ರಾಜ್ಯದಲ್ಲಿ ಇಂದು ಹೊಸದಾಗಿ 8 ಕೊರೋನಾ ವೈರಸ್ ಕೇಸ್ ಪತ್ತೆಯಾಗಿದೆ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 511ಕ್ಕೆ ಏರಿಕೆಯಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೊರೋನಾ ಸೋಂಕಿನ ಪ್ರಕರಣ ಸಂಬಂಧ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಹೊಸದಾಗಿ ಸೋಂಕಿತರ ಪೈಕಿ ಬೆಂಗಳೂರು ನಗರದಲ್ಲಿ ಒಬ್ಬರಿಗೆ, ಮಂಡ್ಯದಲ್ಲಿ ಒಬ್ಬರಿಗೆ, ದಕ್ಷಿಣಕನ್ನಡದಲ್ಲಿ ಇಬ್ಬರಿಗೆ ಬಾಗಲಕೋಟೆಯಲ್ಲಿ ಇಬ್ಬರಿಗೆ ಮತ್ತು ವಿಜಯಪುರದಲ್ಲಿ ಇಬ್ಬರಿಗೆ ಕೊರೋನಾ ಸೋಂಕು ಪಾಸಿಟಿವ್ ದೃಢಪಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಸೋಂಕಿತರ […]

ರಾಜ್ಯದಲ್ಲಿ  ಕೊರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆ ಮೇ.15ರವರೆಗೆ ಲಾಕ್ ಡೌನ್ ಮುಂದುವರೆಸುವುದು ಸೂಕ್ತ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ ಜೊತೆಗೆ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲೇ ಮೇ.3ರ ಬಳಿಕ ಮತ್ತೆ ಲಾಕ್ ಡೌನ್ ಮುಂದುವರೆಸುವುದು ಸೂಕ್ತ. ಮೇ.15ರವರೆಗೆ ಲಾಕ್ ಡೌನ್ ವಿಸ್ತರಿಸಿದರೆ ಒಳಿತು. ಕೇಂದ್ರದ ನಿರ್ಧಾರಗಳಿಗೆ ರಾಜ್ಯ ಸರ್ಕಾರ ಸಂಪೂರ್ಣ ಬೆಂಬಲ ಸೂಚಿಸಿದೆ. ಆದರೆ, ಸದ್ಯದ ಆರ್ಥಿಕ ಪರಿಸ್ಥಿತಿ ನಿಟ್ಟಿನಲ್ಲಿ ಆರೆಂಜ್ […]

ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಪ್ರಧಾನಿಗಳ ವಿಡಿಯೋ ಕಾನ್ಫರೆನ್ಸ್ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು,  ಪ್ರಧಾನಿಗಳ ಸಲಹೆ ಸೂಚನೆ ಆಧರಿಸಿ ಲಾಕ್‌ಡೌನ್ ಕುರಿತು ನಿರ್ಧಾರ ಮಾಡುತ್ತೇವೆ. ಲಾಕ್‌ಡೌನ್ ಮುಂದುವರಿಯುವ ಕುರಿತು ಸದ್ಯಕ್ಕೆ ಯಾವುದೇ ನಿರ್ಧಾರ ಇಲ್ಲ. ರಾಜ್ಯದಲ್ಲಿನ ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತರಲು ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ. ಕರೋನಾ ಪರಿಸ್ಥಿತಿಯಿಂದ ಸಂತ್ರಸ್ತರಾದ ಜನರಿಗೆ ರಾಜ್ಯ ಸರ್ಕಾರ ಎಲ್ಲಾ […]

ಕೊರೋನಾ ವೈರಸ್​​ನಿಂದ ಗುಜರಾತ್​ನ ಕಾಂಗ್ರೆಸ್ ನಾಯಕ ಬದ್ರುದ್ದೀನ್ ಶೇಖ್ ಮೃತಪಟ್ಟಿದ್ದಾರೆ. ದೇಶಾದ್ಯಂತ ಲಾಕ್​ಡೌನ್​ ಘೋಷಿಸಿರುವುದರಿಂದ ಅನೇಕರಿಗೆ ಆಹಾರಇಲ್ಲದೆ ಪರದಾಡುತ್ತಿದ್ದಾರೆ. ಅಂಥವರಿಗೆ ಆಹಾರ ವಿತರಿಸಲು ಹೋಗಿದ್ದ ಬದ್ರುದ್ದೀನ್ ಶೇಖ್ ರಲ್ಲಿ ಕೊರೋನಾ ಲಕ್ಷಣಗಳು ಕಂಡುಬಂದಿತ್ತು. ಬಡವರಿಗೆ ಆಹಾರ ವಿತರಿಸುವಾಗಲೇ ಯಾರಿಂದಲೋ ಬದ್ರುದ್ದೀನ್ ಶೇಖ್​ಗೆ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆ ಗುಜರಾತ್​ನ ಅಹಮದಾಬಾದ್​ನಲ್ಲಿರುವ ಎಸ್​ವಿಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 8 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ. […]

ಮಂಡ್ಯದಲ್ಲಿ ಆರೋಗ್ಯ ತಪಾಸಣೆ ವೇಳೆ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಚಿವ ಶ್ರೀರಾಮುಲು ಹೇಳಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ಅವರು, ಮಾರಕ ಕೊರೊನಾ ಸೋಂಕು ಪರಿಸ್ಥಿತಿಯ ನಡುವೆಯೂ ಪತ್ರಕರ್ತರು ತಮ್ಮ ಪ್ರಾಣದ ಹಂಗುತೊರೆದು ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಆರೋಗ್ಯ ತಪಾಸಣೆಗೆ ಅಡ್ಡಿಪಡಿಸಿ, ಅವರ ಮೇಲೆ ಹಲ್ಲೆ ನಡೆಸಿರುವುದು ಸರಿಯಲ್ಲ. ಎಂಎಲ್ ಸಿ ಶ್ರೀಕಂಠೇಗೌಡ ಹಾಗೂ ಅವರ ಪುತ್ರನಿಂದ ಈ ದೃಷ್ಕೃತ್ಯ ನಡೆದಿರುವುದು […]

ಕೊರೋನಾ ವಿರುದ್ಧದ ಹೋರಾಟದಲ್ಲಿ ನಾಗರೀಕರು ಭಾಗಿಯಾಗಿದ್ದು, ಇದರಲ್ಲಿ ಜಯಗಳಿಸುವ ವಿಶ್ವಾಸ ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲಾಕ್ ಡೌನ್ ಬಳಿಕ ಎರಡನೇ ‘ಮನ್ ಕಿ ಬಾತ್’ ನಲ್ಲಿ ಮಾತನಾಡಿದ ಅವರು, ಜನ ಹೋರಾಟದ ಸಿಪಾಯಿಗಳಾಗಿದ್ದಾರೆ. ಕೋರೋನಾ ವಿರುದ್ಧದ ಹೋರಾಟ ಸರಿಯಾದ ಮಾರ್ಗದಲ್ಲಿ ಸಾಗುತ್ತಿದೆ. ಜನರು ಮೇಣದಬತ್ತಿ, ದೀಪ ಬೆಳಗುವ ಮೂಲಕ ಮತ್ತು ಚಪ್ಪಾಳೆ ತಟ್ಟುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇದು ಜನರೇ ನೇತೃತ್ವ ವಹಿಸಿರುವ ಹೋರಾಟವಾಗಿದೆ. ಲಾಕ್ […]

ಕೊರೊನಾ ವೈರಸ್ ಕಾಯಿಲೆಯಿಂದ ಗುಣಮುಖರಾಗಿರುವವರು ಧರ್ಮವನ್ನು ಬದಿಗಿಟ್ಟು, ಮುಂದೆ ಬಂದು ಕೊರೊನಾ ಪೀಡಿತರಿಗೆ ಪ್ಲಾಸ್ಮಾ ದಾನ ಮಾಡಿ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ದೆಹಲಿನಲ್ಲಿ ಮಾತನಾಡಿದ ಅವರು, ರಕ್ತದ ಪ್ಲಾಸ್ಮಾ ಧರ್ಮದ ನಡುವೆ ವ್ಯತ್ಯಾಸವನ್ನು ತೋರಿಸುವುದಿಲ್ಲ. ಹಿಂದೂ ವ್ಯಕ್ತಿಯ ಪ್ಲಾಸ್ಮಾ ಮುಸ್ಲಿಂ ರೋಗಿಯನ್ನು ಉಳಿಸಬಹುದು ಮತ್ತು  ಮುಸ್ಲಿಂ ರೋಗಿಯ ಪ್ಲಾಸ್ಮಾ ಹಿಂದೂ ವ್ಯಕ್ತಿಯನ್ನು ಉಳಿಸಬಹುದು.’ಮುಂದೆ ಬಂದು ಪ್ಲಾಸ್ಮಾವನ್ನು ದಾನ ಮಾಡಿ. ನಾವೆಲ್ಲರೂ ಕರೋನವೈರಸ್ ನಿಂದ ಚೇತರಿಸಿಕೊಂಡೂ […]

ಪಾದರಾಯನಪುರದ ಖೈದಿಗಳನ್ನು ಕರೆತಂದು ನೆಮ್ಮದಿಯಾಗಿದ್ದ ರಾಮನಗರಕ್ಕೆ ಕೊರೊನಾ ಸೋಂಕು ಹರಡಿಸಿದ ಸಣ್ಣತನ ನಿಮ್ಮದು, ಎಂದು ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಪಾದರಾಯನಪುರದ ಗಲಭೆಕೋರರನ್ನು ರಾಮನಗರ ಜೈಲಿಗೆ ಸ್ಥಳಾಂತರ ಮಾಡಿದ್ದ ವಿಚಾರದಲ್ಲಿ ಸರ್ಕಾರದ ಸಚಿವರು ನೀಡುತ್ತಿರುವ ಹೇಳಿಕೆಗಳಿಗೆ ಟ್ವಿಟ್ಟರ್ ನಲ್ಲಿ ಖಾರವಾಗಿಯೇ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಪಾದರಾಯನಪುರದ ಗಲಭೆಕೋರರನ್ನು ರಾಮನಗರ ಜೈಲಿಗೆ ಸ್ಥಳಾಂತರ ಮಾಡುವ ವಿಷಯದಲ್ಲಿ ಎಡಬಿಡಂಗಿತನ ಮತ್ತು ರಾಜಕಾರಣ […]

ಬೆಂಗಳೂರು: ಮಾನವತಾವಾದಿ, ಜಗಜ್ಯೋತಿ, ವಿಶ್ವಗುರು ಬಸವಣ್ಣ ಅವರ ತತ್ವ-ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಏಕತೆಯನ್ನು ಸಾಧಿಸಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ಕರೆ ನೀಡಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಸವಣ್ಣ ಅವರು 900 ವರ್ಷಗಳ ಹಿಂದೆ ವರ್ಗ, ವರ್ಣ, ಜಾತಿ, ಧರ್ಮ, ಲಿಂಗಭೇದಗಳಿಂದ ಮುಕ್ತರಾಗಿ ಮಾನವ ಏಕತೆಯನ್ನು ಸಾಧಿಸಬೇಕು ಎನ್ನುವ ಸಂದೇಶವನ್ನು ಸಾರಿದ್ದಾರೆ. ಅದಕ್ಕಾಗಿ ಅಪರಿಮಿತವಾಗಿ ಹೋರಾಟವನ್ನ ಮಾಡಿದ್ದಾರೆ. ಇಡೀ ಪ್ರಪಂಚದ ಯಾವುದೇ ದೇಶದಲ್ಲಿ ದುಡಿಯುವ ವರ್ಗಕ್ಕಾಗಿ, ಕಾಯಕ ಜೀವಿಗಳಿಗಾಗಿ, ನೊಂದವರ […]

ಬೆಂಗಳೂರು : ರಾಜ್ಯದಲ್ಲಿ ಇಂದು ಹೊಸದಾಗಿ 1 ಕೊರೋನಾ ವೈರಸ್ ಕೇಸ್ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 501ಕ್ಕೆ ಏರಿಕೆಯಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೊರೋನಾ ಸೋಂಕಿನ ಪ್ರಕರಣ ಸಂಬಂಧ ಇಲಾಖೆ ಹೆಲ್ತ್ ಬುಲೆಟಿನ್ ನಿಂದ ತಿಳಿದು ಬಂದಿದೆ, ಇಂದು ದಕ್ಷಿಣಕನ್ನಡ ಜಿಲ್ಲೆಯಲ್ಲಿ 47 ವರ್ಷದ ಮಹಿಳೆಗೆ ಕೊರೋನಾ ಸೋಂಕು ಪಾಸಿಟಿವ್ ದೃಢಪಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 501ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ […]

Advertisement

Wordpress Social Share Plugin powered by Ultimatelysocial