‘ಬನಾರಸ್’ ಚಿತ್ರದಲ್ಲಿ ಸಂಪೂರ್ಣ ಹಳೆ ಕಾಶಿಯನ್ನು ನೋಡಬಹುದು

ಜಯತೀರ್ಥ ನಿರ್ದೇಶನದ ‘ಬನಾರಸ್‌’ ಸಿನಿಮಾ ಕಾವ್ಯಾತ್ಮಕ ಪ್ರೇಮಕಥೆ ಎಂದು ಈ ಹಿಂದೆ ನಿರ್ದೇಶಕರೇ ಹೇಳಿದ್ದರು. ಈ ಚಿತ್ರದಲ್ಲಿ ಪ್ರೇಮಕಥೆಯ ಜತೆಗೆ ಇದುವರೆಗೂ ಕನ್ನಡಿಗರು ಸಿನಿಮಾಗಳಲ್ಲಿ ನೋಡಿರದ ಕಾಶಿಯನ್ನು ತೋರಿಸಲಾಗಿದೆ ಎಂದಿದ್ದಾರೆ ಜಯತೀರ್ಥ. ಬನಾರಸ್‌ ಹಿಂದೂಗಳ ಪವಿತ್ರ ಕ್ಷೇತ್ರ. ಜೀವನ ಪರ್ಯಂತ ಮಾಡಿದ ಪಾಪವನ್ನೆಲ್ಲ ಕಾಶಿಗೆ ಹೋಗಿ ಕಳೆದುಕೊಳ್ಳಬಹುದು ಎಂಬ ಅಭಿಪ್ರಾಯ ಹಲವರಲ್ಲಿದೆ. ಇಂತಹ ಒಂದು ಕ್ಷೇತ್ರದಲ್ಲಿ ಇಡೀ ಸಿನಿಮಾವನ್ನು ಜಯತೀರ್ಥ ಚಿತ್ರೀಕರಣ ಮಾಡಿದ್ದಾರೆ.’ಬನಾರಸ್‌ ಒಂದು ಸಾಂಸ್ಕೃತಿಕ ಶಕ್ತಿ ಕೇಂದ್ರ. ಈ ಸ್ಥಳದಲ್ಲಿ ಚಿತ್ರೀಕರಣ ಮಾಡುತ್ತಾ ಮಾಡುತ್ತಾ ಈ ಊರೇ ಒಂದು ಪಾತ್ರವಾಗಿ ಬಿಡ್ತು. ನನ್ನ ಸಿನಿಮಾದ ಕಥೆಯನ್ನು ಸಹ ಈ ಬನಾರಸ್‌ ಮೀರಿದೆ ಎಂದರೆ ತಪ್ಪಾಗುವುದಿಲ್ಲ. ಆ ಊರಿನಲ್ಲಿ ಒಂದು ದೈವತ್ವವಿದೆ. ಸಾಕಷ್ಟು ಜನರು ಪ್ರವಾಸಕ್ಕೆಂದು ಬನಾರಸ್‌ಗೆ ಹೋಗುತ್ತಾರೆ. ಅವರೆಲ್ಲರೂ ನೋಡದ ಹಲವು ಸ್ಥಳಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಅವರಾರಿಗೂ ಸಿಗದ ಕಾಶಿ ನನಗೆ ಸಿಕ್ಕಿದೆ. ನನ್ನ ಪ್ರಕಾರ ಈ ಸಿನಿಮಾದ ಅತಿ ಮುಖ್ಯ ಪಾತ್ರ ಬನಾರಸ್‌’ ಎಂದಿದ್ದಾರೆ ಜಯತೀರ್ಥ’ಸ್ಕ್ರೀನ್‌ ಪ್ಲೇಯಲ್ಲಿ ಪ್ರೇಮಕಥೆ ಹೇಳುತ್ತಾ ಹೋದಂತೆ, ಕಾಶಿಯ ಅನಾವರಣ ಆಗುತ್ತದೆ. ಒಂದು ಕೋಣೆಯಲ್ಲಿಯೂ ಪ್ರೇಮಕಥೆ ತೋರಿಸಬಹುದು. ಆದರೆ ನಾನು ವಾರಾಣಸಿ ನಗರವನ್ನು ಯಾಕೆ ಆಯ್ಕೆ ಮಾಡಿಕೊಂಡೆ ಎಂಬುದು ಚಿತ್ರ ನೋಡಿದವರಿಗೆ ತಿಳಿಯುತ್ತದೆ. ಹಲವು ದೃಶ್ಯಗಳಲ್ಲಿ ಡಿವೈನಿಟಿ ಸೇರಿಕೊಂಡಿದೆ. ಆ ರೀತಿಯ ಡಿವೈನಿಟಿ ನನಗೆ ವಾರಾಣಸಿಯಲ್ಲಿ ಚಿತ್ರೀಕರಣ ಮಾಡಿದ್ದರಿಂದ ಮಾತ್ರ ದೊರೆಯಿತು ಎನ್ನಬಹುದು. ಈ ಕಾರಣಕ್ಕೆ ಸಿನಿಮಾ ನೋಡುಗರನ್ನು ತನ್ನೊಳಗೆ ಇಳಿಸಿಕೊಳ್ಳುತ್ತದೆ’ ಎಂದಿದ್ದಾರೆ ನಿರ್ದೇಶಕರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಹುಟ್ಟುಹಬ್ಬಕ್ಕೆಂದು ದುಬೈಗೆ ತೆರಳಿದ ಯಶ್ & ಫ್ಯಾಮಿಲಿ

Sat Jan 7 , 2023
ರಾಕಿಂಗ್ ಸ್ಟಾರ್ ಯಶ್ ಇದೀಗ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ‘ಕೆಜಿಎಫ್: ಚಾಪ್ಟರ್ 1’ ಹಾಗೂ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾಗಳ ಮೂಲಕ ನಟ ಯಶ್ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದಾರೆ. ‘ಕೆಜಿಎಫ್: ಚಾಪ್ಟರ್ 2’ ಬಳಿಕ ನಟ ಯಶ್ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದರ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಹೀಗಿರುವಾಗಲೇ, ನಟ ಯಶ್ ವಿದೇಶಕ್ಕೆ ಹಾರಿದ್ದಾರೆ.ಹೌದು.. ಜನವರಿ 8 ರಂದು ನಟ ಯಶ್ ಅವರ ಜನ್ಮದಿನ. […]

Advertisement

Wordpress Social Share Plugin powered by Ultimatelysocial