ಹೋಳಿ ಹಬ್ಬಕ್ಕೆ ಶುಭ ಕೋರುವ ವೇಳೆ ಎಡವಟ್ಟು; ಟ್ರೋಲ್ ಗೊಳಗಾದ ಪಾಕ್ ಮಾಜಿ ಪ್ರಧಾನಿ.!

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹೋಳಿ ಹಬ್ಬಕ್ಕೆ ಶುಭಕೋರುವ ವೇಳೆ ಮಾಡಿರುವ ಎಡವಟ್ಟಿನಿಂದಾಗಿ ಮುಜುಗರಕ್ಕೀಡಾಗಿದ್ದಾರೆ. ಹೋಳಿ ಹಬ್ಬಕ್ಕೆ ಶುಭ ಕೋರುತ್ತಾ ದೀಪದ ಎಮೋಜಿ ಬಳಸಿದ್ದಾರೆ.ಇದರಿಂದಾಗಿ ಅವರ ಟ್ವೀಟ್ ಟ್ರೋಲ್ ಆಗ್ತಿದೆ. ಅವರು ಟ್ವಿಟರ್‌ನಲ್ಲಿ ಭಾರೀ ಟ್ರೋಲ್‌ಗೆ ಒಳಗಾಗಿದ್ದು ಅವರ ಪೋಸ್ಟ್ ನ ಸ್ಕ್ರೀನ್‌ಶಾಟ್‌ಗಳನ್ನು ಈಗ ಹಲವಾರು ವೆಬ್‌ಸೈಟ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಹಿಂದೂ ಸಂಪ್ರದಾಯಗಳ ಪ್ರಕಾರ ದೀಪಾವಳಿ ಹಬ್ಬದ ಸಮಯದಲ್ಲಿ ಮನೆಯನ್ನು ಅಲಂಕರಿಸಲು ದೀಪವನ್ನು ಬಳಸಲಾಗುತ್ತದೆ ಮತ್ತು ದೀಪಗಳ ಹಬ್ಬವಾದ ದೀಪಾವಳಿಗೆ ಶುಭ ಹಾರೈಸಲು ದೀಪದ ಎಮೋಜಿಯನ್ನು ಬಳಸಲಾಗುತ್ತದೆ.

ಆದರೆ ಹೋಳಿ ಹಬ್ಬಕ್ಕೆ ನವಾಜ್ ಷರೀಫ್ ದೀಪದ ಎಮೋಜಿ ಬಳಸಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಅವರಿಗೆ ದೀಪಾವಳಿ ಮತ್ತು ಹೋಳಿ ಹಬ್ಬಗಳ ನಡುವಿನ ವ್ಯತ್ಯಾಸದ ಬಗ್ಗೆ ಹೇಳ್ತಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಂಕಲಿ ಗ್ರಾಮದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿಕೆ,

Wed Mar 8 , 2023
ಅಂಕಲಿ ಗ್ರಾಮದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿಕೆ, ವಿಜಯ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ, ಈ ಬಾರಿ ನಿಶ್ಚಿತವಾಗಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೆ, ವಿಜಯ ಸಂಕಲ್ಪ ಯಾತ್ರೆಗೆ ಜಮ ಬೆಂಬಲ ವ್ಯಕ್ತವಾಯಿತು, ಕಾಂಗ್ರೆಸ್ ನವರು ಮುಖ್ಯಮಂತ್ರಿ ಕುರ್ಚಿ ಮೇಲೆ ಟವಲ್ ಹಾಕಿಕೊಂಡು ಕುಳಿತಿದ್ರೂ, ಅವರಿಗೆ ಸೋಲು ಖಚಿತ ಅಂತಾ ಗೊತ್ತಾದ ಬಳಿಕ ಬಾಯಿಗೆ ಬಂದ ಹಾಗೇ ಮಾತನಾಡಲು ಶುರು ಮಾಡಿದ್ದಾರೆ, ಒಂದೊಂದೇ ರಾಜ್ಯಗಳಲ್ಲಿ ಸೋಲಿನ […]

Advertisement

Wordpress Social Share Plugin powered by Ultimatelysocial