ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರಿನಲ್ಲಿ ಆರಂಭಿಸುತ್ತಿರುವ ಸ್ನಾತಕೋತ್ತರ ವೈದ್ಯಕೀಯ ಶಾಲೆ!

 

ಬೆಂಗಳೂರು: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಬೆಂಗಳೂರಿನಲ್ಲಿ ಆರಂಭಿಸುತ್ತಿರುವ ಸ್ನಾತಕೋತ್ತರ ವೈದ್ಯಕೀಯ ಶಾಲೆ ಹಾಗೂ 800 ಹಾಸಿಗೆಗಳ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ‘ಮಿಡ್‌ಟ್ರೀ’ ಸಂಸ್ಥೆ 425 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದೆ.ಸುಶ್ಮಿತಾ ಮತ್ತು ಸುಬ್ರೋತೊ ಬಾಗ್ಚಿ ದಂಪತಿ, ರಾಧಾ ಮತ್ತು ಎನ್‌ಎಸ್‌ ಪಾರ್ಥಸಾರಥಿ ಅವರು ಈ ಬೃಹತ್‌ ಮೊತ್ತದ ದೇಣಿಗೆಯನ್ನು ನೀಡಿದ್ದಾರೆ. ಬಾಗ್ಚಿ ಮತ್ತು ಪಾರ್ಥಸಾರಥಿ ‘ಮೈಂಡ್‌ಟ್ರೀ’ಯ ಸ್ಥಾಪಕ ತಂಡದ ಭಾಗವಾಗಿದ್ದಾರೆ. ಈ ದೇಣಿಗೆಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆ ಎಂದು ಹೆಸರಿಡಲು ನಿರ್ಧರಿಸಲಾಗಿದೆ.ಸುಶ್ಮಿತಾ ಮತ್ತು ಸುಬ್ರೋತೊ ಬಾಗ್ಚಿ ದಂಪತಿಯೊಂದಿನ ಪಾಲುದಾರಿಕೆ ಒಪ್ಪಂದಕ್ಕೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಹಿ ಹಾಕಿದೆ. ಅಹಮದಾಬಾದ್ ಮೂಲದ ವಾಸ್ತುಶಿಲ್ಪಿ ಆರ್ಚಿ ಮೆಡೆಸ್ ಆಸ್ಪತ್ರೆ ಕಟ್ಟಡವನ್ನು ವಿನ್ಯಾಸಗೊಳಿಸಿದ್ದಾರೆ.ಈ ಕಾಲೇಜಿನಲ್ಲಿ ಎಂಡಿ-ಪಿಎಚ್‌ಡಿ ತರಬೇತಿ ನೀಡಲಾಗುವುದು. ಆಸ್ಪತ್ರೆಯ ಜತೆಜತೆಗೇ ವಿಜ್ಞಾನ ಮತ್ತು ಇಂಜಿನಿಯರಿಂಗ್‌ ಪ್ರಯೋಗಾಲಯಗಳು ಐಐಎಸ್ಸಿ ಕ್ಯಾಂಪಸ್‌ನಲ್ಲಿ ಲಭ್ಯವಿವೆ.ಬರುವ ಜೂನ್‌ ತಿಂಗಳಿನಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದ್ದು, ಆಸ್ಪತ್ರೆಯು 2024 ರ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸಲಿದೆ. ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆಯು ರೋಗನಿರ್ಣಯ, ಚಿಕಿತ್ಸೆ ಮತ್ತು ಸಂಶೋಧನೆಗಾಗಿ ಸುಧಾರಿತ ಸೌಲಭ್ಯಗಳನ್ನು ಹೊಂದಿರುತ್ತದೆ. ಆಸ್ಪತ್ರೆಯು ಸುಧಾರಿತ ಡಿಜಿಟಲ್ ತಂತ್ರಜ್ಞಾನಗಳನ್ನು ಹೊಂದಿರಲಿದೆ. ಇಲ್ಲಿ ಸಮಗ್ರ ಇಲೆಕ್ಟ್ರಾನಿಕ್ ವೈದ್ಯಕೀಯ ದಾಖಲೆ ವ್ಯವಸ್ಥೆಗಳನ್ನು ಅಳವಡಿಸಲಾಗುವುದು ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಷ್ಯಾದೊಂದಿಗಿನ ಯುದ್ಧವನ್ನು ತಪ್ಪಿಸಲು ಉಕ್ರೇನ್ ನ್ಯಾಟೋ ಬಿಡ್ ಅನ್ನು ಕೈಬಿಡಲಿದೆಯೇ? ವರದಿಗಳು ಏನು ಹೇಳುತ್ತವೆ ಎಂಬುದು ಇಲ್ಲಿದೆ

Mon Feb 14 , 2022
  ರಷ್ಯಾದೊಂದಿಗಿನ ಯುದ್ಧವನ್ನು ತಪ್ಪಿಸಲು ಉಕ್ರೇನ್ NATO ಗೆ ಸೇರಲು ತನ್ನ ಪ್ರಯತ್ನವನ್ನು ಕೈಬಿಡಬಹುದು, BBC ಬ್ರಿಟನ್‌ನ ದೇಶದ ರಾಯಭಾರಿಯನ್ನು ಉಲ್ಲೇಖಿಸಿ, ಮಾಸ್ಕೋಗೆ ತನ್ನ ಗಡಿಗಳಲ್ಲಿ ರಷ್ಯಾದ ಸೈನ್ಯವನ್ನು ನಿರ್ಮಿಸಲು ಪ್ರತಿಕ್ರಿಯೆಯಾಗಿ ಪ್ರಮುಖ ರಿಯಾಯಿತಿಯನ್ನು ನೀಡುತ್ತದೆ. ಅಟ್ಲಾಂಟಿಕ್ ಮಿಲಿಟರಿ ಮೈತ್ರಿಗೆ ಸೇರುವ ಗುರಿಯ ಮೇಲೆ “ಹೊಂದಿಕೊಳ್ಳುವ” ಉಕ್ರೇನ್ ಸಿದ್ಧವಾಗಿದೆ ಎಂದು ರಾಯಭಾರಿ ವಾಡಿಮ್ ಪ್ರಿಸ್ಟೈಕೊ ಬಿಬಿಸಿಗೆ ತಿಳಿಸಿದರು, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈ ಕ್ರಮವು ಯುದ್ಧಕ್ಕೆ ಪ್ರಚೋದಕವಾಗಿದೆ ಎಂದು […]

Advertisement

Wordpress Social Share Plugin powered by Ultimatelysocial