ಬಟ್ಟೆ ಅಥವಾ ಸರ್ಜಿಕಲ್ ಮಾಸ್ಕ್‌ ಗಳಲ್ಲಿ ಯಾವುದು ಬೆಸ್ಟ್.?‌ ಇಲ್ಲಿದೆ ತಜ್ಞರು ನೀಡಿರುವ ಮಾಹಿತಿ

ಬಟ್ಟೆ ಅಥವಾ ಸರ್ಜಿಕಲ್ ಮಾಸ್ಕ್‌ ಗಳಲ್ಲಿ ಯಾವುದು ಬೆಸ್ಟ್.?‌ ಇಲ್ಲಿದೆ ತಜ್ಞರು ನೀಡಿರುವ ಮಾಹಿತಿ

ಕೊರೋನಾ ಇಂದು ನಾಳೆ ಮುಗಿಯೋವಂತದ್ದಲ್ಲ. ಈ ಸೋಂಕು ವಿಶ್ವಕ್ಕೆ ಕಾಲಿಟ್ಟಾಗಿಂದ ಮನುಷ್ಯ ಮುಖ ಮುಚ್ಚಿಕೊಂಡು ಓಡಾಡುವಂತಾಗಿದೆ. ಎರಡು ವರ್ಷದ ಹಿಂದೆ ಎಂಟ್ರಿ ಕೊಟ್ಟ ಕೋವಿಡ್ ಇಡೀ ಮಾನವ ಸಂಕುಲಕ್ಕೆ ಮಾಸ್ಕ್ ಗಳನ್ನ ಪರಿಚಯಿಸಿದೆ. ಆದ್ರೆ ದಿನ ಕಳೆದಂತೆ ಹೊಸ ಹೊಸ ರೂಪ ತಾಳಿ ಮತ್ತಷ್ಟು ಡೇಂಜರಸ್ ಆಗ್ತಿರೋ ಕೋವಿಡ್ ನಮ್ಮ ದೇಹ ಸೇರದಂತೆ ಬಟ್ಟೆ ಮಾಸ್ಕ್ ರಕ್ಷಣೆ ನೀಡುತ್ತಾ ಅನ್ನೋ ಪ್ರಶ್ನೆಗೆ ವಿಜ್ಞಾನಿಗಳು ಉತ್ತರಿಸಿದ್ದಾರೆ.

ಬಟ್ಟೆ ಮಾಸ್ಕ್, ಸರ್ಜಿಕಲ್ ಮಾಸ್ಕ್ ಎರಡರಲ್ಲಿ ಯಾವುದು ಬೆಸ್ಟ್..?

ವಿಜ್ಞಾನಿಗಳ ಪ್ರಕಾರ ಬಟ್ಟೆ ಹಾಗೂ ಸರ್ಜಿಕಲ್ ಮಾಸ್ಕ್ ಗೆ ಹೋಲಿಸಿದಾಗ, ಸರ್ಜಿಕಲ್ ಮಾಸ್ಕ್ ಉತ್ತಮ ರಕ್ಷಣೆ ನೀಡುತ್ತದೆ. ವೈರಸ್ ವಿರುದ್ಧ 95% ರಕ್ಷಣೆ ನೀಡುವ ಸರ್ಜಿಕಲ್ ಮಾಸ್ಕ್, ಕೇವಲ 37% ಎಫಕ್ಟಿವ್ ಆಗಿರುವ ಬಟ್ಟೆ ಮಾಸ್ಕ್ ಗಿಂತ ಉತ್ತಮ. ಇತ್ತ KN95 ಮಾಸ್ಕ್ ಅತ್ಯಂತ ಸುರಕ್ಷಿತ ಎನ್ನುವುದು ತಜ್ಞರ ಅಭಿಪ್ರಾಯ. ಆದ್ರೆ ಇಷ್ಟು ದಿನ ಬಟ್ಟೆ ಮಾಸ್ಕ್ ಧರಿಸಿ ಅಭ್ಯಾಸವಾಗಿರುವ ಜನರಿಗೆ ಸರ್ಜಿಕಲ್ ಮಾಸ್ಕ್ ಅಥವಾ KN95 ಮಾಸ್ಕ್ ಗೆ ಶಿಫ್ಟ್ ಆಗೋದು ಸುಲಭವಲ್ಲ.

ಸರ್ಜಿಕಲ್ ಮಾಸ್ಕ್ ಧರಿಸುವವರಿಗಿಂತ, ಬಟ್ಟೆ ಮಾಸ್ಕ್ ಧರಿಸುವವರಿಗೆ ಸೋಂಕು ತಗುಲುವ ಅಪಾಯ ಹೆಚ್ಚಿದೆ. ಡೆಲ್ಟಾ, ಒಮಿಕ್ರಾನ್ ನಂತಹ ಅಪಾಯಕಾರಿ ರೂಪಾಂತರಿ ಸೋಂಕು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ನಾವು ಬಳಸುವ ಮಾಸ್ಕ್ ಬಗ್ಗೆ ಗಮನ ವಹಿಸಲೆಬೇಕು ಎಂಬುದು ತಜ್ಞರ ಅಭಿಪ್ರಾಯ. ಎಲ್ಲಾ ಸಂದರ್ಭದಲ್ಲೂ ಬಟ್ಟೆ ಮಾಸ್ಕ್ ಧರಿಸುವುದು ಒಳ್ಳೆಯದಲ್ಲ, ಹೆಚ್ಚು ಜನ ನೆರೆದಿರುವ ಪ್ರದೇಶಗಳಿಗೆ ಭೇಟಿ ಕೊಟ್ಟಾಗ, ಬಸ್, ವಿಮಾನ, ರೈಲಿನಲ್ಲಿ ಪ್ರಯಾಣಿಸುವಾಗ, ಸಿನಿಮಾ ಥಿಯೇಟರ್ ನಲ್ಲಿ, ಶಾಲಾ-ಕಾಲೇಜುಗಳಲ್ಲಿ ಸರ್ಜಿಕಲ್ ಮಾಸ್ಕ್ ಧರಿಸುವುದು ಉತ್ತಮ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಬ್ಬಿನ ಹಾಲನ್ನು ಕುಡಿಯುವುದರಿಂದ ಆಗುವ ಲಾಭಗಳೇನು..?

Fri Dec 24 , 2021
ಆರೋಗ್ಯಕ್ಕೂ ಉತ್ತಮವಾದ, ಸ್ವಾದದಲ್ಲೂ ರುಚಿಕರವಾದ ಜ್ಯೂಸ್ ಅಂದ್ರೆ ಕಬ್ಬಿನ ಜ್ಯೂಸ್. ಉಷ್ಣ ಪದಾರ್ಥಗಳಲ್ಲಿ ಒಂದಾದ ಈ ಕಬ್ಬಿನ ಜ್ಯೂಸ್ ಕುಡಿದ್ರೆ ಏನೆಲ್ಲ ಲಾಭವಿದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಬ್ಬಿನ ಹಾಲು ಎನರ್ಜಿ ಡ್ರಿಂಕ್ ಆಗಿದ್ದು, ನಮ್ಮ ದೇಹಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತದೆ. ನಿಮಗೆ ಸುಸ್ತಾಗಿದೆ ಅಂತಾ ಅನ್ನಿಸಿದ್ರೆ ಒಂದು ಗ್ಲಾಸ್ ಕಬ್ಬಿನ ಹಾಲು ಕುಡಿಯಿರಿ. ಆಗ ನಿಮ್ಮ ದೇಹಕ್ಕೆ ತಕ್ಷಣ ಶಕ್ತಿ ಬರುತ್ತದೆ. ನಿಮ್ಮ ಸುಸ್ತೆಲ್ಲ ಮಾಯವಾಗಿ […]

Advertisement

Wordpress Social Share Plugin powered by Ultimatelysocial