ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ; 7 ಆರೋಪಿಗಳು ಅರೆಸ್ಟ್; 12 ಜನರು ವಶಕ್ಕೆ; ಸ್ಪಷ್ಟನೆ ನೀಡಿದ ADGP

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಆರೋಪಿಗಳನ್ನು ಬಂಧಿಸಲಾಗಿದ್ದು, 12 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಡಿಜಿಪಿ ಮುರುಗನ್ ತಿಳಿಸಿದ್ದಾರೆ.

ಅಫಾನ್, ಚಿಕು, ಖಾಸಿಫ್ ಅಲಿಯಾಸ್ ಖಾಸಿ, ಸಲ್ಮಾನ್ ಸೇರಿದಂತೆ 7 ಆರೋಪಿಗಳು ಬಂಧಿತರಾಗಿದ್ದು, 12 ಆರೋಪಿಗಳ ವಿಚಾರಣೆ ನಡೆದಿದೆ.

ತನಿಖೆ ಚುರುಕುಗೊಳಿಸಲಾಗಿದ್ದು, ಹತ್ಯೆ ಪ್ರಕರಣದ ಬಗ್ಗೆ ತನಿಖೆ ಬಳಿಕ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದರು.

ಶಿವಮೊಗ್ಗದಲ್ಲಿ ನಡೆದ ಘಟನೆ ಬಗ್ಗೆ ಈವರೆಗೆ 8 ಎಫ್‌ಐಆರ್ ದಾಖಲಾಗಿದೆ. 144 ಸೆಕ್ಷನ್ ಹಾಗೂ ಕರ್ಫ್ಯೂ ಮುಂದುವರೆಸಲಾಗಿದೆ. ಶಾಲಾ-ಕಾಲೇಜುಗಳಿಗೂ ಇಂದು ಕೂಡ ರಜೆ ನೀಡಲಾಗಿದೆ ಎಂದರು.

ಸಧ್ಯ ಶಿವಮೊಗ್ಗ ಜಿಲ್ಲೆಯಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಯಾವುದೇ ಆತಂಕಕಾರಿ ವಾತಾವರಣವಿಲ್ಲ. ಜನರು ಎಂದಿನಂತೆ ಸಹಜವಾಗಿ ತಮ್ಮ ಕೆಲಸ, ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : `KPSC' ಯಿಂದ ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆ ಹುದ್ದೆಗಳಿಗೆ ಅರ್ಜಿ ಆಹ್ವಾನ

Tue Feb 22 , 2022
ಬೆಂಗಳೂರು : ಉದ್ಯೋಗಾಕಾಂಕ್ಚಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗ (KPSC) ಭರ್ಜರಿ ಸಿಹಿಸುದ್ದಿ ನೀಡಿದ್ದು, ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆಯಲ್ಲಿ 188 ಸಹಾಯಕ ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ಕೆಪಿಎಸ್ ಸಿ ಅಧಿಸೂಚನೆ ಹೊರಡಿಸಿದೆ.ಹೈದರಾಬಾದ್ ಕರ್ನಾಟಕದ 59 ಹುದ್ದೆಗಳ ಸೇರಿದಂತೆ ಒಟ್ಟು 188 ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆ ಹೊರಡಿಸಿದೆ.ಪ್ರಮುಖ ದಿನಾಂಕಗಳುಅರ್ಜ ಸಲ್ಲಿಸಲು ಪ್ರಾರಂಭಿಕ ದಿನಾಂಕ -28-02-2022ಅರ್ಜಿ ಸಲ್ಲಿಸಲು ಕೊನೆ ದಿನಾಂಕ -30-03-2022ಶುಲ್ಕ ಪಾವತಿಸಲು ಕೊನೆಯ ದಿನಾಂಕ -31-03-2022ವಿದ್ಯಾರ್ಹತೆ […]

Advertisement

Wordpress Social Share Plugin powered by Ultimatelysocial