ಇನ್ನೇನಿದ್ದರೂ ಭಾರತದ ರಾಜ್ಯಗಳಿಗೆ ‘ತೆಲಂಗಾಣ ಮಾದರಿ’: ಸಚಿವ ಕೆ.ಟಿ. ರಾಮರಾವ್

ಹೈದರಾಬಾದ್: ‘ಅಭಿವೃದ್ಧಿಯಲ್ಲಿ ಭಾರತದ ಇತರ ರಾಜ್ಯಗಳು ತೆಲಂಗಾಣ ಮಾದರಿ ಅನುಸರಿಸುವಂತಾಗಿದೆ’ ಎಂದು ತೆಲಂಗಾಣ ಕೈಗಾರಿಕಾ ಸಚಿವ ಹಾಗೂ ಟಿಆರ್‌ಎಸ್ ಮುಖಂಡ ಕೆ.ಟಿ. ರಾಮರಾವ್ ಹೇಳಿದ್ದಾರೆ.ಭಾನುವಾರ ನಡೆದ ‘ಹಾರ್ವರ್ಡ್ ಇಂಡಿಯಾ ಸಮಾವೇಶ 2022’ ಉದ್ದೇಶಿಸಿ ಮಾತನಾಡಿದ ಅವರು ‘ಸ್ಟಾರ್ಟ್‌ಪ್ ಯೋಜನೆಗಳನ್ನು ಅತ್ಯಂತ ಯಶಸ್ವಿಯಾಗಿ ಕಾರ್ಯಗತಗೊಳಿಸಿದ ರಾಜ್ಯ ತೆಲಂಗಾಣ’ ಎಂದು ತಿಳಿಸಿದ್ದಾರೆ.’ಹೈದರಾಬಾದ್‌ನ ಮಾಹಿತಿ ತಂತ್ರಜ್ಞಾನ ವಲಯ, ಕೈಗಾರಿಕಾ ಸ್ನೇಹಿ ನೀತಿ ನಿಯಮಗಳು ಹಾಗೂ ಹೂಡಿಕೆ ಸ್ನೇಹಿ ತಾಣ ತೆಲಂಗಾಣ ರಾಜ್ಯವನ್ನು ಒಂದು ಮಾದರಿ ರಾಜ್ಯವನ್ನಾಗಿ ರೂಪಿಸಿವೆ’ ಎಂದು ಬಣ್ಣಿಸಿದ್ದಾರೆ.’2030 ರ ವೇಳೆಗೆ ಭಾರತ ಜಗತ್ತನ್ನು ಮುನ್ನಡೆಸುತ್ತದೆ. ‘ಟರ್ಬೊಚಾರ್ಜಿಂಗ್ ಇಂಡಿಯಾ 2030’ ಕಲ್ಪನೆಯನ್ನು ‘ಟರ್ಬೊಚಾರ್ಜಿಂಗ್ ತೆಲಂಗಾಣ’ ಎಂಬ ಹೆಸರಿನಲ್ಲಿ 2014 ರಿಂದಲೇ ತೆಲಂಗಾಣದಲ್ಲಿ ಸಾಕಾರಗೊಳಿಸಿಕೊಂಡು ಬರಲಾಗಿದೆ’ ಎಂದು ರಾಮರಾವ್ ಮಾಹಿತಿ ನೀಡಿದ್ದಾರೆ.’ಇನ್ನೇನು ಕೆಲವೇ ದಿನಗಳಲ್ಲಿ ತೆಲಂಗಾಣ ಮಾದರಿ ಎಂಬುದು ಇಡೀ ದೇಶದಲ್ಲಿ ಕೇಳಿ ಬರಲಿದ್ದು, ಕಳೆದ ಏಳು ವರ್ಷಗಳಲ್ಲಿ ಯಾರೂ ನಿರೀಕ್ಷಿಸದ ಸಾಧನೆಯನ್ನು ಮಾಡಿ ತೋರಿಸಿದ್ದೇವೆ. ಹೊಸ ಕೈಗಾರಿಕಾ ನೀತಿ ಘೋಷಣೆಯಾದ ನಂತರ ಬರೋಬ್ಬರಿ 2.5 ಲಕ್ಷ ಕೋಟಿ ಬಂಡವಾಳ ರಾಜ್ಯಕ್ಕೆ ಹರಿದು ಬಂದಿದ್ದು, ಹೊಸದಾಗಿ 16 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ’ ಎಂದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈಜಿಪ್ಟಿನ ರಣಹದ್ದುಗಳು ಸ್ಥಳೀಯವಾಗಿ ಅಳಿವಿನ ಅಂಚಿನಲ್ಲಿದೆ!!

Mon Feb 21 , 2022
ಡಿಸೆಂಬರ್ 2021 ಮತ್ತು ಜನವರಿ 2022 ರಲ್ಲಿ ನಡೆಸಲಾದ NWCAS (ಪ್ರಕೃತಿ ಮತ್ತು ವನ್ಯಜೀವಿ ಸಂರಕ್ಷಣೆ ಮತ್ತು ಜಾಗೃತಿ ಸಮಾಜ) ಸಮೀಕ್ಷೆಯಲ್ಲಿ ಇಂದೋರ್ ಈಜಿಪ್ಟ್ ರಣಹದ್ದುಗಳ ಜನಸಂಖ್ಯೆಯಲ್ಲಿ 20 ಪ್ರತಿಶತದಷ್ಟು ಕುಸಿತವನ್ನು ಕಂಡಿದೆ. ಈಜಿಪ್ಟ್ ರಣಹದ್ದುಗಳ ಆಶ್ರಯ ತಾಣವಾಗಿದ್ದ ದೇವಗುರಾಡಿಯಾ ಬೆಟ್ಟ ಮತ್ತು ಅದರ ಸುತ್ತಮುತ್ತಲಿನ ಡಂಪಿಂಗ್ ಯಾರ್ಡ್ ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ತಮ್ಮ ಬಿಳಿ ತೋಟಿಗಳನ್ನು ಕಳೆದುಕೊಳ್ಳುತ್ತಿದೆ. “ಈ ವರ್ಷ ನಮ್ಮ 2 ತಿಂಗಳ ಸುದೀರ್ಘ ಸಮೀಕ್ಷೆಯು […]

Advertisement

Wordpress Social Share Plugin powered by Ultimatelysocial