವರ್ ದಿ ಟಾಪ್ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಅತಿ ಹೆಚ್ಚು ಚಂದಾದಾರರನ್ನು ಕೇವಲ ಒಂದೇ ತಿಂಗಳಲ್ಲಿ ದುಪ್ಪಟ್ಟಾಗಿಸಿರುವುದು ಅಚ್ಚರಿಯ ವಿಷಯ. ಸುಮಾರು ೭೦ ಲಕ್ಷ ಹೊಸ ಚಂದಾದಾರರು ಸೇರ್ಪಡೆ ಆಗುವುದಾಗಿ  ಅಂದಾಜು ಮಾಡಿದಾರರು ಸಹ ಲಾಕ್ ಡೌನ್ ಪರಿಸ್ಥಿತಿಯಿಂದ ಸುಮಾರು ೧ ಕೋಟಿ […]

ದೆಹಲಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಕ್ಷಾಮಾ, ಬರಗಾಲ ಸಂಭವಿಸಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ. ಎಲ್ಲಾ ದೇಶಗಳು  ಈಗಲೇ ಎಚ್ಚೆತ್ತುಕೊಂಡರೆ ಒಳಿತು ಇಲ್ಲದಿದ್ದರೆ ಭವಿಷ್ಯದಲ್ಲಿ ಹಸಿವಿನ ಸಾಂಕ್ರಾಮಿಕ ರೋಗಗಳು ಎದುರಿಸಬೇಕಾಗುತ್ತದೆ ಎಂದು ತಿಳಿಸಿದೆ. ವಿಶ್ವ ಆಹಾರ ಯೋಜನೆಗಳ ಕಾರ್ಯನಿರ್ವಾಹಕ ನಿರ್ದೇಶಕ ಡೇವಿಡ್ ಬಿಯಾಸ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವರ್ಚುವಲ್ ಅಧಿವೇಶನದಲ್ಲಿ ಈ ಬಗ್ಗೆ ವಿವರ ನೀಡಿದ್ದಾರೆ. ಕ್ಷಾಮ ಎದುರಾಗದಂತೆ ಈಗಿನಿಂದಲೇ ನಾವು ಸಿದ್ಧತೆಗಳನ್ನು ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು. ಜಗತ್ತಿನಾದ್ಯಂತ […]

Advertisement

Wordpress Social Share Plugin powered by Ultimatelysocial