ಮಹಿಳೆಯೊಬ್ಬಳು ಹೊಟ್ಟೆಯಿಂದ ಬರೋಬ್ಬರಿ 47 ಕೆಜಿ ತೂಕದ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ​

 

ಅಹಮದಾಬಾದ್​: ಗುಜರಾತಿನ ಅಹಮದಾಬಾದ್​ನಲ್ಲಿರುವ ಅಪೊಲೋ ಆಸ್ಪತ್ರೆಯ 8 ವೈದ್ಯರ ತಂಡವೊಂದು 56 ವರ್ಷದ ಮಹಿಳೆಯೊಬ್ಬಳು ಹೊಟ್ಟೆಯಿಂದ ಬರೋಬ್ಬರಿ 47 ಕೆಜಿ ತೂಕದ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ​

ಮಹಿಳೆಯು ಸುಮಾರು 18 ವರ್ಷಗಳಿಂದ ಗಡ್ಡೆಯನ್ನು ತನ್ನ ಹೊತ್ತುಕೊಂಡು ಭಾರೀ ಶ್ರಮ ಪಟ್ಟಿದ್ದಳು.

ಆದರೆ, ಕೆಲ ತಿಂಗಳುಗಳಿಂದ ಹೊಟ್ಟೆ ತುಂಬ ಭಾರವಾಗಿ ನಡೆದಾಡುವುದು ಕೂಡ ಕಷ್ಟವಾಗಿತ್ತು. ಹೀಗಾಗಿ ಸದಾ ಬೆಡ್​ ಮೇಲೆಯೇ ಮಲಗಿರುತ್ತಿದ್ದಳು. ಕೊನೆಗೆ ಉಸಿರಾಟಕ್ಕೂ ತೊಂದರೆಯಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವುದೇ ಸರಿ ಅಂದುಕೊಂಡು ಅಹಮದಾಬಾದ್​ನ ಅಪೊಲೋ ಆಸ್ಪತ್ರೆಗೆ ಮಹಿಳೆ ದಾಖಲಾದಳು.

ಚೀಫ್ ಗ್ಯಾಸ್ಟ್ರೋಎಂಟರಾಲಜಿಸ್ಟ್​ ನೇತೃತ್ವದ ನಾಲ್ವರು ನುರಿತ ವೈದ್ಯರನ್ನೊಳಗೊಂಡ ವೈದ್ಯಕೀಯ ತಂಡವು ಸರ್ಜರಿಯನ್ನು ಯಶಸ್ವಿಗೊಳಿಸಿದೆ. ಅಂಗಾಂಶಗಳ ಸುತ್ತ ಬೆಳೆದಿದ್ದ ಹೆಚ್ಚುವತಿ ಚರ್ಮವನ್ನು ತೆಗೆಯುವ ಮೂಲಕ ಸುಮಾರು 47 ಕೆಜಿ ಭಾರವನ್ನು ಕಡಿಮೆ ಮಾಡಲಾಗಿದೆ. ಸುಮಾರು 18 ವರ್ಷಗಳಿಂದ ಭಾರವನ್ನು ಹೊತ್ತುಕೊಂಡು ಬಳಲಿದ್ದ ಮಹಿಳೆ ಇದೀಗ ನೆಮ್ಮದಿಯ ನಿಟ್ಟುಸಿರುವ ಬಿಟ್ಟಿದ್ದಾರೆ.

ಶಸ್ತ್ರಚಿಕಿತ್ಸೆಗೂ ಮುನ್ನ ರೋಗಿಯು ತೂಕವನ್ನು ನೋಡಿರಲಿಲ್ಲ. ಆದರೆ, ಪ್ರಸ್ತುತ ಆಕೆಯ ತೂಕ 49 ಕೆ.ಜಿ. ಇದೆ. 56 ವರ್ಷದ ಮಹಿಳೆಯ ದೇಹದಿಂದ 47 ಕೆಜಿ ತೂಕದ ಗಡ್ಡೆಯನ್ನು ತೆಗೆಯಲಾಗಿದೆ. ಫೆಬ್ರವರಿ 15 ರಂದು ಅಹಮದಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದಿದೆ.

‘ತೆಗೆದ ಗಡ್ಡೆಯು ಮಹಿಳೆಯ ತೂಕಕ್ಕಿಂತ ಹೆಚ್ಚಿತ್ತು. ಗಡ್ಡೆ ನಿರಂತರ ಬೆಳೆಯುವುದರಿಂದ ಆಂತರಿಕ ಅಂಗಗಳ ಸ್ಥಾನಗಳನ್ನು ಬದಲಾಯಿಸಲು ಕಾರಣವಾಗುತ್ತದೆ. ಹೊಟ್ಟೆಗೆ ಅಂಟಿಕೊಂಡಿರುವ ಗಡ್ಡೆಯ ಒತ್ತಡದಿಂದ ಹೃದಯ, ಶ್ವಾಸಕೋಶ, ಕಿಡ್ನಿ, ಮೂತ್ರಕೋಶದ ಭಾಗಗಳು ಬಾಧಿಸುತ್ತವೆ ವೈದ್ಯರೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್​)

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮದುವೆ ಸಂಭ್ರಮದ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ 11 ಮಂದಿ

Thu Feb 17 , 2022
ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ 11 ಮಂದಿ ದುರಂತ ಸಾವಿಗೀಡಾಗಿರುವ ಘನಘೋರ ಘಟನೆ ಉತ್ತರ ಪ್ರದೇಶದ ಕುಶಿನಗರದಲ್ಲಿ ಬುಧವಾರ (ಫೆ.16) ತಡರಾತ್ರಿ ನಡೆದಿದೆ. ಸ್ಥಳೀಯ ಅಧಿಕಾರಿಗಳ ಪ್ರಕಾರ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಮತ್ತು ಮಕ್ಕಳು ಹಳೆಯ ಬಾವಿಯನ್ನು ಮುಚ್ಚಿದ್ದ ಚಪ್ಪಡಿಯ ಮೇಲೆ ಕುಳಿತಿದ್ದರು. ಈ ವೇಳೆ ಹೆಚ್ಚು ಭಾರದಿಂದಾಗಿ ಚಪ್ಪಡಿ ಕುಸಿದಿದ್ದು, ಅದರ ಮೇಲಿದ್ದವರೆಲ್ಲ ಬಾವಿ ಒಳಗೆ ಬಿದ್ದಿದ್ದಾರೆ. ತಕ್ಷಣ ಎಲ್ಲರನ್ನು ಬಾವಿಯಿಂದ ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, […]

Advertisement

Wordpress Social Share Plugin powered by Ultimatelysocial