ಮುಂಬೈ: ಲಾಕ್‌ಡೌನ್‌ನಲ್ಲಿ ಜನ ಮೊರೆ ಹೋಗಿರೋದು ಮನರಂಜನೆಗೆ. ಇದಕ್ಕಾಗಿ ಕೆಲವರು ಟಿವಿಗಳನ್ನು ನೋಡುತ್ತಿದ್ದರೆ, ಇನ್ನೊಂದಷ್ಟು ಜನ ಮೊಬೈಲ್, ಇಂಟರ್‌ನೆಟ್‌ನಲ್ಲಿ ಮುಳುಗಿ ಹೋಗಿದ್ದಾರೆ. ಮತ್ತೊಂದಷ್ಟು ಜನ ಈ ಇಂಟರ್‌ನೆಟ್‌ನಲ್ಲೂ ಹುಡುಕಾಡ್ತಿರೋದು ಯಾವುದಕ್ಕೆ ಗೊತ್ತಾ..? ಅಶ್ಲೀಲ ವಿಡಿಯೋಗಳಿಗಾಗಿ. ಲಾಕ್‌ಡೌನ್ ವೇಳೆ ಅಶ್ಲೀಲ ವಿಡಿಯೋಗಳನ್ನು ನೋಡುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆಯಂತೆ. ಹೀಗಾಗಿ ಇದನ್ನೇ ಬಂಡವಾಳ ಮಾಡಿಕೊಂಡಿರೋ ಸೈಬರ್ ಖದೀಮರು, ಸುಲಿಗೆ ಮಾಡೋಕೆ ನಿಂತಿದ್ದಾರೆ. ಅಶ್ಲೀಲ ವಿಡಿಯೋಗಳ ಮೂಲಕ ಜನರ ಮೊಬೈಲ್ ಹಾಗೂ ಸಿಸ್ಟಮ್‌ಗಳನ್ನು ಹ್ಯಾಕ್ ಮಾಡುತ್ತಿದ್ದಾರೆ. […]

ಪಾಟ್ನಾ:ಬಿಹಾರದ ಬಾಗಾಹಾದ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿರುವ ವಲಸೆ ಕಾರ್ಮಿಕರು ಶಾಲೆಗೆ ಬಣ್ಣ ಬಳಿದು, ಚಿತ್ರ ಬಿಡಿಸಿ ಸುಂದರವಾಗಿಸಿದ್ದಾರೆ. ನೇಪಾಳದಿಂದ ಹಿಂದಿರುಗಿದ ರಾಂಪುರ್ವಾ ಪಂಚಾಯತ್‌ನ ಲಕ್ಷ್ಮಿಪುರ ಸರ್ಕಾರಿ ಮಧ್ಯಮ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿರುವ ಸುಮಾರು ೫೨ ಕಾರ್ಮಿಕರು ತಮ್ಮ ಬಿಡುವಿನ ವೇಳೆಯಲ್ಲಿ ಬಣ್ಣ ಬಳಿಯುವ ಮೂಲಕ ಶಾಲೆಯನ್ನು ನವೀಕರಿಸಿದ್ದಾರೆ. ಸಾಮಾಜಿಕ ಅಂತರ ಪಾಲಿಸೊಕೊಂಡೇ, ಕಾರ್ಮಿಕರು ಕ್ಯಾಂಪಸ್ ಹಾಗೂ ಆಟದ ಮೈದಾನವನ್ನು ಸ್ವಚ್ಛಗೊಳಿಸಿ, ಶಾಲೆಯ ಆವರಣದಲ್ಲಿ ತರಕಾರಿ ಮತ್ತು ಹೂವಿನ ಗಿಡಗಳನ್ನು ನೆಟ್ಟಿದ್ದಾರೆ. ಬಳಿಕ ಶಾಲೆಯ […]

ನವದೆಹಲಿ: ವಿಚ್ಛೇದನಗೊಂಡು ಬೇರೆಯಾಗಿರುವ ಪೋಷಕರು ಲಾಕ್‌ಡೌನ್ ವೇಳೆಯಲ್ಲಿ ತಮ್ಮ ಮಕ್ಕಳನ್ನು ನೋಡಲು ಸಾಧ್ಯವಾಗಿತ್ತಿಲ್ಲ ಎಂದು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ವಿಡಿಯೋ ಕಾಲ್ ಮೂಲಕ ಪೋಷಕರು ತಮ್ಮ ಮಕ್ಕಳನ್ನು ಸಂಪರ್ಕಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ತಮಗೆ ಮಕ್ಕಳನ್ನು ನೋಡುವ ಹಕ್ಕಿದ್ದರೂ ಲಾಕ್‌ಡೌನ್‌ನಿಂದ ಸಾಧ್ಯವಾಗುತ್ತಿಲ್ಲ ಅಂತ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಕೆಯಾಗಿದ್ದವು. ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜಯ್ ಕಿಶನ್‌ಕೌಲ್ ಹಾಗೂ ಬಿ.ಆರ್. ಗವಾಯ್ ಅವರನ್ನೊಳಗೊಂಡ ಪೀಠ ವಿಡಿಯೋ ಕಾನ್ಫರೆನ್ಸ್ ಮೂಲಕ ಅರ್ಜಿ […]

ನವದೆಹಲಿ:ದೇಶವನ್ನು ಕಾಡುತ್ತಿರುವ ಕೊರೊನಾ ಸಂಕಷ್ಟದಲ್ಲಿ ದೇಶವನ್ನು ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಲು ಪ್ರಧಾನಿ ನರೇಂದ್ರ ಮೋದಿ ಅನೇಕ ಮಾರ್ಗೋಪಾಯಗಳನ್ನು ಅನುಷ್ಠಾನಗೊಳಿಸುವಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಭಾರತದಲ್ಲಿ ಬಂಡವಾಳ ಹೂಡುವ ವಿದೇಶಿ ಸಂಸ್ಥೆಗಳಿಗೆ ರತ್ನಗಂಬಳಿ ಸ್ವಾಗತ ನೀಡಲು ಪೂರಕವಾದ ವಾತಾವರಣ ನಿರ್ಮಿಸುವಂತೆ ಈಗಾಗಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯ,ಹಣಕಾಸು ಮತ್ತು ವಾಣಿಜ್ಯ ಇಲಾಖೆ ಸಚಿವರು ಮತ್ತು ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇಡೀ ವಿಶ್ವಕ್ಕೆ ಕೊರೊನಾ ವೈರಸ್ ಕೊಡುಗೆ ನೀಡಿ ಅಪಾರ ಸಾವುನೋವಿಗೆ ಕಾರಣವಾಗಿರುವ ಚೀನಾ […]

ಚೆನ್ನೈ: ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ಉಂಟಾದ ಪರಿಣಾಮದಿಂದ ಹೊರಬರಲು ಹೋಟೆಲ್ ಉದ್ಯಮವು ವಿವಿಧ ಕ್ರಮಗಳನ್ನು ಕೈಗೊಂಡಿದೆ. ವೇತನ ಕಡಿತ ಮಾಡಿ ಕಡಿಮೆ ಸಿಬ್ಬಂದಿಯನ್ನು ಕರ್ತವ್ಯದಲ್ಲಿರಿಸಲಾಗಿದೆ. ಚೆನ್ನೈನಲ್ಲಿ ಭಾಗಶಃ ಆತಿಥ್ಯ ಉದ್ಯಮವು ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲ ಕ್ರಮಗಳನ್ನು ಅನುಸರಿಸುವ ಮೂಲಕ ಉದ್ಯಮವನ್ನು ಜೀವಂತವಾಗಿರಿಸುವ ಪ್ರಯತ್ನ ನಡೆಸಲಾಗುತ್ತಿದೆ. ಕೆಲ ಹೋಟೆಲ್‌ಗಳು ಹೊಸ ಅತಿಥಿಗಳನ್ನು ಸ್ವಾಗತಿಸದಿರಲು ನಿರ್ಧರಿಸಿದ್ದರೆ, ಇನ್ನೂ ಕೆಲ ಉದ್ಯಮಿಗಳು ನೈರ್ಮಲ್ಯ ಕ್ರಮಗಳನ್ನು ಹೆಚ್ಚಿಸಿದ್ದಾರೆ. ಹ್ಯಾಂಡ್‌ಶೇಕ್ ಬದಲಿಗೆ ಹೊಸ ರೀತಿಯ […]

ಚೆನ್ನ್ಯೆ:ಕೊರೊನಾ ಲಾಕ್‌ಡೌನ್ ಬೆನ್ನಲ್ಲೇ ಇಂದಿನಿಂದ ಬ್ಯಾಂಕಿಂಗ್ ಹಾಗೂ ಎಟಿಎಂ ಸಂಬಂಧಿಸಿದಂತೆ ಕೆಲವು ಹೊಸ ಬದಲಾವಣೆ ಆಗಲಿವೆ. ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಇಂದಿನಿಂದ ಎಟಿಎಂ ಮಷಿನ್‌ಗಳನ್ನು ಪ್ರತಿ ಬಾರಿ ಬಳಕೆ ಮಾಡಿದ ನಂತರ ಅದನ್ನು ಸ್ವಚ್ಛಗೊಳಿಸಲಾಗುತ್ತದೆ. ಈಗಾಗಲೇ ಈ ಕ್ರಮವನ್ನು ಉತ್ತರ ಪ್ರದೇಶದ ಘಾಜಿಯಾಬಾದ್, ತಮಿಳುನಾಡಿನ ಚೆನ್ನ್ಯೆನಲ್ಲಿ ಜಾರಿಗೆ ತರಲಾಗಿದೆ. ಈ ನಿಯಮವನ್ನು ಪಾಲಿಸದೇ ಇದ್ದಲ್ಲಿ ಎಟಿಎಂ ಕೇಂದ್ರವನ್ನೇ ಸೀಲ್‌ಡೌನ್ ಮಾಡಲಾಗುತ್ತದೆ. ಇಂದಿನಿಂದ ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಉಳಿತಾಯ […]

ಬೆಂಗಳೂರು : ಮೇ ೪ರಂದು ಖಾಸಗಿ ಬಸ್‌ಗಳ ಟಿಕೆಟ್ ದರ ಎಂಟು ಪಟ್ಟು ಹೆಚ್ಚಳ ಮಾಡಿ ಜನರ ಸುಲಿಗೆಗೆ ಹೊಂಚು ಹಾಕಿವೆ. ಮೇ ೩ರ ನಂತರ ಬಸ್‌ಗಳ ಸಂಚಾರಕ್ಕೆ ಆನ್‌ಲೈನ್‌ನಲ್ಲಿ ಟಿಕೆಟ್ ಬುಕಿಂಗ್ ಇನ್ನೇನು ಆರಂಭಗೊಳ್ಳಲಿದೆ. ಈ ಸಂದರ್ಭವನ್ನು ಬಳಸಿಕೊಳ್ಳಲು ಖಾಸಗಿ ಬಸ್‌ಗಳ ಮಾಲೀಕರು ಮುಂದಾಗಿದ್ದಾರೆ. ಕೆಲವು ಬಸ್‌ಗಳು ಬೆಂಗಳೂರಿನಿAದ ಹುಬ್ಬಳ್ಳಿ, ಬೆಳಗಾವಿ, ಮುಂಬೈ ಹೀಗೆ ಇತರೆ ಪ್ರದೇಶಗಳಿಗೆ ತೆರಳುವವರಿಗೆ ಪ್ರತಿ ಟಿಕೆಟ್‌ಗೆ ೮೫೦೦ ರೂ ದರ ನಿಗದಿಪಡಿಸಲಿದ್ದಾರೆ. ಸಾಮಾನ್ಯ […]

ಬೆಂಗಳೂರು :ಲಾಕ್ ಡೌನ್ ಪರಿಣಾಮ ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿದೆ. ಆದರೆ, ರೈಲುಗಳ ಸಂಚಾರ ಪುನಃ ಆರಂಭವಾದ ಬಳಿಕ ಪ್ರಯಾಣಿಕರಿಗೆ ಸ್ಮಾರ್ಟ್ ಕಡ್ಡಾಯಗೊಳಿಸುವ ಸಾಧ್ಯತೆ ಇದೆ. ಕೊರೊನಾ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಕಾಂಟ್ಯಾಕ್ಟ್ ಲೆಸ್ ಟ್ರಾವೆಲ್ ಜಾರಿಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ನಿಗದಿತ ಕಾರ್ಯಾಚರಣೆ ವಿಧಿವಿಧಾನ (ಎಸ್‌ಓಪಿ) ತಯಾರು ಮಾಡಲಾಗುತ್ತಿದೆ. ಎಸ್‌ಓಪಿಯಲ್ಲಿ ಮೆಟ್ರೋ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್ ಕಡ್ಡಾಯಗೊಳಿಸುವ ಕುರಿತು ಉಲ್ಲೇಖಿಸಲಾಗಿದೆ. […]

ಸತ್ಯ ಹಾಗೂ ಧರ್ಮ ಯಾವಾಗಲೂ ಇದ್ದರೇನೆ ಸಮಾಜಕ್ಕೆ ಶ್ರೇಯಸ್ಸು. ಆದರೆ, ನಾವು ಹೇಳುತ್ತಾ ಇರುವ ಸತ್ಯ ಹಾಗೂ ಧರ್ಮ ಬೇರೆಯದೇ ವಿಚಾರ. ‘ಸತ್ಯವನ್ನೇ ಹೇಳುತ್ತೇನೆ’ ಎಂಬುದು ಕಿರು ಚಿತ್ರವಾಗಿದೆ. ಇದರ ನಿರ್ದೇಶಕ ರಾಮ ರಾಮ ರೇ ಸತ್ಯ ಪ್ರಕಾಶ್ ಹಾಗೂ ಹೆಸರಾಂತ ಹಾಸ್ಯ ನಟ ಧರ್ಮಣ್ಣ ಜೊತೆಯಾಗಿ ಈ ಕಿರು ಚಿತ್ರವನ್ನು ತಯಾರಿಸಿದ್ದಾರೆ. ಈ ಕಿರು ಚಿತ್ರದ ಶೀರ್ಷಿಕೆ ಸಹ ಸೊಗಸಾಗಿರುವುದರಿಂದ ಇದರ ಅನೇಕ ಕಂತುಗಳ ಕಿರು ಚಿತ್ರ ಮಾಡುವುದಾಗಿ […]

ಇತ್ತೀಚೆಗಷ್ಟೇ ಸಿಆರ್ ಫಿ ಎಫ್ ಯೋಧನ ಬಂಧನ ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಬೆಳಗಾವಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ರು. ಸಿಆರ್ ಫಿ ಎಫ್ ನ ಯೋಧ ಸಚಿನ ಸಾವಂತ್ರನ್ನ ಠಾಣೆಯಲ್ಲಿ ಕೋಳ ಹಾಕಿ ಕೂರಿಸಿದ್ದ ಪೋಟೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿತ್ತು. ಒಂದು ಸುವ್ಯವಸ್ಥೆವುಳ್ಳ ಕಾನೂನಿನಲ್ಲಿ ದೇಶ ಕಾಯುವ ಯೋಧನಿಗೆ ಈ ರೀತಿ ಮಾಡುವುದು ಎಷ್ಟು ಸರಿ ಎಂದು ಪರ-ವಿರೋಧ ಚರ್ಚೆಗೆ […]

Advertisement

Wordpress Social Share Plugin powered by Ultimatelysocial