ಗದಗ: ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಅವರು ತಮ್ಮ ಕ್ಷೇತ್ರದ ಭದ್ರತೆ ಬಗ್ಗೆ ಕಾಳಜಿ ವಹಿಸಿದ್ದು ತಪ್ಪಲ್ಲ. ಎಂದು ಶಾಸಕ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ. ಗದಗನಲ್ಲಿ ಪಾದರಾಯನಪುರ ಆರೋಪಿಗಳ ಸ್ಥಳಾಂತರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಅವರು ತಮ್ಮ ಕ್ಷೇತ್ರದ ಭದ್ರತೆ ಬಗ್ಗೆ ಕಾಳಜಿ ವಹಿಸಿದ್ದು ತಪ್ಪಲ್ಲ. ಗ್ರೀನ್ ಝೋನ್ ಜಿಲ್ಲೆಗೆ ಆರೋಪಿಗಳನ್ನು ಸ್ಥಳಾಂತರಿಸಿದ್ದು ತಪ್ಪು. ಹಾಗಾಗಿ ರಾಮನಗರ ಜನರ ಹಿತದೃಷ್ಟಿಯಿಂದ ಕುಮಾರಸ್ವಾಮಿ ಹೇಳಿಕೆ ಸರಿಯಿದೆ. ಇದು ರಾಜಕೀಯ […]

ಬೆಂಗಳೂರು:  ಇಡೀ ಬೆಂಗಳೂರನ್ನೇ ಬಿಹಾರಿ ಪ್ರಕರಣ ಬೆಚ್ಚಿ ಬೀಳಿಸುತ್ತಿದೆ. ಈ ನಡುವೆ ಬಿಹಾರಿ ಕಾರ್ಮಿಕರು ಗಾಯಿತ್ರಿನಗರ ಜನರ ನೆಮ್ಮದಿ ಕೆಡಿಸಿದ್ದಾರೆ. ಗಾಯಿತ್ರಿನಗರದಲ್ಲಿ 7 ಜನ ಬಿಹಾರಿ ಕೂಲಿ ಕಾರ್ಮಿಕರು ಕಾಣಿಸಿಕೊಂಡಿದ್ದಾರೆ. ಬೆಳ್ಳಂಬೆಳಗ್ಗೆಯೇ ಗಾಯಿತ್ರಿನಗರದ ರಸ್ತೆಗಳಲ್ಲಿ ಬಿಹಾರಿ ಮೂಲದ ಕಾರ್ಮಿಕರು ಓಡಾಟ ಮಾಡಿದ್ದಾರೆ. ಅದರಲ್ಲೂ ಗ್ರೀನ್ ಜೋನ್‍ನಲ್ಲಿ ಕಾಣಿಸಿಕೊಂಡ ಕೂಲಿ ಕಾರ್ಮಿಕರಿಂದ ಆತಂಕ ಹೆಚ್ಚಾಗಿದೆ. ಈ ಮೂಲಕ ಹೊಂಗಸಂದ್ರ ಮಾತ್ರವಲ್ಲದೆ ಬೆಂಗಳೂರಿನ ಗ್ರೀನ್‍ಜೋನ್ ಆಗಿದ್ದ ಜಾಗಕ್ಕೂ ಕೂಲಿ ಕಾರ್ಮಿಕರು ಬಂದಿದ್ದಾರೆ. ಬಿಹಾರಿ […]

ಬೆಂಗಳೂರು : ರಾಜ್ಯದಲ್ಲಿ ಮಾರಕ ಕೊರೊನಾ ಸೋಂಕು ದಿನೇ ದಿನೇ ವ್ಯಾಪಕವಾಗಿ ಹರಡುತ್ತಿದೆ . ರಾಜ್ಯದಲ್ಲಿ ಇಂದು ಮತ್ತೆ 15 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 489ಕ್ಕೆ ಏರಿಕೆಯಾಗಿದೆ. ಈ ಕುರಿತಂತೆ ರಾಜ್ಯದ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ, ಇಂದು ಮತ್ತೆ 15 ಮಂದಿಯಲ್ಲಿ ಮಾರಕ ಸೋಂಕು ದೃಢಪಟ್ಟಿದೆ. ಹೊಸದಾಗಿ ಸೋಂಕು ಪೀಡಿತರ ಪೈಕಿ ಬೆಂಗಳೂರಿನವರು 6 ಮಂದಿ, ಬೆಳಗಾವಿಯಲ್ಲಿ 6 ಮಂದಿ. […]

ಮೃತ ಶರೀರರದ ಜೊತೆ ಕಠೋರವಾಗಿ ವರ್ತಿಸಿ ಎಂದು ಯಾವ ಧರ್ಮವೂ ಹೇಳಿಲ್ಲ ಎಂದು ಮಾಜಿ ಸಚಿವ ಯು ಟಿ ಖಾದರ್ ಹೇಳಿದ್ದಾರೆ. ಮಂಗಳೂರಿನಲ್ಲಿ  ಮಾತನಾಡಿದ ಅವರು,  ಕೊರೊನಾ ಸೋಂಕು ಕಾರಣದಿಂದ 75 ವರ್ಷದ ಮಹಿಳೆ ಅಸುನೀಗಿದ್ದು, ಆಕೆಯ ಅಂತ್ಯ ಸಂಸ್ಕಾರಕ್ಕೆ ಮಂಗಳೂರಿನ ಪಚ್ಚನಾಡಿ, ಬೋಳೂರು, ನಂದಿಗುಡ್ಡೆ, ಬಳಿಕ ಮೂಡುಶೆಡ್ಡೆ ಸ್ಮಶಾನಗಳಲ್ಲಿ ಅವಕಾಶ ನಿರಾಕರಿಸಿ ಜನರು ಪ್ರತಿಭಟನೆ ನಡೆಸಿದ್ದರು. ಶಾಸಕ ಭರತ್ ಶೆಟ್ಟಿ ಕೂಡಾ ಇಲ್ಲಿ ಅಂತ್ಯಕ್ರಿಯೆ ನಡೆಸಲು ಅವಕಾಶ ನಿರಾಕರಿಸಿದ್ದರು. ನಂತರ […]

ರಾಜ್ಯದಲ್ಲಿ ತುಘಲಕ್ ಸರ್ಕಾರ ಅಸ್ತಿತ್ವದಲ್ಲಿದೆ. ಸರ್ಕಾರ ಕೊರೊನಾ ಸೋಂಕಿತರನ್ನು ರಾಮನಗರಕ್ಕೆ ಕರೆತಂದು ಹುಡುಗಾಟ ಪ್ರದರ್ಶನ ಮಾಡಿದೆ’ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ರಾಮನಗರ ಕಾರಾಗೃಹಕ್ಕೆ ಕರೆತಂದಿದ್ದ ಐವರಲ್ಲಿ ಕೊರೊನಾ ಪತ್ತೆಯಾಗಿದೆ. ಆದರೆ ಮೂವರ ಪ್ರಕರಣ ಮುಚ್ಚಿ ಹಾಕಲು ಸರ್ಕಾರವೇ ಯತ್ನಿಸಿದೆ. ‘ಕೋವಿಡ್ ಪ್ರಕರಣಗಳಲ್ಲಿ ಸರ್ಕಾರ ದುಡ್ಡು ಹೊಡೆಯುವ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಬಹಿರಂಗಗೊಳಿಸುತ್ತೇನೆ’. ‘ಶ್ರೀರಂಗಪಟ್ಟಣದಲ್ಲಿ ಆಶಾ ಕಾರ್ಯಕರ್ತೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಯಾವೊಬ್ಬ […]

ಮೈಸೂರು: ನನ್ನ ಮೇಲಿನ ದ್ವೇಷಕ್ಕಾಗಿ ಜನರಿಗೆ ತೊಂದರೆ ಕೊಡಬೇಡಿ ಎಂದು ಬಂಧಿಖಾನೆ ಎಡಿಜಿಪಿ ಅಲೋಕ್ ಮೋಹನ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಪಾದರಾಯನಪುರ ಆರೋಪಿಗಳನ್ನು  ರಾಮನಗರ ಜೈಲಿಗೆ ಸ್ಥಳಾಂತರ ಮಾಡಿದ ಪ್ರಕರಣದ ಕುರಿತು ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಆಗಿದ್ದಾಗ ಅಲೋಕ್ ಮೋಹನ್ ಬೆಂಗಳೂರು ಪೊಲೀಸ್ ಕಮಿಷನರ್ ಆಗಬೇಕೆಂದು ಪ್ರಯತ್ನಿಸಿದ್ದರು. ಅವರ ಹಿನ್ನೆಲೆ ಗೊತ್ತಿದ್ದ ಕಾರಣಕ್ಕೆ ನಾನು ನೇಮಕ ಮಾಡಲಿಲ್ಲ. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಹೀಗೆಲ್ಲ ಮಾಡಿದ್ದಾರೆ. ನನ್ನ ಮೇಲಿನ ಕೋಪಕ್ಕೆ […]

ಕೊರೊನಾ ಬಂದವರನ್ನು ಅಸಹ್ಯದಿಂದ ಕಾಣುವುದು ಬೇಡ. 97% ರಷ್ಟು ಜನರಿಗೆ ಕೊರೊನಾ ಸೋಂಕು ತಗುಲಿದರೂ ವಾಸಿಯಾಗುತ್ತೆ” ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು”. ”ಕೊರೊನಾ ಬಂದವರನ್ನು ಅಸಹ್ಯದಿಂದ ಕಾಣುವುದು ಬೇಡ. ಶೇ.97 ರಷ್ಟು ಜನಕ್ಕೆ ಕೊರೊನಾ ಬಂದರೂ ವಾಸಿಯಾಗುತ್ತೆ. ಕೊರೊನಾ ಬಂದರೆ ಆತಂಕ ಪಡುವ ಅಗತ್ಯ ಇಲ್ಲ. ಬಹಳ ಜನ ಕೊರೊನಾ ಬಂದ್ರೆ ಕಳಂಕ ಅಂತ ಅನ್ಕೊಂಡಿದ್ದಾರೆ. ಕೊರೊನಾ ಸಹ ಬೇರೆ ವೈರಸ್ ಥರ ಒಂದು ವೈರಸ್ […]

ಬಡವರಿಗೆ ತಲುಪಬೇಕಾದ ಅಕ್ಕಿ ತಮಿಳುನಾಡಿನ ಪಾಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ  ಅವರು, ಅಕ್ಕಿ ಗೋಲ್‌ಮಾಲ್ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿದೆಯೇ ಇಲ್ಲವೋ ಎಂಬುದು ತಿಳಿದಿಲ್ಲ. ಹರಿಯಾಣದಿಂದ ಬಂದ ಅಕ್ಕಿಯನ್ನು ತಮಿಳುನಾಡಿನ ಹೊಸೂರು ವ್ಯಾಪಾರಿಗೆ ಮಾರಾಟ ಮಾಡಲಾಗಿದೆ. ಇದನ್ನು ಬಿಜೆಪಿಯ ಸಕ್ರಿಯ ನಾಯಕರೇ ವ್ಯಾಪಾರ ಮಾಡಿದ್ದಾರೆ. ಆಹಾರ ಕಾಯಿದೆಗೆ ಒಂದು ನಿಯಮ ಇದೆ. ಕಾನೂನು ಬಾಹಿರವಾಗಿ ಅಕ್ಕಿ ಮಾರಟ ಮಾಡಿದವರ ಮೇಲೆ ಸರ್ಕಾರ […]

ಬೆಂಗಳೂರು: ಪಾದರಾಯನಪುರ ಕೊರೊನಾ‌ ಸೋಂಕಿತ ಆರೋಪಿಗಳನ್ನು ರಾಮನಗರಕ್ಕೆ ಸ್ಥಳಾಂತರ ಮಾಡಿದ್ದು ಸರಿಯಲ್ಲ ಎಂದು ಸಂಸದ ಡಿ.ಕೆ‌.ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಜೈಲಿನಲ್ಲಿ 177 ಖೈದಿಗಳಿದ್ದರು. ಪಾದರಾಯನಪುರ ಸೋಂಕಿತರಿಗಾಗಿ ಖೈದಿಗಳನ್ನು ಜೈಲಿನಿಂದ ಸ್ಥಳಾಂತರ ಮಾಡಿಸಿದ್ದಾರೆ. ಪಾದರಾಯನಪುರ ಬಂಧಿತರನ್ನು ರಾಮನಗರದಲ್ಲಿ ಕ್ವಾರಂಟೈನ್ ಮಾಡಿದ್ದೇಕೆ?. ರಾಮನಗರ ಗ್ರೀನ್ ಝೋನ್ ನಲ್ಲಿದೆ. ಆದ್ದರಿಂದ ಇಲ್ಲಿಗೆ ಸ್ಥಳಾಂತರ ಬೇಡ ಎಂದು ಹೇಳಿದ್ದೆವು. ಆದರೂ ಸಹ ಬಿಜೆಪಿಯವರು ಉದ್ದೇಶಪೂರ್ವಕವಾಗಿ ರಾಮನಗರ ಜಿಲ್ಲೆಗೆ ಸೋಂಕು ಅಂಟಿಸುವ ಕೆಲಸ […]

ಪಾದರಾಯನಪುರ ಆರೋಪಿಗಳನ್ನು ರಾಮನಗರಕ್ಕೆ ಸ್ಥಳಾಂತರ ಮಾಡಿದ್ದರಲ್ಲಿ ತಪ್ಪಾಗಿಲ್ಲ, ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೊರೋನಾ ಹೋರಾಟದಲ್ಲಿ ಬೇರೆ ಬೇರೆ ಆಯಾಮಗಳು ಬರುತ್ತವೆ,‌ ಸಂದರ್ಭಕ್ಕೆ ತಕ್ಕಂತೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಪಾದರಾಯನಪುರ ಆರೋಪಿಗಳನ್ನು ಬೆಂಗಳೂರಿನ‌ ಹಜ್ ಭವನಕ್ಕೆ ಶಿಫ್ಟ್ ಮಾಡಿದ್ದೇವೆ. ಜೈಲು ಸಿಬ್ಬಂದಿಗೂ ಪರೀಕ್ಷೆ ಮಾಡಿ ಕ್ವಾರಂಟೈನ್‌ಗೂ ಒಳಪಡಿಸುತ್ತೇವೆ. ಇಲ್ಲೂ ಪೊಲೀಸರಿಗೆ ತಪಾಸಣೆ ಮಾಡಿ ಅಗತ್ಯಬಿದ್ದರೆ ಕ್ವಾರಂಟೈನ್ ಮಾಡ್ತೇವೆ. ಏನೇ ಮಾಡಿದರೂ ಆಪಾದನೆ ಬಂದೇ […]

Advertisement

Wordpress Social Share Plugin powered by Ultimatelysocial