ಸ್ವಪಕ್ಷೀಯ MLA ವಿರುದ್ಧವೇ ಮಾಜಿ MLC ಅಸಮಾಧಾನ.

ಚುನಾವಣೆ ಹತ್ತಿರವಾಗುತ್ತಿದ್ದಂತೆ ನಾಯಕರ ನಡುವಿನ ವೈಮನಸ್ಯ ಬಹಿರಂಗವಾಗಲು ಆರಂಭಿಸಿದೆ. ಜೆಡಿಎಸ್‌ ಭದ್ರಕೋಟೆ ಅಂತಲೇ ಕರೆಸಿಕೊಳ್ಳುವ ಮಂಡ್ಯದಲ್ಲಿ ದಳಪತಿಗಳ ಒಗ್ಗಟ್ಟಿನಿ ಕೊರತೆ ಎದ್ದು ಕಾಣ್ತಿದೆ. ನಾಗಮಂಗಲದಲ್ಲಿ ಜೆಡಿಎಸ್ ಮಾಜಿ ವಿಧಾನಪರಿಷತ್ ಸದಸ್ಯ ಅಪ್ಪಾಜಿ ಗೌಡರ ಅಸಮಾಧಾನ ಸ್ಪೋಟಗೊಂಡಿದ್ದು, ಸ್ವಪಕ್ಷೀಯ ಶಾಸಕ ಸುರೇಶ್ ಗೌಡ ವಿರುದ್ಧ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದಾರೆ.ಪಂಚರತ್ನ ಕಾರ್ಯಕ್ರಮ ಹಿನ್ನೆಲೆ ನಾಗಮಂಗಲದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಸಾವಿರಾರು ಕಾರ್ಯಕರ್ತರು ಸೇರಿದ್ದ ಕಾರ್ಯಕ್ರಮದಲ್ಲಿ ಮಾಜಿ ಎಂಎಲ್‌ಸಿ ಅಪ್ಪಾಜಿ ಗೌಡ ಅಸಮಾಧಾನ ವ್ಯಕ್ತಪಡಿಸಿದರು. ಸುರೇಶ್ ಗೌಡರ ಚುನಾವಣೆ ವೇಳೆ ಆರ್ಥಿಕವಾಗಿ ಸಹಾಯ ಮಾಡಿದ್ದ ನನಗೆ, ನನ್ನ ಚುನಾವಣೆಯಲ್ಲಿ ಯಾರೂ ಸಹಾಯ ಮಾಡಲಿಲ್ಲ ಎಂದು ಶಾಸಕ ಸುರೇಶ್ ಗೌಡ ಮುಂದೆಯೇ ಅಸಮಾಧಾನ ಹೊರಹಾಕಿದರು‌. ಸುರೇಶ್ ಗೌಡರ ಕೆಲವು ಶಿಷ್ಯರು ಅಪ್ಪಾಜಿಗೌಡ ಹಣ ಪಡೆದುಕೊಂಡಿದ್ದಾರೆ ಅಂತ ಹಬ್ಬಿಸುತ್ತಿದ್ದಾರೆ. ಯಾವುದೇ ಸಹಾಯವನ್ನ ಸುರೇಶ್ ಗೌಡರಿಂದ ನಾನು ಪಡೆದಿಲ್ಲ. ಇದು ತುಂಬಿದ ಸಭೆ, ಕಾರ್ಯಕರ್ತರಾದ ನೀವು ದೈವ ಸಮಾನರು. ಈ ಸಭೆಯಲ್ಲಿ ನಿಜ ಹೇಳಬೇಕಾದ ಅನಿವಾರ್ಯತೆ ನನಗೆ ಬಂದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಫೈಟರ್ ರವಿ ಬಳಿ ದುಡ್ಡು ಕೊಡಿಸಿದ್ದು ನಿಜ. ಸಾಕಷ್ಟು ಹಿರಿಯರಿದ್ದರು, ನಾನು ಬಾಯಿ ಮುಚ್ಚಿಕೊಂಡು ಇರ್ಬೇಕಿತ್ತು. ರಾಜಕೀಯ ಅನುಭವದ ಕೊರತೆಯಿಂದ ಮುಂದಾಳತ್ವ ತೆಗೆದುಕೊಂಡು ತೊಂದರೆಗೆ ಸಿಲುಕಿಕೊಂಡಿದ್ದೇನೆ. ಶಿವರಾಮೇಗೌಡರ ಎಂಪಿ ಉಪಚುನಾವಣೆಯಲ್ಲೂ ಹಣಕಾಸಿನ ಸಹಾಯ ಮಾಡಿಸಿದ್ದೇನೆ. ನನ್ನ ಅರ್ಥಿಕ ಸಮಸ್ಯೆ ಸಂಬಂಧ ಕೆಲವರನ್ನ ಭೇಟಿ ಮಾಡಬೇಕಾಗುತ್ತದೆ. ಆ ಭೇಟಿಯನ್ನ ಯಾರೂ ತಪ್ಪಾಗಿ ತಿಳಿದುಕೊಳ್ಳಬೇಡಿ ಎನ್ನುವ ಮೂಲಕ ಫೈಟರ್ ರವಿ ಹಾಗೂ ಶಿವರಾಮೇಗೌಡರನ್ನು ಭೇಟಿಯಾಗುವುದಾಗಿ ಪರೋಕ್ಷ ಸುಳಿವು ನೀಡಿದ್ರು.ದಳಪತಿಗಳಿಗೆ ತಲೆನೋವಾದ ನಾಯಕರ ಅಸಮಾಧಾನ.ಒಂದೆಡೆ ನಾಗಮಂಗಲ ಶಾಸಕ ಸುರೇಶ್ ಗೌಡ ವಿರುದ್ಧ ಅಪ್ಪಾಜಿ ಗೌಡ ಅಸಮಾಧಾನ ಹೊರಹಾಕಿದ್ರೆ, ಮತ್ತೊಂದೆಡೆ ಶಿವರಾಮೇಗೌಡ ಜೆಡಿಎಸ್‌ನಿಂದ ಉಚ್ಚಾಟನೆಗೊಂಡ ಬಳಿಕ ಪಕ್ಷೇತರ ಸ್ಪರ್ಧೆಗೆ ತಯಾರಾಗುತ್ತಿದ್ದಾರೆ. ಇಬ್ಬರು ನಾಯಕರ ಬಂಡಾಯ ಜೆಡಿಎಸ್‌‌ಗೆ ಮೊಗ್ಗಲ ಮುಳ್ಳಾಗಲಿದೆ. ಉಚ್ಚಾಟನೆ ಬಳಿಕ ಸ್ವತಂತ್ರ ಹಕ್ಕಿಯಂತೆ ನಾಗಮಂಗಲ ಕ್ಷೇತ್ರದಾದ್ಯಂತ ಸಂಚರಿಸಿ ಭರ್ಜರಿ ಪ್ರಚಾರ ನಡೆಸುತ್ತಿರುವ ಮಾಜಿಸಂಸದ ಶಿವರಾಮೇಗೌಡ ದಳಪತಿಗಳಿಗೆ ಟಕ್ಕರ್ ಕೊಡಲು ಅಣಿಯಾಗ್ತಿದ್ದಾರೆ. ಸದ್ಯ ಭಿನ್ನಮತ ಶಮನ ಮಾಡುವುದೇ ಜೆಡಿಎಸ್ ವರಿಷ್ಠರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾಗಮಂಗಲ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಮೊಗ್ಗಲು ಮುಳ್ಳು.

Wed Dec 14 , 2022
ನಾಗಮಂಗಲ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಮೊಗ್ಗಲು ಮುಳ್ಳು. ಒಂದು ಕಡೆ ಸ್ವಪಕ್ಷಿಯರಿಂದಲೇ ಭಿನ್ನಮತ. ಇನ್ನೊಂದೆಡೆ ಉಚ್ಚಾರಣೆಗೊಂಡ ನಾಯಕನಿಂದ ಸವಾಲು. ತಲೆನೋವಿಗೆ ಕಾರಣವಾದ ಮೊಗ್ಗಲಿನ ನಾಯಕರು. 15 ವರ್ಷದ ನಂತರ ಚಿಗುರೊಡೆದ ಎಂಎಲ್‌ಎ ಆಸೆ. ರಿವೆಂಜ್‌ಗಾಗಿ ಹುಟ್ಟಿಕೊಂಡಿದೆ ಎಂಎಲ್‌ಎ ಕನಸು. ಪಕ್ಷದಲ್ಲಿ ಉಚ್ಚಾರಣೆಗೆ ಕಾರಣರಾದವರಿಗೆ ಉತ್ತರ ಕೊಡಲು ಚುನಾವಣಾ ಅಖಾಡಕ್ಕೆ. ಜೆಡಿಎಸ್‌ ನಾಯಕರ ವಿರುದ್ಧ ತಡೆಗಟ್ಟಲು ಮಾಜಿ‌ ಸಂಸದ ಎಲ್.ಆರ್.ಶಿವರಾಮೇಗೌಡ ಸ್ವಾಭಿಮಾನದ ಕಹಳೆ. ಜೆಡಿಎಸ್‌‌ನಿಂದ ಉಚ್ಚಾರಣೆಗೊಂಡಿದ್ದ ಶಿವರಾಮೇಗೌಡ. ಇದೀಗ ಜೆಡಿಎಸ್‌ ಟಕ್ಕರ್ ನೀಡಲು […]

Advertisement

Wordpress Social Share Plugin powered by Ultimatelysocial