ಮುಂಬೈ: ಕೊರೊನಾ ಹಿನ್ನೆಲೆಯಲ್ಲಿ ಸುದೀರ್ಘ ಲಾಕ್‌ಡೌನ್‌ನಿಂದ  ಆರ್ಥಿಕ ಹೊಡೆತಕ್ಕೆ ಸಿಲುಕಿರುವ ವಿವಿಧ ವಲಯಗಳ ರಕ್ಷಣೆಗೆ ಮುಂದಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್(RBI) ಮ್ಯೂಚುಲ್ ಫಂಡ್‌ಗಳಿಗೆ ತನ್ನ ವಿಶೇಷ ಸೌಲಭ್ಯವನ್ನು  ವಿಸ್ತರಿಸಿದೆ. ಮ್ಯೂಚುಲ್ ಫಂಡ್‌ಗಳಿಗಾಗಿ ೫೦ ಸಾವಿರ ಕೋಟಿ ರೂಗಳ ವಿಶೇಷ ಸೌಲಭ್ಯ(ಸ್ಪೆಷಲ್ ಲಿಕ್ವಿಡಿಟಿ ಫೆಸಿಲಿಟಿ)ವನ್ನು ಇಂದು ಘೋಷಿಸಿದೆ. ಫ್ಲಾಂಕ್ಲಿನ್ ಟೆಂಪ್ಲೇಷನ್ ಸಂಸ್ಥೆ ತನ್ನ ಆರು ಮ್ಯೂಚಯಲ್ ಫಂಡ್ ಸೌಲಭ್ಯವನ್ನು ರದ್ದುಗೊಳಿಸಿದ ಬೆನ್ನಲ್ಲೇ ಆರ್‌ಬಿಐಯ ಈ ಸೌಲಭ್ಯ ಪ್ರಕಟಿಸಿರುವುದು ಅನೇಕ ಸಂಸ್ಥೆಗಳಿಗೆ ವರದಾನವಾಗಿದೆ. […]

ನವದೆಹಲಿ: ಮೇ ೩ಕ್ಕೆ ಎರಡನೇ ಹಂತದ ಲಾಕ್‌ಡೌನ್ ಮುಕ್ತಾಯವಾಗಲಿದೆ. ಇದಾದ ಬಳಿಕ ಏನು ಮಾಡಬೇಕು ಅನ್ನೋ ಬಗ್ಗೆ ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದರು. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಕೊರೊನಾ ಕಡಿಮೆ ಇರುವುದು ನಿಜ. ಆದರೂ ಲಾಕ್‌ಡೌನ್ ನಿಯಮಗಳನ್ನು ಯಾರೂ ಉಲ್ಲಂಘಿಸಬಾರದು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು. ಕೈಗಾರಿಕೆ, ಕೆಲವು ವಸ್ತುಗಳ ವ್ಯಾಪಾರ ವಹಿವಾಟು […]

ಹೈದರಾಬಾದ್: ಆಂಧ್ರಪ್ರದೇಶ ಸಂಸದ ಡಾ. ಸಂಜೀವ್ ಕುಮಾರ ಅವರ ಕುಟುಂಬದ ಆರು ಜನರಿಗೆ ಕೋವಿಡ್-೧೯ ಸೋಂಕು ತಗಲಿರುವುದು ಧೃಢಪಟ್ಟಿದೆ. ಅವರ ೮೦ವರ್ಷದ ತಂದೆ, ಹೆಂಡತಿ, ಇಬ್ಬರು ಸಹೋದರರು ಹಾಗೂ ಇನ್ನಿಬ್ಬರು ಸೋಂಕಿತರಾಗಿದ್ದಾರೆ. ಈ ಸಂಬಂಧ ಸುದ್ಧಿಗಾರರೊಂದಿಗೆ ಮಾತನಾಡಿದ ಸಂಜೀವ್ ಕುಮಾರ ಸೋಂಕು ಧೃಢಪಟ್ಟಿರುವ ಆರು ಜನರೂ ಸ್ಥಿರವಾಗಿದ್ದಾರೆ. ಅವರಿಗೆ ಯಾವುದೇ ತೊಂದರೆ ಕಾಣಿಸಿಕೊಂಡಿಲ್ಲ. ಎಲ್ಲರೂ ಕರ್ನೂಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಿಯಮದಂತೆ ಪ್ರತ್ಯೇಕ ವಾಸದಲ್ಲಿದ್ದಾರೆ. ನಾವು ಮುನ್ನೆಚ್ಚರಿಕೆ ಕ್ರಮಗಳನ್ನು […]

ಚೀನಾ: ಚೀನಾ ಸರ್ಕಾರವು ಸುಮಾರು ೮.೯ ಕೋಟಿ ಕಳಪೆ ಮಾಸ್ಕ್ಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚೀನಾದ ಮಾರುಕಟ್ಟೆ ಗುಣಮಟ್ಟ ನಿಯಂತ್ರಕರು ಶುಕ್ರವಾರದ ಹೊತ್ತಿಗೆ ಸುಮಾರ ೮.೯ ಕೋಟಿ ಮಾಸ್ಕ್ಗಳು, ೪ಲಕ್ಷಕ್ಕೂ ಹೆಚ್ಚಿನ ಕಳಪೆ ಗುಣಮಟ್ಟದ ರಕ್ಷಣಾ ಸಾಧನಗಳು ಹಾಗೂ ೭ಕೋಟಿಗೂ ಹೆಚ್ಚಿನ ಮೌಲ್ಯದ ನಿಷ್ಪçಯೋಜನಕಾರಿ ಸೋಂಕು ನಿವಾರಕಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಚೀನಾದ ಮಾರುಕಟ್ಟೆ ನಿಯಂತ್ರಣ ವಿಭಾಗದ ಉಪ ನಿರ್ದೇಶಕ ಗ್ಯಾನ್‌ಲಿನ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಚೀನಾ […]

ಇಂಡೋನೇಶಿಯಾ: ಕರೋನಾದಿಂದಾಗಿ ವೈದ್ಯರು ಮತ್ತು ನರ್ಸ್ ಗಳ ಅವಿರತ ಸೇವೆ ಅನನ್ಯ. ಇಲ್ಲೊಬ್ಬ ನರ್ಸ್ ಕರೋನಾ ರೋಗಿಗಳಿಗೆ ನೃತ್ಯ ಮಾಡಿ ರಂಜಿಸಿದ್ದಾರೆ. ಅದೂ ಸಹ ಶಾರುಖ್ ಖಾನ್ ರವರ ” ಬೋಲೇ ಚುಡಿಯ ಬೋಲೇ ಕಂಗನಾ” ಹಾಡಿಗೆ. ಈ ಹಾಡು ಭಾರತದಲ್ಲಿ ಅಷ್ಟೇ ಅಲ್ಲ ಇಡೀ ಪ್ರಪಂಚದಲ್ಲೇ ಪ್ರಸಿದ್ದ. ಸುಶಿ ಎನ್ನುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು  ಹಂಚಿಕೊಂಡಿದ್ದು, ಅದರಲ್ಲಿ ರೋಗಿಗಳು ಸಹ ನಗುತ್ತಾ , ಹಾಡು ಮತ್ತು […]

ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನ ಭದ್ರಕಾಳಿ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ೧೦೦ಕ್ಕೂ ಅಧಿಕ ಮನೆಗಳನ್ನು ಸುಟ್ಟು ಭಸ್ಮವಾಗಿದೆ ಎಂದು ತಿಳಿದು ಬಂದಿದೆ. ಅಗ್ನಿ ಅವಘಡದಿಂದ ಜೀವಕ್ಕೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ, ಆದರೆ ಆಸ್ತಿ-ಪಾಸ್ತಿಗೆ ಭಾರಿ ಪ್ರಮಾಣದಲ್ಲಿ ಹಾನಿಯುಂಟಾಗಿರುವುದಾಗಿ ತಿಳಿದುಬಂದಿದೆ. ಘಟನೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಶನಿವಾರ ಮುಂಜಾನೆ ೯.೩೦ ಕ್ಕೆ ಸರಿಯಾಗಿ ಈ ಘಟನೆ ಭೀಮವಾಡಿ ಸ್ಲಂ ನಲ್ಲಿ ನದೆದಿದೆ. ಕಾರ್ಯಾಚರಣೆಗೆ ಬಂದಿದ್ದ ಕೆಲವೊಂದು ಅಗ್ನಿ ಶಾಮಕ ದಳದವರಿಗೆ […]

ಚೀನಾ: ಜಾಗತಿಕ ಮಹಾಮಾರಿ ಕೊರೊನಾ ವೈರಸ್‌ನ ಉಗಮ ಸ್ಥಾನ ವುಹಾನ್‌ನ ಯಾವುದೇ ಆಸ್ಪತ್ರೆಯಲ್ಲೂ ಈಗ ಕೊರೊನಾ ವೈರಸ್‌ನ ಸೋಂಕಿತರಿಲ್ಲ. ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಏ. ೨೬ರ ಹೊತ್ತಿಗೆ ವುಹಾನ್‌ನಲ್ಲಿ ಯಾವುದೇ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿಲ್ಲ. ಪರಿಸ್ಥಿತಿಯನ್ನು ಈ ಹಂತಕ್ಕೆ ನಿಯಂತ್ರಿಸಲು ಶ್ರಮಿಸಿದ ವುಹಾನ್ ಮತ್ತು ಅಲ್ಲಿನ ಆರೋಗ್ಯ ಸಿಬ್ಬಂದಿಗೆ ಧನ್ಯವಾದಗಳು ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ ವಕ್ತಾರ ಮಿ ಫೆಂಗ್ ಹೇಳಿದ್ದಾರೆ.

ಮುಂಬೈ: ಯೆಸ್ ಬ್ಯಾಂಕ್- ಡಿಎಚ್ ಎಫ್ ಎಲ್ ವಂಚನೆ ಪ್ರಕರಣದಲ್ಲಿ ಆರೋಪಿಗಳಾದ ಡಿಎಚ್ ಎಫ್ ಎಲ್ ಪ್ರಮೋರ‍್ರಾದ ಕಪಿಲ್ ಹಾಗೂ ಧೀರಜ್ ವಾಧ್ವಾನ್ ಅವರನ್ನು ಸಿಬಿಐ ವಶಕ್ಕೆ ಪಡೆಯಲಾಗಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಭಾನುವಾರ ಹೇಳಿದ್ದಾರೆ. ಸಿಬಿಐ ತಂಡವು ಕಪಿಲ್ ಮತ್ತು ಧೀರಜ್ ವಾಧ್ವಾನ್ ಅವರನ್ನು ಕಸ್ಟಡಿಗೆ ಪಡೆದುಕೊಂಡಿದೆ. ಸತಾರಾ ಪೊಲೀಸರು ಅವರಿಗೆ ಎಲ್ಲ ಅಗತ್ಯ ನೆರವು ನೀಡಿದ್ದಾರೆ. ಲಿಖಿತವಾಗಿ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ […]

ದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ತಿಳಿಸುವ ಯಂತ್ರವನ್ನು ಐಐಟಿ ಸಂಶೋಧಕರು ತಯಾರಿಸಿದ್ದಾರೆ. ದೆಹಲಿ ಐಐಟಿಯ ಪ್ರೊಫೆಸರ್ ಅನೂಪ್ ಕೃಷ್ಣನ್ ಮತ್ತು ತಂಡ ಸೇರಿಕೊಂಡು ಪ್ರಕ್ರಿತಿ(pracriti) ವೆಬ್ ಆಧಾರಿತ ಡ್ಯಾಶ್‌ಬೋರ್ಡ್ಅನ್ನು ಸಿದ್ಧಪಡಿಸಿದ್ದಾರೆ. ಈ ಮೂಲಕ ಆರೋಗ್ಯ ಸಚಿವಾಲಯ, ಡಬ್ಲ್ಯೂಹೆಚ್‌ಒ, ಸರ್ಕಾರ ನೀಡಿದ ಮಾಹಿತಿ ಮೇರೆಗೆ ರಾಜ್ಯ ಹಾಗೂ ಜಿಲ್ಲೆಗಳನುಸಾರ ಕೊರೊನಾ ಸೋಂಕಿತರ ಪ್ರಮಾಣ ದರವನ್ನು ಪತ್ತೆ ಹಚ್ಚಬಹುದಾಗಿದೆ.  ಪ್ರಕ್ರಿತಿ ಎಂದರೆ ಪ್ರಿಡಿಕ್ಷನ್ ಅಂಡ್ ಅಸೆಸ್‌ಮೆಂಟ್ ಆಫ್ ಕೊರೊನಾ ಇನ್ಫೇಕ್ಷನ್ಸ್ ಅಂಡ್ […]

ತಮಿಳುನಾಡು: ಕೊರೊನಾ ಸೋಂಕು ತಡೆಗಟ್ಟಲು ತಮಿಳುನಾಡಿನ ಐದು ಮಹಾನಗರಗಳಾದ ಚೆನೈ, ಕೊಯಿಮತ್ತೂರು, ಮಧುರೈ, ಸೇಲಂ ಮತ್ತು ತಿರುಪ್ಪುರಗಳನ್ನು ಇಂದಿನಿಂದ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಪಳನಿಸ್ವಾಮಿ ಹೇಳಿದ್ದಾರೆ. ದಿನಸಿ ಅಂಗಡಿ, ತರಕಾರಿ ಮತ್ತು ಹಣ್ಣುಗಳ ಮಾರುಕಟ್ಟಗಳ ವ್ಯಾಪಾರ, ಸಾರ್ವಜನಿಕ ಸಂಚಾರಗಳನ್ನು ಆದೇಶಿಸಿದೆ. ಮೊಬೈಲ್ ಔಟ್‌ಲೆಟ್‌ಗಳ ಮೂಲಕ ತರಕಾರಿ ಮತ್ತು ಹಣ್ಣುಗಳು ಮನೆ ಬಾಗಿಲಿಗೆ ತಲುಪಲಿವೆ ಎಂದು ಪಳನಿಸ್ವಾಮಿ ಭರವಸೆ ನೀಡಿದ್ದಾರೆ.

Advertisement

Wordpress Social Share Plugin powered by Ultimatelysocial