ಪದೇ ಪದೇ ಕರೆ ಮಾಡಿ ಪ್ರಚೋದಿಸಿ, ಒತ್ತಾಯ ಮಾಡಿ ಸಾಲ ನೀಡುತ್ತಿವೆ ಬ್ಯಾಂಕುಗಳು!.

ನಾವು ನಿಮಗೆ ಆಕರ್ಷಕ ಬಡ್ಡಿ ದರದಲ್ಲಿ ಸಾಲ ಕೊಡ್ತೀವಿ”, “ನಿಮಗೆ 8 ಲಕ್ಷ ರೂ. ಸಾಲ ಮಂಜೂರಾಗಿದೆ. ಆದಾಯದ ಪ್ರೂಫ್‌ ಬೇಡವೇ ಬೇಡ. ಕನಿಷ್ಠ ದಾಖಲೆಗಳು ಸಾಕು”, “ನಿಮ್ಮ ಹಳೇ ಸಾಲವಿದ್ದರೆ, ಅದನ್ನು ಕ್ಲೋಸ್‌ ಮಾಡಿ ಹೊಸ ಸಾಲ ಕೊಡಿಸ್ತೀವಿ”ಪ್ರಸ್ತುತ ದಿನಗಳಲ್ಲಿ ಈ ರೀತಿಯ ಸಾಲುಗಳನ್ನು ಕೇಳದೇ ಇರುವವರೇ ಇಲ್ಲ. ವಾರಕ್ಕೆ ಒಂದೆರಡು ಸಲವಾದರೂ ಇಂಥ ಕರೆಗಳು ಬಹುತೇಕರಿಗೆ ಹೋಗುತ್ತಿವೆ. ಪ್ರಣಬ್‌ ಮುಖರ್ಜಿ ಲೋಕಸಭೆಯಲ್ಲಿ ಬಜೆಟ್‌ ಮಂಡಿಸುವಾಗ ಇಂಥ ಕರೆ ಅವರಿಗೆ ಬಂದಿತ್ತಂತೆ. ಕೆಲವು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ, ಇನ್ನು ಕೆಲವು ಹೊಸ ತಲೆಮಾರಿನ ಖಾಸಗಿ ಬ್ಯಾಂಕುಗಳಿಂದಲೂ ಇಂಥ ಕರೆಗಳು ಹೋಗುತ್ತಿವೆ. ಸಾರ್ವಜನಿಕ ರಂಗದ ಬ್ಯಾಂಕುಗಳಿಂದ ಇಂಥ ಕರೆಗಳು ಅಪರೂಪ. ಕರೆ ಕೇಳಿ, ನೀವು ಸಿಡಿಮಿಡಿಗೊಂಡರೂ ಅವರು ಬೇಸರಿಸುವುದಿಲ್ಲ. ಪುನಃ ಸಂಪರ್ಕಿಸಬೇಡಿ ಎಂದು ಗದರಿದರೂ, ಅವರು ಬಿಡುವುದಿಲ್ಲ. ವಿಚಿತ್ರವೆಂದರೆ ಫೋನ್‌ ಕರೆ ಸ್ವೀಕರಿಸದವರಾರೂ, ಆ ಹಣಕಾಸು ಸಂಸ್ಥೆಗಳನ್ನು ಅಥವಾ ಆ ಬ್ಯಾಂಕುಗಳನ್ನು ಸಾಲಕ್ಕೆ ಸಂಪರ್ಕಿಸಿರುವುದಿಲ್ಲ. ನಿಮ್ಮ ಫೋನ್‌ ನಂಬರ್‌ ಅವರಿಗೆ ಹೇಗೆ ದೊರಕಿತು ಎನ್ನುವುದು ಚಿದಂಬರ ರಹಸ್ಯ.ದಶಕಗಳ ಹಿಂದೆ ಬ್ಯಾಂಕುಗಳಲ್ಲಿ ಠೇವಣಿ ಸಂಗ್ರಹಿಸಲು ಈ ರೀತಿ ಮಾರ್ಕೆಟಿಂಗ್‌ ಮಾಡುವುದು ತೀರಾ ಸಾಮಾನ್ಯವಾಗಿತ್ತು. ಠೇವಣಿಗಾಗಿ ಗ್ರಾಹಕರನ್ನು ಹಲವು ರೀತಿಯಲ್ಲಿ ಒತ್ತಾಯಿಸುವುದು ಸಹಜವಾಗಿತ್ತು. ಇತ್ತೀಚೆಗೆ ಬ್ಯಾಂಕಿಂಗ್‌ ಉದ್ಯಮದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಬ್ಯಾಂಕುಗಳ ನಿರ್ವಹಣಾ ವೆಚ್ಚ ದಿನದಿಂದ ದಿನಕ್ಕೆ ಏರುತ್ತಿದೆ. ಬಡ್ಡಿ ದರ ಏರುತ್ತಿದೆ. ಸುಸ್ತಿ ಸಾಲ ಹೆಚ್ಚುತ್ತಿದೆ. ಬ್ಯಾಂಕುಗಳಲ್ಲಿ ಸಾಲ ವಿತರಣೆ ನಿರೀಕ್ಷೆ ಮಟ್ಟದಲ್ಲಿ ಇಲ್ಲ ಎನ್ನಲಾಗುತ್ತಿದೆ. ಬಡ್ಡಿಯೇತರ ಆದಾಯದಲ್ಲಿ ಇಳಿಕೆ ಕಾಣುತ್ತಿದೆ. ಬ್ಯಾಂಕುಗಳ ಬಡ್ಡಿಯೇತರ ಆದಾಯವೂ ಸರಕಾರದ ಹಲವು ನಿಯಂತ್ರಣಗಳಿಗೆ ಒಳಪಟ್ಟಿದೆ. ಸುಸ್ತಿ ಸಾಲದ ಮೇಲೆ ಬಡ್ಡಿ ವಿಧಿಸಿ ಅದನ್ನು ಆದಾಯದಲ್ಲಿ ತೋರಿಸುವಂತಿಲ್ಲ. ಬ್ಯಾಂಕುಗಳಲ್ಲಿ ಬಡ್ಡಿ ಆದಾಯವನ್ನು ಮೊದಲಿನಂತೆ accrued basis ಮೇಲೆ ಲೆಕ್ಕ ಹಾಕದೇ, ಈಗ received basis ಮೇಲೆ ಲೆಕ್ಕ ಹಾಕಬೇಕಾಗುತ್ತದೆ. ಗಳಿಸಿದ ಲಾಭದ ಬಹುಪಾಲು ಅನುತ್ಪಾದಕ ಅಸ್ತಿಗೆ ವರ್ಗಾವಣೆಯಾಗುತ್ತಿದ್ದು, ಬ್ಯಾಂಕುಗಳು ಹೆಚ್ಚಿಗೆ ಸಾಲ ನೀಡಿ ಬ್ಯಾಂಕುಗಳ ಆದಾಯ ಹೆಚ್ಚಿಸುವ ಅನಿವಾರ್ಯತೆ ಇದೆ. ಅಂತೆಯೇ ಬ್ಯಾಂಕುಗಳು ಸಾಲವನ್ನು ಯುದ್ಧೋಪಾದಿಯಲ್ಲಿ ಮಾರ್ಕೆಟಿಂಗ್‌ ಮಾಡಲಾಗುತ್ತಿವೆ ಎಂದು ಹೇಳಲಾಗುತ್ತಿದ್ದು, ಹೆಚ್ಚು ಸಾಲ ನೀಡಿದವನು ‘ಡೈನಾಮಿಕ್‌ ಮ್ಯಾನೇಜರ್‌’ ಎಂದು ಕರೆಯಲ್ಪಡುತ್ತಾನಂತೆ.ಸಾಲದ ಮಾರ್ಕೆಟಿಂಗ್‌ನಲ್ಲಿ ಎಲ್ಲವೂ ಕಾನೂನಿನ ಮತ್ತು ವ್ಯವಹಾರದ ಚೌಕಟ್ಟಿನಲ್ಲಿಯೇ ನಡೆಯುತ್ತದೆ. ಆದರೆ, ಕೆಲವು ಹಿರಿಯ ಮತ್ತು ನಿವೃತ್ತ ಬ್ಯಾಂಕರುಗಳ ಮತ್ತು ಅರ್ಥಿಕ ತಜ್ಞರ ಪ್ರಕಾರ, ಸಾಲ ಬೇಕೇ ಎಂದು ಕೇಳಿ, ಪ್ರಚೋದಿಸಿ, ಒತ್ತಾಯ ಮಾಡಿ ಸಾಲ ನೀಡುವುದು ಒಳ್ಳೆಯ ಅರ್ಥಿಕತೆಯ ಲಕ್ಷಣವಲ್ಲ. ಇದು ಜನರಲ್ಲಿ consumerism ಅನ್ನು ಹೆಚ್ಚಿಸುತ್ತದೆ. ಬ್ಯಾಂಕ್‌ ಸಾಲದ ವಿಚಾರದಲ್ಲಿ ಎಂಟ್ರಿ ಇದೆ; ಆದರೆ, exit ಇಲ್ಲ ಎನ್ನುವ ಮಾತು ಕೇಳಿ ಬರುತ್ತದೆ.ಅನಿವಾರ್ಯವಾದರೆ ಮಾತ್ರ ಸಾಲಕ್ಕೆ ಮೊರೆ ಹೋಗಬೇಕು. ಅದು ಕೊನೆಯ ಅಸ್ತ್ರವಾಗಬೇಕು. ಸಾಲದ ಅವಶ್ಯಕತೆ ಇದ್ದವರು ಬ್ಯಾಂಕುಗಳನ್ನು, ಹಣಕಾಸು ಸಂಸ್ಥೆಗಳನ್ನು ಹುಡುಕಿಕೊಂಡು ಬರುತ್ತಾರೆ. ವಿಧಿಸುವ ಪ್ರತಿಯೊಂದು ಷರತ್ತುಗಳನ್ನು ಪಾಲಿಸುತ್ತಾರೆ ಮತ್ತು ಕೇಳಿದ ಪ್ರತಿ ಕಾಗದ ಪತ್ರಗಳನ್ನೂ ನೀಡುತ್ತಾರೆ. ಸಾಲವನ್ನು ಮರುಪಾವತಿ ಮಾಡುವುದರಲ್ಲಿಯೂ ಮುಂದಿರುತ್ತಾರೆ. ಸಾಮಾನ್ಯವಾಗಿ ಸಾಲ ವಸೂಲಾತಿ ಅಷ್ಟು ಕಷ್ಟಕರವಾಗುವುದಿಲ್ಲ. ನೈತಿಕತೆಯ ಕಟ್ಟುಪಾಡು ಅವರನ್ನು ಬಂಧಿಸುತ್ತದೆ. ಗ್ರಾಹಕ ಹೆಚ್ಚು ಕೇಳದೆ, ಬ್ಯಾಂಕಿನವರೇ ಮುಗಿಬಿದ್ದು ಸಾಲ ನೀಡಿದರೆ, ಮರುಪಾವತಿಯೂ ಸುಲಭವಾಗಿ ಬರುವುದಿಲ್ಲ. ಈ ಪೃವೃತ್ತಿ ಬ್ಯಾಂಕುಗಳಲ್ಲಿಅನುತ್ಪಾದಕ ಅಸ್ತಿಯ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸದ್ಯ ಈ ದೃಶ್ಯ, ಬೈಕ್​ ಸವಾರರು ಎಷ್ಟು ಎಚ್ಚರವಹಿಸಬೇಕು ಎಂಬುದುಕ್ಕೆ ಸಾಕ್ಷಿಯಾಗಿ ಹರಿದಾಡುತ್ತಿದೆ.

Mon Feb 20 , 2023
ಸೆಲ್ಫ್​ ಸ್ಟಾರ್ಟ್ ಆಗ್ತಿದ್ದಾಗೇ, ಹೈ ಸ್ಪೀಡ್​ ಪಿಕಪ್​ ತೆಗೆದುಕೊಳ್ಳುವ ಹೈಫೈ ಬೈಕ್​ಗಳ ರೈಡ್ ಎಷ್ಟು ಚೆಂದವೂ ಅಷ್ಟೆ ಅಪಾಯಕಾರಿ ಕೂಡ, ಮಕ್ಕಳ ಆಸೆಯಂತೆ ಫೋಷಕರು ಅಂತಹುದೇ ಬೈಕ್​ಗಳನ್ನು ಕೊಡಿಸುತ್ತಾರೆ. ಆದರೆ ಅತಿವೇಗದಲ್ಲಿ ವಾಹನ ಕಂಟ್ರೋಲ್​ಗೆ ಸಿಗದೇ ಪ್ರಾಣ ಹಾರಿಹೋಗುವಂತಹ ಘಟನೆಗಳು ಹೆಚ್ಚು ಸಂಭವಿಸುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗದ ತುಂಗಾ ನಗರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ನಡೆದ ಘಟನೆಯೊಂದು ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಶಿವಮೊಗ್ಗದ ವಿದ್ಯಾರ್ಥಿಯೊಬ್ಬ ಇತ್ತೀಚೆಗೆ ತನ್ನ ಕೆಟಿಎಂ […]

Advertisement

Wordpress Social Share Plugin powered by Ultimatelysocial