ಸೋಶಿಯಲ್ ಮೀಡಿಯಾದಲ್ಲಿ ಆರಂಭವಾಯ್ತು ಹ್ಯಾಷ್ ಟ್ಯಾಗ್ #ResignHMBommai …!

ಇತ್ತೀಚೆಗಷ್ಟೇ ಸಿಆರ್ ಫಿ ಎಫ್ ಯೋಧನ ಬಂಧನ ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಬೆಳಗಾವಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ರು. ಸಿಆರ್ ಫಿ ಎಫ್ ನ ಯೋಧ ಸಚಿನ ಸಾವಂತ್ರನ್ನ ಠಾಣೆಯಲ್ಲಿ ಕೋಳ ಹಾಕಿ ಕೂರಿಸಿದ್ದ ಪೋಟೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿತ್ತು. ಒಂದು ಸುವ್ಯವಸ್ಥೆವುಳ್ಳ ಕಾನೂನಿನಲ್ಲಿ ದೇಶ ಕಾಯುವ ಯೋಧನಿಗೆ ಈ ರೀತಿ ಮಾಡುವುದು ಎಷ್ಟು ಸರಿ ಎಂದು ಪರ-ವಿರೋಧ ಚರ್ಚೆಗೆ ಕೂಡ ಗ್ರಾಸವಾಗಿತ್ತು.

ಸದ್ಯ ಈ ಪ್ರಕರಣವನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಂಡಿದ್ರು ಕೂಡ, ಸರ್ಕಾರಕ್ಕೆ ಜನರು ಛೀಮಾರಿ ಹಾಕುತ್ತಿದ್ದಾರೆ. ಯಾಕೆ ಅಂತೀರಾ..? ಹೌದು ಯೋಧ ಸಾವಂತರನ್ನ ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಈ ನಡುವೆ ಹಲವು ಬೆಳವಣಿಗೆಗಳ ಮಧ್ಯೆ ಸರ್ಕಾರವೂ ತನ್ನ ಕೇಸನ್ನು ವಾಪಸ್ ತೆಗೆದುಕೊಂಡಿದೆ. ಸದ್ಯ ಎಲ್ಲವೂ ಸರಿ ಹೋಯ್ತು ಎನ್ನುವುದ್ರಲ್ಲಿ ಪೊಲೀಸರು ಯೋಧನನ್ನ ಮನ ಬಂದಂತೆ ತಳಿಸಿರುವ ಪೋಟೋಗಳು ವೈರಲ್ ಆಗಿವೆ. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಹೋಮ್ ಮಿನಿಸ್ಟರ್ ಅವರ ರಾಜೀನಾಮೆ ನೀಡಬೇಕು ಅಂತ #ResignHMBommai ಹ್ಯಾಷ್ ಟ್ಯಾಗ್ ಟ್ರೆಂಡಿಂಗನಲ್ಲಿದೆ. ಈ ಕುರಿತು ಟ್ವಿಟರನಲ್ಲಿ 14 ಸಾವಿರಕ್ಕೂ ಹೆಚ್ಚು ಟ್ವೀಟಗಳನ್ನು ಟ್ವೀಟ ಮಾಡಲಾಗಿದೆ. ಒಬ್ಬ ದೇಶ ಕಾಯೋ ಯೋಧನಿಗೆ ಈ ರೀತಿ ಮಾಡಿರೋದು ಸರಿಯಲ್ಲ. ಯೋಧನ ಮೇಲೆ ಹಲ್ಲೆ ಮಾಡಿದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು ಅಂತ ಟ್ವೀಟ ಮಾಡಿದ್ದಾರೆ. ಇನ್ನು ಈ ಬಗ್ಗೆ ಸಿಎಂ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

Please follow and like us:

Leave a Reply

Your email address will not be published. Required fields are marked *

Next Post

ಅಂತರ್ ಜಿಲ್ಲಾ ಪ್ರಯಾಣಕ್ಕೆ ಸಂಬಂಧ ಒಂದೆರಡು ದಿನಗಳಲ್ಲಿ ನಿರ್ಧಾರ

Wed Apr 29 , 2020
ಲಾಕ್ ಡೌನ್‌ನಿಂದಾಗಿ ತಮ್ಮ ಕುಟುಂಬ ಸೇರಲಾಗದೆ ಬಾಕಿಯಾಗಿರುವವರಿಗೆ ಅಂತರ್ ಜಿಲ್ಲಾ ಪ್ರಯಾಣಕ್ಕೆ ಅನುಮತಿ ನೀಡುವ ಸಂಬಂಧ ಒಂದೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ವಲಸೆ ಕಾರ್ಮಿಕರಿಗೆ ತಮ್ಮ ಗ್ರಾಮಗಳಲ್ಲಿ ಕೃಷಿ ಕಾರ್ಯ ಕೈಗೊಳ್ಳಲು ಅಥವಾ ತಮ್ಮ ಕೆಲಸದ ಸ್ಥಳಗಳಿಗೆ ತಲುಪುವ ಸಲುವಾಗಿ ಅವರನ್ನು ಸ್ವಗ್ರಾಮಗಳಿಗೆ ತಲುಪಿಸಲು ರಾಜ್ಯ ಸರಕಾರ ಅನುಮತಿ ನೀಡಿದೆ. ಇದರಂತೆ ದಕ್ಷಿಣ ಕನ್ನಡ […]

Advertisement

Wordpress Social Share Plugin powered by Ultimatelysocial