ಒಂದೇ ಮಂಟಪದಲ್ಲಿ ಇಬ್ಬರು ಪ್ರೇಯಸಿಯರನ್ನು ವರಿಸಿದ ಭೂಪ!

ದುವೆಯಾಗಲು ಒಂದು ಹೆಣ್ಣು ಹುಡುಕೋದ್ರಲ್ಲೇ ದಣಿದು ಹಣ್ಣಾಗುತ್ತಿರುವ ಬಿಸಿ ರಕ್ತದ ಯುವಕರ ನಡುವೆ ಇಲ್ಲೊಬ್ಬ ಇಬ್ಬರನ್ನು ಒಂದೇ ಮಂಟಪದಲ್ಲಿ ವರಿಸಿದ್ದಾನೆ. ತೆಲಂಗಾಣದಲ್ಲಿ ಜರುಗಿದ ಈ ಘಟನೆಯಲ್ಲಿ, ತಾನು ಸಂಬಂಧ ಬೆಳೆಸಿದ್ದ ಇಬ್ಬರು ಮಹಿಳೆಯರನ್ನು ಬುಡಕಟ್ಟು ಪುರುಷನೊಬ್ಬ ಒಂದೇ ಮಂಟಪದಲ್ಲಿ ವರಿಸಿದ್ದಾನೆ.

ಭದ್ರಾದ್ರಿ ಕೋತಗುಡೆಂ ಜಿಲ್ಲೆಯ ಮಾದಿವಿ ಸತಿಬಾಬು ಹೆಸರಿನ ಈ ವ್ಯಕ್ತಿ ಒಂದೇ ಸಮಾರಂಭದಲ್ಲಿ ಇಬ್ಬರು ಮಹಿಳೆಯರನ್ನು ವರಿಸಿದ್ದಾನೆ. ಇಲ್ಲಿನ ಚೇರ್ಲಾ ಮಂಡಲದ ಎರ‍್ರಬೋರು ಗ್ರಾಮದ ಸತಿಬಾಬು ಸುನಿತಾ ಹಾಗೂ ಸ್ವಪ್ನಾ ಹೆಸರಿನ ಇಬ್ಬರು ಮಹಿಳೆಯರನ್ನು ವರಿಸಿದ್ದಾನೆ.

ಈ ಮದುವೆಗೆ ಇಬ್ಬರೂ ಹೆಣ್ಣಿನ ಮನೆಯವರ ಸಂಪೂರ್ಣ ಸಹಮತವಿದ್ದು, ಭಾರೀ ಸಂತೋಷದಿಂದ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

“ಸತಿಬಾಬುನ ಮೊದಲ ಪ್ರೇಯಸಿ ಸ್ವಪ್ನಾಗೆ ಆತ ಮತ್ತೊಂದು ಮಹಿಳೆಯೊಂದಿಗೆ ಮದುವೆಯಾಗುವುದು ಇಷ್ಟವಿರಲಿಲ್ಲ. ಆದರೆ ಸತಿಬಾಬು ಇಬ್ಬರನ್ನೂ ಮದುವೆಯಾಗುವುದಾಗಿ ತಿಳಿಸಿದ ಬಳಿಕ ಇಬ್ಬರೂ ಹೆಂಗಸರ ಮನೆಯವರು ಸಂಪ್ರದಾಯದಂತೆ ಮದುವೆ ಮಾಡಲು ಒಪ್ಪಿಕೊಂಡಿದ್ದಾರೆ,” ಎಂದಿದ್ದಾರೆ ಊರಿನ ಹಿರೀಕರು.

ವಿದ್ಯಾರ್ಥಿಗಳಾಗಿದ್ದ ದಿನಗಳಿಂದಲೇ ಸತಿಬಾಬು ಹಾಗೂ ಸ್ವಪ್ನಾ ನಡುವೆ ಪ್ರೇಮಾಂಕುರವಾಗಿದೆ. ಇದೇ ವೇಳೆ ಪಕ್ಕದೂರಿನ ಸುನಿತಾ ಹೆಸರಿನ ಮಹಿಳೆಯೊಂದಿಗೂ ಸಹ ಸತಿಬಾಬು ಸಂಬಂಧ ಇಟ್ಟುಕೊಂಡಿದ್ದ. ಇಬ್ಬರೂ ಮಹಿಳೆಯರಿಗೆ ಮಕ್ಕಳನ್ನೂ ಕರುಣಿಸಿದ್ದ ಸತಿಬಾಬು. ಇದಾದ ಬಳಿಕ ತಮ್ಮನ್ನು ಮದುವೆಯಾಗಲು ಸತಿಬಾಬುವನ್ನು ಇಬ್ಬರೂ ಮಹಿಳೆಯರು ದಂಬಾಲು ಬಿದ್ದಿದ್ದಾರೆ.

ಕೊನೆಯಲ್ಲಿ ಇಬ್ಬರನ್ನೂ ವರಿಸಲು ಸತಿಬಾಬು ನಿರ್ಧರಿಸಿದ್ದಾನೆ. ಬುಡಕಟ್ಟು ಜನಾಂಗದ ಸಂಪ್ರದಾಯಗಳ ಅನುಸಾರ ವರನೊಬ್ಬ ಇಬ್ಬರು ಹೆಣ್ಣುಗಳನ್ನು ವರಿಸಬಹುದಾಗಿದೆ. ಹೀಗಾಗಿ ಈ ಮದುವೆ ಸಮಾರಂಭಕ್ಕೆ ಗ್ರಾಮದ ಹಿರಿಕರು ಒಪ್ಪಿಗೆ ಸೂಚಿಸಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈ ನಾಲ್ಕು ಊರುಗಳ ಗಂಡುಗಳಿಗೆ ಹೆಣ್ಣುಗಳೇ ಸಿಗುತ್ತಿಲ್ಲ...!

Sat Mar 11 , 2023
ಬಿಹಾರದ ಅಭಿವೃದ್ಧಿ ವಿಚಾರವಾಗಿ ರಾಜಕೀಯ ಪಕ್ಷಗಳಲ್ಲಿ ಭಿನ್ನವಾದ ದೃಷ್ಟಿಕೋನಗಳಿರಬಹುದು. ಆದರೆ ಸರ್ಕಾರೀ ದತ್ತಾಂಶಗಳು ತೋರುವ ಪ್ರಕಾರ ರಾಜ್ಯವು ಸಾಮಾಜಿಕ ಸ್ಥಿತಿಗತಿಗಳ ಬಹುತೇಕ ಸೂಚ್ಯಂಕಗಳಲ್ಲಿ ಭಾರೀ ಹಿಂದೆ ಉಳಿದಿದೆ. ವಿದ್ಯುತ್‌ ಅಥವಾ ದೂರವಾಣಿ ಸಂಪರ್ಕಗಳು, ಕೈಗಾರಿಕೆ ಹಾಗೂ ರಸ್ತೆಗಳು ಸೇರಿದಂತೆ ಅನೇಕ ವಿಚಾರಗಳಲ್ಲಿ ಹಿಂದುಳಿದಿರುವುದು ಬಿಹಾರದ ಜನತೆಯ ವೈಯಕ್ತಿಕ ಹಾಗೂ ವೃತ್ತಿಪರ ಬದುಕುಗಳ ಮೇಲೂ ದುಷ್ಪರಿಣಾಮ ಬೀರುವಂತೆ ಮಾಡಿದೆ. ರಾಜ್ಯದ ಲಾಖಿಸಾರಾಯ್, ಪಥುವಾ, ಕನ್ಹಾಯ್ಪುರ, ಪಿಪಾರಿಯಾ ದಿಗ್ ಮತ್ತು ಬಸೌನಾ ಎಂಬ […]

Advertisement

Wordpress Social Share Plugin powered by Ultimatelysocial