ಆರ್‌ಬಿಐಯಿಂದ ೫೦ ಸಾವಿರ ಕೋಟಿಯ ವಿಶೇಷ ಸೌಲಭ್ಯ

ಮುಂಬೈ: ಕೊರೊನಾ ಹಿನ್ನೆಲೆಯಲ್ಲಿ ಸುದೀರ್ಘ ಲಾಕ್‌ಡೌನ್‌ನಿಂದ  ಆರ್ಥಿಕ ಹೊಡೆತಕ್ಕೆ ಸಿಲುಕಿರುವ ವಿವಿಧ ವಲಯಗಳ ರಕ್ಷಣೆಗೆ ಮುಂದಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್(RBI) ಮ್ಯೂಚುಲ್ ಫಂಡ್‌ಗಳಿಗೆ ತನ್ನ ವಿಶೇಷ ಸೌಲಭ್ಯವನ್ನು  ವಿಸ್ತರಿಸಿದೆ. ಮ್ಯೂಚುಲ್ ಫಂಡ್‌ಗಳಿಗಾಗಿ ೫೦ ಸಾವಿರ ಕೋಟಿ ರೂಗಳ ವಿಶೇಷ ಸೌಲಭ್ಯ(ಸ್ಪೆಷಲ್ ಲಿಕ್ವಿಡಿಟಿ ಫೆಸಿಲಿಟಿ)ವನ್ನು ಇಂದು ಘೋಷಿಸಿದೆ. ಫ್ಲಾಂಕ್ಲಿನ್ ಟೆಂಪ್ಲೇಷನ್ ಸಂಸ್ಥೆ ತನ್ನ ಆರು ಮ್ಯೂಚಯಲ್ ಫಂಡ್ ಸೌಲಭ್ಯವನ್ನು ರದ್ದುಗೊಳಿಸಿದ ಬೆನ್ನಲ್ಲೇ ಆರ್‌ಬಿಐಯ ಈ ಸೌಲಭ್ಯ ಪ್ರಕಟಿಸಿರುವುದು ಅನೇಕ ಸಂಸ್ಥೆಗಳಿಗೆ ವರದಾನವಾಗಿದೆ. ಆರ್‌ಬಿಐಯ ಈ ಸೌಲಭ್ಯವನ್ನು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಸ್ವಾಗತಿಸಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ಡಿಕೆಶಿಗೆ ತಿರುಗೇಟು ನೀಡಿದ ಈಶ್ವರಪ್ಪ

Mon Apr 27 , 2020
“ಹೊಸದಾಗಿ ಕೆಪಿಸಿಸಿ ಅಧ್ಯಕ್ಷರಾಗಿರುವುದನ್ನು ತೋರಿಸಿಕೊಳ್ಳಲು ಡಿ.ಕೆ.ಶಿವಕುಮಾರ್ ಈ ರೀತಿ  ನಾಟಕ ಮಾಡುತ್ತಿದ್ದಾರೆ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ. ಹೇಳಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೊರೊನಾ ಸೋಂಕು ಹರಡದಂತೆ ತಡೆಯುವಲ್ಲಿ ಯಶಸ್ವಿಯಾಗಿದೆ. ಜನ ಲಾಕ್ ಡೌನ್ ಗೆ ಸಂಬಂಧಿಸಿದಂತೆ ಸರ್ಕಾರದ ಜೊತೆ ಇದ್ದಾರೆ. ಡಿ.ಕೆ.ಶಿವಕುಮಾರ್ ಆರೋಪದಲ್ಲಿ ಹುರುಳಿಲ್ಲ” ಎಂದು ಕಿಡಿಕಾರಿದ್ದಾರೆ. “ಕೊರೊನಾ ವಿಚಾರದಲ್ಲಿ ಡಿಕೆಶಿವಕುಮಾರ ವತುಂಬಾ ಡ್ರಾಮಾ ಮಾಡತ್ತಿದ್ದಾರೆ. ಇಷ್ಟು ದಿನ ಈಶ್ವರಪ್ಪ ಎಲ್ಲಿ ಮಲಗಿದ್ದಾರೆ ಎಂದು ಕೇಳುವ ಡಿಕೆಶಿ. […]

Advertisement

Wordpress Social Share Plugin powered by Ultimatelysocial