ಗೋಪಾಲಯ್ಯಗಿಂತ ಮೊದಲು ಮಂತ್ರಿ ಆಗಿದ್ದು, ನಾನು ಸರ್ಕಾರ ಹೇಗೆ ನಡೆಯುತ್ತದೆ? ವ್ಯವಸ್ಥೆ ಹೇಗಿರುತ್ತದೆ ಎನ್ನುವುದು ಚೆನ್ನಾಗಿ ಗೊತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್  ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ  ಅವರು,  ದಾಸ್ತಾನು ಇರಿಸಿದ್ದ ಅಕ್ಕಿ ಎನ್ನುವ ಗೋಪಾಲಯ್ಯ ಮೊದಲೇ ಏಕೆ ದಾಸ್ತಾನು ಇರಿಸಿದ್ದ ಬಗ್ಗೆ ಘೋಷಣೆ ಮಾಡಿಲ್ಲ. ನನಗೆ ಎಲ್ಲವೂ ಗೊತ್ತಿದೆ ಬಿಡಿ ಎಂದರು.ಇನ್ನೂ ಮಂಡ್ಯದಲ್ಲಿ ಶಾಸಕ ಶ್ರೀಕಂಠೇ ಗೌಡ ದಾದಾಗಿರಿ ವಿಚಾರವಾಗಿ ಮಾತನಾಡಿದ ಅವರು, ಮಾಧ್ಯಮದವರು, ಸರಕಾರದವರು […]

ಗದಗ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ, ಕಂಟೈನ್ಮೆಂಟ್ ಏರಿಯಾ ಹೊರತುಪಡಿಸಿ ರಾಜ್ಯಾದ್ಯಂತ ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ. ಗದಗನಲ್ಲಿ ಮಾತನಾಡಿದ ಅವರು,ಕೆಲವು ಇಲಾಖೆಯನ್ನು ಸಡಿಲಿಕೆ ಮಾಡಬೇಕೆಂದು ಸರ್ಕಾರ ಆದೇಶ ಮಾಡಿದೆ. ಇದರಲ್ಲಿ ಮರಳು ಗಣಿಗಾರಿಕೆಗೂ ಸಡಿಲಿಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಅಂತರ ಕಾಯ್ದುಕೊಳ್ಳುವಿಕೆ, ಮುಖಕ್ಕೆ ಮಾಸ್ಕ್ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೂಚನೆ, ನಿಯಮಗಳ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದೆ. […]

ಬೆಂಗಳೂರು : ಪಾದರಾಯನಪುರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಲ್ಲಿ 5 ಮಂದಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ನೂರಾರು ಪೊಲೀಸರನ್ನು ಕ್ವಾರಂಟೈನ್ ಮಾಡಲು ನಿರ್ಧರಿಸಲಾಗಿದೆ..ಪೊಲೀಸ್ ಕಮೀಷನರ್ ಆದೇಶದಂತೆ ಕ್ವಾರಂಟೈನ್ ಮಾಡಲಾಗುತ್ತಿದೆ.ಜೆ.ಜೆ.ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ನಂತರ ಆರೋಪಿಗಳನ್ನು ಪಶ್ಚಿಮ ವಿಭಾಗ ಪೊಲೀಸರು ಹಾಗೂ ಸಿಸಿಬಿ ಪೊಲೀಸರ ನೂರಾರು ತಂಡ ಬಂಧಿಸಿದ್ರು.ಈಗ ಆರೋಪಿಗಳಲ್ಲಿ ಸೋಂಕು ಧೃಡಪಟ್ಟಿದ್ದು,ಆರೋಪಿಗಳ ಪ್ರೈಮರಿ ಕಾಂಟ್ಯಾಕ್ಟ್ ಹೊಂದಿದ್ದ 23 ಪೊಲೀಸ್ ಅಧಿಕಾರಿಗಳು,ನೂರಾರು ಪೊಲೀಸರನ್ನು ಖಾಸಗಿ ಹೊಟೇಲ್ ನಲ್ಲಿ […]

ರಾಜ್ಯದಲ್ಲಿ ಮೇ 3ರವರೆಗೆ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಹೀಗಾಗಿ ಆ ಬಳಿಕ ಪರೀಕ್ಷೆ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ ಅವರು, ಕೊರೊನಾ ವಿರುದ್ಧ ಹೋರಾಟ ನಡೆಸುವುದು ಎಸ್‌ಎಸ್‌ಎಲ್ ಸಿಗಿಂತ ದೊಡ್ಡ ಪರೀಕ್ಷೆ . ಹೀಗಾಗಿ ಲಾಕ್ ಡೌನ್ ಬಳಿಕ ಪರೀಕ್ಷೆ ಯಾವಾಗ ಮಾಡಬೇಕು.ಮಕ್ಕಳಿಗೆ ಎಷ್ಟು ಸಮಯ ಕೊಡಬೇಕೆಂದು ಲಾಕ್ ಡೌನ್ ನಂತರ ನಿರ್ಧರ ಮಾಡಲಾಗುತ್ತೆ. ಕೆಲವರು ಎಸ್‌ಎಸ್‌ಎಲ್ ಸಿ ಪರೀಕ್ಷೆ ನಡೆಸುವುದು […]

ಪಾದರಾಯನಪುರ ಗಲಾಟೆಯ ಆರೋಪಿಗಳನ್ನು ರಾಮನಗರಕ್ಕೆ ಶಿಫ್ಟ್‌ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ಆರೋಪಕ್ಕೆ ಟ್ವೀಟ್  ಮುಖಾಂತರ ಸಚಿವ ಡಾ.ಕೆ.ಸುಧಾಕರ್‌ ತಿರುಗೇಟು ನೀಡಿದ್ದಾರೆ. ರಾಜ್ಯವೆಂದರೇ ಕೇವಲ ರಾಮನಗರ ಜಿಲ್ಲೆ ಮಾತ್ರವೇ ಎಂದು ವಿಪಕ್ಷ ನಾಯಕರಿಗೆ ಸಚಿವ ಡಾ.ಕೆ.ಸುಧಾಕರ್‌ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ  ಮಾತನಾಡಿದ  ಅವರು, ಕೇರಳದ ಕಾಸರಗೋಡಿನಿಂದ ಮಂಗಳೂರಿಗೆ ಜನ ಬರಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ವಿರೋಧವಿಲ್ಲ. ಇದಕ್ಕಾಗಿ ಪ್ರಧಾನಿಗೆ ಪತ್ರವನ್ನು ಅವರು ಬರೆದಿದ್ದರು ಎಂದು ದೇವೇಗೌಡರು ಈ ಹಿಂದೆ ಮಾಡಿದ್ದ […]

ಸಾಮಾಜಿಕ ಹೋರಾಟಗಾರ ಮಹೇಂದ್ರ ಕುಮಾರ್ ಅವರ ನಿಧನಕ್ಕೆ ಮಾಜಿ ಸಿಎಂ  ಸಿದ್ದರಾಮಯ್ಯ ಟ್ವೀಟ್ ಮೂಲಕ  ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ”ಸಾಮಾಜಿಕ ಹೋರಾಟಗಾರ ಮಹೇಂದ್ರಕುಮಾರ್ ಅವರ ಅನಿರೀಕ್ಷಿತ ಸಾವಿನಿಂದ ದುಃಖಿತನಾಗಿದ್ದೇನೆ. ಜಾತ್ಯತೀತ ಶಕ್ತಿಗಳನ್ನು ಸಂಘಟಿಸಲು ಅವಿರತವಾಗಿ ಶ್ರಮಿಸುತ್ತಿದ್ದ ಈ ಯುವ ನಾಯಕ ಒಂದೆರಡು ಭೇಟಿಗಳಲ್ಲಿಯೇ ನನ್ನಲ್ಲಿ ಭರವಸೆ ಮೂಡಿಸಿದ್ದರು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು” ಎಂದು ಟ್ವೀಟ್ ಮಾಡಿದ್ದಾರೆ.

ಚೀನಾದ ಪರೀಕ್ಷಾ ಕಿಟ್ ಬಳಸುವ ಬದಲು, ಕೇರಳ ಅಭಿವೃದ್ಧಿ ಪಡಿಸಿದ ಪರೀಕ್ಷಾ ವಿಧಾನ ಬಳಸಿ ಎಂದು ಸಂಸದ ಶಶಿ ತರೂರ್ ಟ್ವೀಟ್ ಮುಖಾಂತರ ಕೇಂದ್ರಕ್ಕೆ ಸಲಹೆ ನೀಡಿದ್ದಾರೆ. ಚೀನಾದ ದೋಷಯುಕ್ತ ಕೊರೊನಾ ವೈರಸ್ ಪರೀಕ್ಷಾ ಕಿಟ್ಗಳನ್ನು ಅವಲಂಬಿಸುವ ಬದಲು, ಕೇರಳದ ಸಂಸ್ಥೆಗಳು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪರೀಕ್ಷಾ ವಿಧಾನಗಳನ್ನು ಬಳಸುವುದು  ಉತ್ತಮ. ಈ ವಿಧಾನವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅನುಮೋದಿಸಬೇಕು ಎಂದು ಹೇಳಿದ್ದಾರೆ.

ಬೆಂಗಳೂರು: ಕೊರೊನಾ ಸೋಂಕಿತ ರೋಗಿಗಳಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಸರ್ಕಾರ ಮುಂದಾಗಿದೆ. ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ಚಾಲನೆ ನೀಡಿದರು. ಇಂದು ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿ ಪ್ರಯೋಗ ಆರಂಭವಾಗಿದ್ದು, ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಮೊದಲ ಪ್ಲಾಸ್ಮಾ ಥೆರಪಿ ಕ್ಲಿನಿಕಲ್ ಟ್ರಯಲ್​​ಗೆ ಚಾಲನೆ ನೀಡಲಾಗಿದೆ. ಕೊರೊನಾದಿಂದ ಗುಣಮುಖರಾದ ಇಬ್ಬರು ಪ್ಲಾಸ್ಮಾ ದಾನ ಮಾಡಲು ಮುಂದೆ ಬಂದಿದ್ದಾರೆ. ಪ್ಲಾಸ್ಮಾ ವಿಂಗಡಣೆ ಒಂದು […]

ಭಾರತ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಬಡವರು, ಕೂಲಿ ಕಾರ್ಮಿಕರಿಗೆ ಆರ್ ಎಸ್ ಎಸ್ ಕಾರ್ಯಕರ್ತರು ಆಹಾರ ಪದಾರ್ಥಗಳ ಕಿಟ್ ವಿತರಿಸಿಕೊಂಡು ಬರುತ್ತಿದ್ದು, ಇಂದು ಕಾಡುಗುಡಿ ಸಮೀಪದ ದಿನ್ನೂರು ಗ್ರಾಮದಲ್ಲಿ ನೆಲೆಸಿರುವ ಮಂಗಳಮುಖಿಯರ ಕಷ್ಟವನ್ನು ಕಂಡು ಅವರಿಗು ಸಹ  ಆರ್.ಎಸ್.ಎಸ್ ಕಾರ್ಯಕರ್ತ ಹರಿಕೃಷ್ಣ ಯಾದವ್ ಹಾಗೂ ತಂಡದವರು ಆಹಾರ ಪದಾರ್ಥಗಳು ಹಾಗೂ ತರಕಾರಿಗಳ ಕಿಟ್ ವಿತರಿಸಿದರು.

ಮಂಡ್ಯ:  ಮಂಡ್ಯದಲ್ಲಿ ಶಾಸಕನ ಪುತ್ರನೊಬ್ಬ ಮನೆ ಸಮೀಪ ಕೊರೊನಾ ಟೆಸ್ಟ್ ಮಾಡಬೇಡಿ ಎಂದು ಕ್ಯಾತೆ ತೆಗೆದು ಮಾಧ್ಯಮದ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಮಂಡ್ಯ ಎಂಎಲ್ಸಿ ಕೆ.ಟಿ ಶ್ರೀಕಂಠೇಗೌಡ ಮಗ ಹಲ್ಲೆ ನಡೆಸಿದ್ದಾನೆ.  ಪತ್ರಕರ್ತರಿಗೆ ಕೋವಿಡ್ ಟೆಸ್ಟ್ ನಡೆಸಲು ಶಾಸಕ ಶ್ರೀಕಂಠೇಗೌಡ ಮನೆ ಸಮೀಪದ  ಅಂಬೇಡ್ಕರ್ ಭವನದಲ್ಲಿ ಜಾಗ ಗುರುತು ಮಾಡಲಾಗಿತ್ತು. ಅಂಬೇಡ್ಕರ್ ಭವನಕ್ಕೆ ಪತ್ರಕರ್ತರು ಆಗಮಿಸುತ್ತಿದ್ದಂತೆ ಶ್ರೀಕಂಠೇಗೌಡ ಮಗ ಮಾಧ್ಯಮದವರ ಮೇಲೆ ಗಲಾಟೆ ಮಾಡಿ […]

Advertisement

Wordpress Social Share Plugin powered by Ultimatelysocial