BREAKING NEWS:ಹಿಜಾಬ್ ಮುಂದುವರಿಸಿದರೆ ಪಂಚೆ, ರುದ್ರಾಕ್ಷಿ ಮಾಲೆ ಧರಿಸುತ್ತೇವೆ;

ರಾಜ್ಯದಲ್ಲಿ ಜಿಹಾದ್ ವಿವಾದ ತೀವ್ರವಾಗಿದ್ದು, ಉಡುಪಿ ಜಿಲ್ಲೆ ಕುಂದಾಪುರದ ಸರ್ಕಾರಿ ಕಾಲೇಜಿ‌ಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಕಾಲೇಜು ಕಾಂಪೌಂಡ್ ಪ್ರವೇಶಿಸಲು ಇಂದು ಸಹ ಅವಕಾಶ ನಿರಾಕರಿಸಲಾಗಿದ್ದು, ವಿದ್ಯಾರ್ಥಿನಿಯರು ಇಡೀ ದಿನ ರಸ್ತೆ ಬದಿಯಲ್ಲೇ ಕುಳಿತು ಪ್ರತಿಭಟಿಸಿದ್ದಾರೆ.

ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿವಾದದ ಕಿಡಿ ಸದ್ಯ ಕುಂದಾಪುರದಲ್ಲಿ ಜ್ವಾಲೆಯಾಗಿ ಉರಿಯುತ್ತಿದೆ. ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ಶುಕ್ರವಾರ ತರಗತಿ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗಿದೆ‌. ಈ ಹಿನ್ನಲೆಯಲ್ಲಿ ಇಂದು 28 ಹಿಜಾಬ್‌ಧಾರಿ ವಿದ್ಯಾರ್ಥಿನಿಯರು ಕಾಲೇಜು ಗೇಟ್ ಮುಂಭಾಗ ಇಡೀ ದಿನ ಕೂತು ಪ್ರತಿಭಟನೆ ಮಾಡಿದ್ದಾರೆ‌.

ಹಿಜಾಬ್ ಧರಿಸಿ ಒಳಗೆ ಪ್ರವೇಶಿದಂತೆಯೇ ಕಾಲೇಜು ಆಡಳಿತ ಮಂಡಳಿ ಕಾಲೇಜು ಗೇಟ್‌ಗೆ ಬೀಗ ಜಡಿದಿದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿನಿಯರ ಪೋಷಕರೂ ಕಾಲೇಜು ಮುಂಭಾಗ ಬಂದು ಪ್ರತಿಭಟನೆಗಿಳಿದಿದ್ದಾರೆ. ಕಾಲೇಜು ಗೇಟ್ ತೆಗೆಯಿರಿ, ಇಲ್ಲವಾದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಲಕ್ಷಣ ಹಿನ್ನಲೆಯಲ್ಲಿ ಕುಂದಾಪುರ ಠಾಣಾ ಪೊಲೀಸರು ಮಧ್ಯ ಪ್ರವೇಶಿಸಿ ವಿದ್ಯಾರ್ಥಿನಿಯರ ಪೋಷಕರನ್ನು ಚದುರಿಸಿದ್ದಾರೆ.‌

ಆ ಬಳಿಕವೂ ವಿದ್ಯಾರ್ಥಿನಿಯರ ಮತ್ತು ಕಾಲೇಜು ಪ್ರಾಂಶುಪಾಲರು ಮತ್ತು ಶಿಕ್ಷಕರ ನಡುವೆ ವಾಗ್ವಾದ ನಡೆದಿದೆ. ವಿದ್ಯಾರ್ಥಿನಿಯರ ಆಕ್ರೋಶಕ್ಕೆ ಕ್ಯಾರೇ ಅನ್ನದ ಕಾಲೇಜು ಆಡಳಿತ ಮಂಡಳಿ ಕಾಲೇಜು ಗೇಟ್‌ಗೆ ಬೀಗ ಜಡೆದಿದೆ. ಈ ಹಿನ್ನಲೆಯಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ವಿದ್ಯಾರ್ಥಿನಿಯರು ಕಾಲೇಜು ಗೇಟ್ ಮುಂಭಾಗ ಕೂತು ಪುಸ್ತಕ ತೆರೆದು ಓದಿ ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಪ್ರತಿಭಟನಾನಿರತ ವಿದ್ಯಾರ್ಥಿನಿ, ಹಿಜಾಬ್ ನಮ್ಮ ಜೀವನದ ಭಾಗ. ನಮ್ಮ ಹಿರಿಯರು ಹಿಜಾಬ್ ಧರಿಸುತ್ತಿದ್ದರು. ನನ್ನತ್ತೆ ಕೂಡ ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದರು. ಅಚಾನಕ್ಕಾಗಿ ಈ ರೂಲ್ಸ್ ಯಾಕೆ ಬಂತು. ನಾವು ಹಿಜಾಬ್ ಹಾಕಿದರೆ ಯಾರಿಗೆ ಏನು ತೊಂದರೆ ಇದೆ. ನಮ್ಮ ಪ್ರಶ್ನೆಗೆ ಉತ್ತರವೇ ಇಲ್ಲ. ಪ್ರಾಂಶುಪಾಲರು ಸರ್ಕಾರದ ಸೂಚನೆ ಎನ್ನುತ್ತಾರೆ. ಇಷ್ಟು ವರ್ಷ ಇಲ್ಲದ ಸಮಸ್ಯೆ ಈಗ ಯಾಕೆ? ನಿನ್ನೆಯಿಂದ ಗೇಟಿನ ಒಳಗೆ ನಮ್ಮನ್ನು ಬಿಡುತ್ತಿಲ್ಲ. ನಮಗೆ ಯಾರು ಸಪೋರ್ಟ್ ಮಾಡುತ್ತಿಲ್ಲ. ಹಿಜಾಬ್‌ಗೆ ಅವಕಾಶ ಬೇಕು. ಶಿಕ್ಷಣ ನಮಗೆ ಇಂಪಾರ್ಟೆಂಟ್ ಎಂದು ಅವಲತ್ತುಕೊಂಡಿದ್ದಾಳೆ.

ಉಡುಪಿ ಜಿಲ್ಲೆಗೆ ವ್ಯಾಪಿಸಿದ ಹಿಜಾಬ್- ಕೇಸರಿ ಶಾಲು ವಿವಾದ

ಕುಂದಾಪುರದಲ್ಲಿ ಹಿಜಾಬ್ ಜೋರಾಗುತ್ತಿದ್ದಂತೆಯೇ ಉಡುಪಿ ಜಿಲ್ಲೆಯ ಬೇರೆ ಕಾಲೇಜುಗಳಿಗೂ ಈ ಪ್ರತಿಭಟನೆ ವ್ಯಾಪಿಸಿದೆ. ಬೈಂದೂರಿನ ಸರ್ಕಾರಿ ಪಿಯು ಕಾಲೇಜು, ಬಸ್ರೂರಿನ ಶಾರದಾ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿ ಪ್ರತಿಭಟನೆ ಮಾಡಿದ್ದಾರೆ. ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದರೆ ಮುಂದೆ ಕಾಲೇಜಿನಲ್ಲಿ ಎಲ್ಲಾ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಜೊತೆಗೆ ಪಂಚೆ, ರುದ್ರಾಕ್ಷಿ ಮಾಲೆ ಧರಿಸಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ವಿದ್ಯಾರ್ಥಿ ಸುಪ್ರಸಾದ್, ಹಿಜಾಬ್ ವಿರುದ್ಧ ಕೇಸರಿ ಶುರುವಾಗಲು ಮೂಲ ಕಾರಣ ಆರು ವಿದ್ಯಾರ್ಥಿನಿಯರು. ಕಾಲೇಜಿನಲ್ಲಿ ‌ಶರ್ಟ್, ಪ್ಯಾಂಟ್, ಐಡಿ ಕಾರ್ಡ್ ಅಷ್ಟೇ ಇರಬೇಕು, ಇದೇ ಸಮಾನತೆ. ಹಿಜಾಬ್ ಈಸ್ ಮೈ ರೈಟ್ ಅಂತ ಘೋಷಣೆ ಕೂಗುತ್ತಾರೆ. ನಾವು ಜೈ ಶ್ರೀರಾಮ್ ಹೇಳಿ ಕೂಗುತ್ತೇವೆ ಎಂದರು.

ಹಿಜಾಬ್ ಧರಿಸುವ ಕುರಿತು ವಿದ್ಯಾರ್ಥಿನಿಯರ ಹಿಂದೆ ಸಂಘಟನೆ ಇರಬಹುದು. ನಮ್ಮ ಹಿಂದೆ ಹಿಂದೂ ಸಂಘಟನೆ ಇದೆ. ನಾವು ಕೂಡ ಸಂಘಟನೆ ಮೂಲಕ ಹೋರಾಡುತ್ತೇವೆ. ನ್ಯಾಯಾಲಯದಿಂದ ಏನು ತೀರ್ಪು ಬರುತ್ತದೋ ಗೊತ್ತಿಲ್ಲ. ತೀರ್ಪು ಹಿಜಾಬ್ ಪರ ಬಂದಲ್ಲಿ‌ ನಾವು ಸರಿಯಾದ ಉತ್ತರ ಕೊಡುತ್ತೇವೆ. ಕುಂದಾಪುರ ಕಾಲೇಜುಗಳಲ್ಲಿ ಸಾವಿರದಲ್ಲಿ ಐದು ಶೇಕಡಾ ಅಷ್ಟೇ ಮುಸ್ಲಿಂ ವಿದ್ಯಾರ್ಥಿಗಳಿದ್ದಾರೆ. ಹೀಗಾಗಿ ನಾವು ನಮ್ಮ ಶಕ್ತಿ ಪ್ರದರ್ಶನ ತೋರಿಸುತ್ತೇವೆ ಎಂದಿದ್ದಾರೆ.

ಒಟ್ಟಿನಲ್ಲಿ ಉಡುಪಿಯ ಹಲವು ಜ್ಞಾನದೇಗುಲಗಳು ಧರ್ಮ ಸಂಘರ್ಷದ ವೇದಿಕೆಯಾಗಿವೆ. ಈ ವಿವಾದ ಭುಗಿಲೆದ್ದು ಎರಡು ಧರ್ಮಗಳ ನಡುವೆ ಸಂಘರ್ಷವನ್ನುಂಟು ಮಾಡುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೀವು ನಿಮ್ಮ ಸೋಯಾ ಗ್ರ್ಯಾನ್ಯೂಲ್ ಅನ್ನು ಸರಿಯಾಗಿ ತಿನ್ನುತ್ತಿದ್ದೀರಾ?

Fri Feb 4 , 2022
ಸೋಯಾ ಗ್ರ್ಯಾನ್ಯೂಲ್ಸ್, ಸೋಯಾ ಹಿಟ್ಟಿನಿಂದ ತಯಾರಿಸಿದ ಪ್ರೋಟೀನ್-ಪ್ಯಾಕ್ಡ್ ಕ್ರಂಬ್ಸ್, ಸೋಯಾ ಎಣ್ಣೆ ಹೊರತೆಗೆಯುವಿಕೆಯ ಉಪ-ಉತ್ಪನ್ನ, ಅನೇಕ ಭಕ್ಷ್ಯಗಳಿಗೆ ಜನಪ್ರಿಯ ಸೇರ್ಪಡೆಯಾಗಿದೆ. ಅವರು ನಿಮ್ಮ ಡಿನ್ನರ್ ಗ್ರೇವಿಗೆ ಆರೋಗ್ಯಕರ ಟ್ವಿಸ್ಟ್ ನೀಡಬಹುದು, ಉಪಹಾರ ಪೋಹಾ ಅಥವಾ ಮಧ್ಯ-ಊಟ ಟಿಕ್ಕಿ. ಹೆಚ್ಚಿನ ಸಿದ್ಧತೆಗಳಿಗಾಗಿ, ಅವುಗಳನ್ನು ಕೆಲವು ನಿಮಿಷಗಳ ಕಾಲ ನೀರಿನಲ್ಲಿ ಪಿಂಚ್ ಉಪ್ಪಿನೊಂದಿಗೆ ಕುದಿಸಲಾಗುತ್ತದೆ ಮತ್ತು ನಂತರ ನಿಮ್ಮ ನೆಚ್ಚಿನ ಭಕ್ಷ್ಯದಲ್ಲಿ ಬಳಸಲು ಕೆಲವು ಗಂಟೆಗಳ ಕಾಲ ಪಕ್ಕಕ್ಕೆ ಇಡಲಾಗುತ್ತದೆ. ಸೋಯಾ ಗ್ರ್ಯಾನ್ಯೂಲ್‌ಗಳಲ್ಲಿ […]

Advertisement

Wordpress Social Share Plugin powered by Ultimatelysocial