ಬೆಂಗಳೂರಿಗರೇ ಎಚ್ಚರ ಎಚ್ಚರ..! – ಸಿಲಿಕಾನ್‌ ಸಿಟಿಯಲ್ಲೂ ಚಿರತೆಗಳ ಓಡಾಟ

ಹಳ್ಳಿಕಡಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಈಗ ನಗರದತ್ತ ಪಯಣ ಬೆಳೆಸಿದೆ. ಸಿಲಿಕಾನ್‌ ಸಿಟಿಯಲ್ಲಿ ಇದೀಗ ಚಿರತೆಗಳ ಓಡಾಟ ಜೋರಾಗಿದೆ. ಬೆಂಗಳೂರಿನ (Bengaluru) ತುರಹಳ್ಳಿ ಫಾರೆಸ್ಟ್‌ನ ಸುತ್ತಾಮುತ್ತಾ ಸೇರಿದಂತೆ ನಾಲ್ಕು ಕಡೆ ಚಿರತೆ ಕಾಣಿಸಿಕೊಂಡಿದೆ. ಬೆಂಗಳೂರಿನಲ್ಲಿ ಸರಿಸುಮಾರು 30-35 ಚಿರತೆಗಳಿದ್ದು, ಬನ್ನೇರುಘಟ್ಟದಲ್ಲಿ ಸುಮಾರು 40-45 ಚಿರತೆಗಳ ಓಡಾಟ ಇದೆ. ಬೆಂಗಳೂರು ನಗರದ ಸುತ್ತಮುತ್ತ ಚಿರತೆ ಓಡಾಟ ಹೆಚ್ಚಾಗಿದ್ದು ಜನರಲ್ಲಿ ಭೀತಿ ಶುರುವಾಗಿದೆ. ಈ ಹಿನ್ನಲೆ ಯಾರೂ ಕೂಡ ರಾತ್ರಿ ಹೊತ್ತು ಒಂಟಿಯಾಗಿ ಹೊರಗಡೆ ಓಡಾಡಬೇಡಿ ಎಂದು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ (Sanjay Gubbi) ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಯಾರೂ ಕೂಡ ಭಯ ಪಡೋದು ಬೇಡ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಿ ಎಂದು ವನ್ಯಜೀವಿ ಸಂದರ್ಶಕರು ಸಂದೇಶ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ.

Sat Dec 3 , 2022
ಮೊದಲು ಚಿರತೆ ಹಾವಳಿ ಕಾಡು ಪಕ್ಕದಲ್ಲಿ ಅಗ್ತಿತ್ತು ಇವಾಗ ಬೆಂಗಳೂರಲ್ಲಿ ಆಗ್ತಿದೆ ಇವಾಗ ಅದನ್ನು ಬೇಟೆ ಆಡಲು ಅಗತ್ಯ ಸೂಚನೆ ನೀಡಿದ್ದೇನೆ ಅದನ್ನು ಆದಷ್ಟು ಬೇಗ ಹಿಡಿದು ಕಾಡಿಗೆ ಬಿಡಲು ಸೂಚಿಸಲಾಗಿದೆ ಚಿರತೆ ಹಾವಳಿಯಿಂದ ಮೃತಪಟ್ಟವರಿಗೆ ಪರಿಹಾರ ಘೋಷಣೆ ತಲಾ 15 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಸಿಎಂ ಬೊಮ್ಮಾಯಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ. ಚಿರತೆ ಹಾವಳಿ ಬಗ್ಗೆ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದೆ ಕಳೆದ ಕೆಲವು ದಿನಗಳಿಂದ ಅದರ […]

Advertisement

Wordpress Social Share Plugin powered by Ultimatelysocial