BENGALURU BULLS:ಕೊನೇ ಕ್ಷಣದಲ್ಲಿ ಬೆಂಗಳೂರು ಬುಲ್ಸ್ ತಂಡದ ಎದುರಾಳಿ ಬದಲಾವಣೆ;

Bengaluru Bulls vs Bengal Warriors: ತಮಿಳ್ ತಲೈವಾಸ್ ಹಾಗೂ ಗುಜರಾತ್ ಜೈಂಟ್ಸ್ ನಡುವಣ ಮೊದಲ ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ. ಬೆಂಗಳೂರು ಬುಲ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ನಡುವಣ ಎರಡನೇ ಪಂದ್ಯ ರಾತ್ರಿ 8.30ಕ್ಕೆ ಶುರುವಾಗಲಿದೆ.ಪ್ರೊ ಕಬಡ್ಡಿ ಲೀಗ್‌ನ ದ್ವಿತಿಯಾರ್ಧದ ಮೊದಲ ಪಂದ್ಯದ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ.

ಈ ಹಿಂದಿನ ವೇಳಾಪಟ್ಟಿಯಂತೆ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಪಾಟ್ನಾ ಪೈರೇಟ್ಸ್ ಮುಖಾಮುಖಿಯಾಗಬೇಕಿತ್ತು. ಆದರೀಗ ಬೆಂಗಳೂರು ಬುಲ್ಸ್ ಪೈರೇಟ್ಸ್ ಬದಲಿಗೆ ಬೆಂಗಾಲ್ ವಾರಿಯರ್ಸ್ ವಿರುದ್ಧ ಆಡಲಿದೆ. ಇದಾಗ್ಯೂ ಈ ಬದಲಾವಣೆ ಯಾಕೆ ಮಾಡಲಾಗಿದೆ ಎಂಬುದನ್ನು ಪ್ರೋ ಕಬಡ್ಡಿ ಆಯೋಜಕರು ಸ್ಪಷ್ಟಪಡಿಸಿಲ್ಲ. ಪ್ರಸ್ತುತ ಬುಲ್ಸ್ ತಂಡವು ಪಾಯಿಂಟ್ ಪಟ್ಟಿಯಲ್ಲಿ 3 ನೇ ಸ್ಥಾನದಲ್ಲಿದ್ದು, ಬೆಂಗಾಲ್ ವಾರಿಯರ್ಸ್ 8ನೇ ಸ್ಥಾನದಲ್ಲಿದೆ. ಹೀಗಾಗಿ ಈ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ.

ಇನ್ನು ಗುರುವಾರ ನಡೆಯಲಿರುವ ಪ್ರೊ ಕಬಡ್ಡಿ ಲೀಗ್‌ನ 66ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ಹಾಗೂ ಗುಜರಾತ್ ಜೈಂಟ್ಸ್ ಸೆಣಸಲಿದೆ . ತಮಿಳ್ ತಲೈವಾಸ್ ಪ್ರಸ್ತುತ ಪ್ರೊ ಕಬಡ್ಡಿ ಅಂಕಪಟ್ಟಿಯಲ್ಲಿ 30 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ಜೈಂಟ್ಸ್ 10 ಪಂದ್ಯಗಳ ಬಳಿಕ 10 ನೇ ಸ್ಥಾನದಲ್ಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

YUVARAJ SINGH:ಮತ್ತೆ ಅಂಗಳಕ್ಕೆ ಸೆಹ್ವಾಗ್, ಯುವಿ ಸಹಿತ ದಿಗ್ಗಜರ ದಂಡು;

Thu Jan 20 , 2022
ವಿಶ್ವ ಕ್ರಿಕೆಟ್‌ನಲ್ಲಿ ಮೆರೆದು ನಿವೃತ್ತಿಯನ್ನು ಪಡೆದ ಕ್ರಿಕೆಟಿಗರ ಆಟದ ವೈಖರಿಯನ್ನು ಅಭಿಮಾನಿಗಳು ಆಗಾಗ ನೆನಪಿಸಿಕೊಳ್ಳುವುದು ಸಾಮಾನ್ಯ. ಆ ಆಟಗಾರರು ಮತ್ತೆ ಆಡಲು ಕಣಕ್ಕಿಳಿದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಕೂಡ ಸಾಕಷ್ಟು ಅಭಿಮಾನಿಗಳು ಮನದಲ್ಲೇ ಅಂದುಕೊಂಡಿರುತ್ತಾರೆ. ಇದೀಗ ಅಂತಾದ್ದೊಂದು ವಿಶೇಷ ಕ್ಷಣ ಬಂದಿದೆ. ಕ್ರಿಕೆಟ್‌ನಿಂದ ನಿವೃತ್ತಿಯನ್ನು ಪಡೆದಿರುವ ದಿಗ್ಗಜ ಆಟಗಾರರ ಕ್ರಿಕೆಟ್ ಲೀಗ್‌ಗೆ ಇಂದಿನಿಂದ ಚಾಲನೆ ದೊರೆಯುತ್ತಿದೆ. ವಿಶ್ವ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿರುವ ಹಲವಾರು ದಿಗ್ಗಜ ಆಟಗಾರರು ಮೂರು ತಂಡಗಳ ಪರವಾಗಿ […]

Advertisement

Wordpress Social Share Plugin powered by Ultimatelysocial