“ವೀಳ್ಯದೆಲೆ” ಕ್ಯಾನ್ಸರ್‌ನಿಂದ ಹಿಡಿದು ಹತ್ತು ಹಲವು ಕಾಯಿಲೆಗಳಿಗೆ ರಾಮಬಾಣ.

 

ಹಿಂದೂ ಸಂಪ್ರದಾಯದಲ್ಲಿ ವೀಗೆ ಮಹತ್ವವಾದ ಸ್ಥಾನವಿದೆ. ದೇವರ ಪೂಜೆಯಿಂದ ಹಿಡಿದು ಎಲ್ಲಾ ಶುಭಕಾರ್ಯದಲ್ಲೂ ವೀಳ್ಯದೆಲೆ ಇರಲೇಬೇಕು. ಊಟ ಆದ ಮೇಲೆ ವೀಳ್ಯದೆಲೆ ಸೇವಿಸುವ ಖಷಿಯೇ ಬೇರೆ. ನಮ್ಮ ಹಿರಿಯರು ಹಿಂದಿನ ಕಾಲದಿಂದಾನೂ ಈ ಆಚರಣೆಯನ್ನ ರೂಢಿಸಿಕೊಂಡು ಬಂದಿದ್ದಾರೆ.ಆಯುರ್ವೇದದಲ್ಲಿ ವೀಳ್ಯದೆಲೆ ತನ್ನದೇ ಆದ ಸ್ಥಾನವಿದೆ. ತಾಂಬೂಲದ ಜೊತೆಯಲ್ಲಿ ವೀಳ್ಯದೆಲೆ ಇರಲೇಬೇಕು. ಇಂತಹ ಶುಭಕರ ವೀಳ್ಯದೆಲೆಯಲ್ಲಿ ವಿಟಮಿನ್ ಸಿ, ನಿಯಾಸನ್, ರೈಬೋಫ್ಲೇವಿನ್,ಕೆರಟೀನ್, ಮತ್ತು ಕ್ಯಾಲ್ಸಿಯಂನಂತಹ ಗುಣಗಳಿದ್ದು, ಆರೋಗ್ಯ ಉದ್ದೇಶದಿಂದ ತುಂಬಾನೇ ಒಳ್ಳೆಯದು.ಎಲೆ ಅಡಿಕೆ ತಿನ್ನುವುದರಿಂದ ಕ್ಯಾನ್ಸರ್ ಬರುತ್ತ ಎಂಬ ನಂಬಿಕೆ ಅನೇಕರಲ್ಲಿ ಇದೆ. ಆದ್ರೆ ನಿಜವಾಗಿಯೂ ವೀಳ್ಯದೆಲೆಯಿಂದ ಯಾವುದೇ ಅಪಾಯವಿಲ್ಲ. ತಂಬಾಕಿನಲ್ಲಿ ಮಾತ್ರ ಕ್ಯಾನ್ಸರ್‌ಕಾರಕ ಗುಣಗಳಿರುವುದು. ವೀಳ್ಯದೆಲೆಯಲ್ಲಿ ಪೈಟೋಕೆಮಿಕಲ್ ಗುಣಗಳಿದ್ದು, ಅದು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ.ವೀಳ್ಯದೆಲೆ ಸೇವನೆಯಿಂದ ನಮ್ಮಲ್ಲಿ ಪ್ರೋಟಿನ್ ಅಂಶ ಹೆಚ್ಚಾಗುತ್ತದೆ. ನಮ್ಮ ದೇಹದ ಯಾವುದೇ ಭಾಗದಲ್ಲಿ ಗಾಯಗಳಾದಾಗ ವೀಳ್ಯದೆಲೆಯ ಪೇಸ್ಟ್ ತಯಾರಿಸಿ ಹಚ್ಚಿದರೆ ಗಾಯ ಬೇಗ ಒಣಗುವಂತೆ ಮಾಡಿ ಕೆಲವೇ ದಿನಗಳಲ್ಲಿ ಗಾಯ ಒಣಗುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಂಗಳೂರು ಹಾಸ್ಟೆಲ್‌ನಲ್ಲಿ ವಿಷಾಹಾರ ಸೇವನೆ.

Tue Feb 7 , 2023
ಮಂಗಳೂರಿನ ಪ್ರತಿಷ್ಠಿತ ಸಿಟಿ ಆಸ್ಪತ್ರೆಯ ನರ್ಸಿಂಗ್ ಕಾಲೇಜಿನ ಹಾಸ್ಟೆಲ್‌ನಲ್ಲಿ ಏಕಾಏಕಿ ಅಸ್ವಸ್ಥಗೊಂಡಿದ್ದರಿಂದ 89ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಫುಡ್ ಪಾಯಿಸನ್ ಆಗಿದ್ದರಿಂದ ವಿದ್ಯಾರ್ಥಿಗಳು ಅನಾರೋಗ್ಯಕ್ಕೀಡಾಗಿದ್ದಾರೆ ಎನ್ನಲಾಗಿದೆ.ಮಂಗಳೂರು ಹೊರವಲಯದ ಶಕ್ತಿ ನಗರದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳ ಹಾಸ್ಟೆಲ್ ಇದೆ. ಸೋಮವಾರ ಮುಂಜಾನೆಯಿಂದ ವಿದ್ಯಾರ್ಥಿಗಳು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅಸ್ವಸ್ಥಗೊಂಡ 89ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಮಂಗಳೂರಿನ ಸಿಟಿ ಆಸ್ಪತ್ರೆ, ಎ.ಜೆ. ಹಾಸ್ಪಿಟಲ್ ಹಾಗೂ ಕೆ.ಎಂ.ಸಿ ಆಸ್ಪತ್ರೆಗಳಿಗೆ ದಾಖಲಾಗಿಸಲಾಗಿದೆ.ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಾಲೇಜು ಆಡಳಿತ […]

Advertisement

Wordpress Social Share Plugin powered by Ultimatelysocial