ಈ ನಾಲ್ಕು ಊರುಗಳ ಗಂಡುಗಳಿಗೆ ಹೆಣ್ಣುಗಳೇ ಸಿಗುತ್ತಿಲ್ಲ…!

ಬಿಹಾರದ ಅಭಿವೃದ್ಧಿ ವಿಚಾರವಾಗಿ ರಾಜಕೀಯ ಪಕ್ಷಗಳಲ್ಲಿ ಭಿನ್ನವಾದ ದೃಷ್ಟಿಕೋನಗಳಿರಬಹುದು. ಆದರೆ ಸರ್ಕಾರೀ ದತ್ತಾಂಶಗಳು ತೋರುವ ಪ್ರಕಾರ ರಾಜ್ಯವು ಸಾಮಾಜಿಕ ಸ್ಥಿತಿಗತಿಗಳ ಬಹುತೇಕ ಸೂಚ್ಯಂಕಗಳಲ್ಲಿ ಭಾರೀ ಹಿಂದೆ ಉಳಿದಿದೆ. ವಿದ್ಯುತ್‌ ಅಥವಾ ದೂರವಾಣಿ ಸಂಪರ್ಕಗಳು, ಕೈಗಾರಿಕೆ ಹಾಗೂ ರಸ್ತೆಗಳು ಸೇರಿದಂತೆ ಅನೇಕ ವಿಚಾರಗಳಲ್ಲಿ ಹಿಂದುಳಿದಿರುವುದು ಬಿಹಾರದ ಜನತೆಯ ವೈಯಕ್ತಿಕ ಹಾಗೂ ವೃತ್ತಿಪರ ಬದುಕುಗಳ ಮೇಲೂ ದುಷ್ಪರಿಣಾಮ ಬೀರುವಂತೆ ಮಾಡಿದೆ.

ರಾಜ್ಯದ ಲಾಖಿಸಾರಾಯ್, ಪಥುವಾ, ಕನ್ಹಾಯ್ಪುರ, ಪಿಪಾರಿಯಾ ದಿಗ್ ಮತ್ತು ಬಸೌನಾ ಎಂಬ ಗ್ರಾಮಗಳಲ್ಲಿ ಸ್ವಾತಂತ್ರ‍್ಯ ಬಂದಾಗಿನಿಂದ ಇಂದಿಗೂ ರಸ್ತೆಗಳನ್ನೇ ಹಾಕಿಲ್ಲ! ಅಭಿವೃದ್ಧಿ ವಿಚಾರದಲ್ಲಿ ಈ ಮಟ್ಟದಲ್ಲಿ ಹಿಂದುಳಿದ ಕಾರಣ ಈ ಊರುಗಳ ಜನಜೀವನಗಳಲ್ಲೂ ಅನೇಕ ಅಡಚಣೆಗಳುಂಟಾಗಿವೆ. ಅನ್ಯ ಊರುಗಳ ಜನರು ತಮ್ಮ ಹೆಣ್ಣುಮಕ್ಕಳನ್ನು ಈ ಊರುಗಳಿಗೆ ಮದುವೆ ಮಾಡಿಕೊಡಲು ಹಿಂದೇಟು ಹಾಕುತ್ತಾರೆ. ಈ ಕಾರಣದಿಂದಲೇ ಈ ಊರುಗಳಲ್ಲಿ ದೊಡ್ಡ ಸಂಖ್ಯೆಯ ಪುರುಷರು ಅವಿವಾಹಿತರಾಗೇ ಉಳಿದಿದ್ದಾರೆ. ಇಷ್ಟು ಮಾತ್ರವಲ್ಲದೇ ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ಆಸ್ಪತ್ರೆಗಳಿಗೆ ಜನರನ್ನು ರವಾನೆ ಮಾಡುವುದೂ ಸಹ ಈ ಊರುಗಳಲ್ಲಿ ದುಸ್ತರವಾಗಿದೆ.

ರಸ್ತೆಗಳೇ ಇಲ್ಲದ ಕಾರಣ ಈ ಊರಿಗೆ ಯಾವುದೇ ರೀತಿಯ ಸಾರಿಗೆ ಸಂಪರ್ಕ ಕಷ್ಯಾಸಾಧ್ಯವಾಗಿದೆ. ಸಂಸದರು, ಶಾಸಕರು, ಮುಖ್ಯಮಂತ್ರಿಗಳ ಜೊತೆಗೆಲ್ಲಾ ಈ ಸಮಸ್ಯೆ ಕುರಿತು ಮಾತನಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಧಾರವಾಡದಲ್ಲಿ ಐಐಟಿ ಆಗೋಕೆ ಕಾರಣವೇ ಕಾಂಗ್ರೆಸ್!

Sat Mar 11 , 2023
ಧಾರವಾಡದಲ್ಲಿ ಐಐಟಿ ಆಗೋಕೆ ಕಾರಣವೇ ಕಾಂಗ್ರೆಸ್ ವಿಡಿಯೋ ಮೂಲಕ ಐಐಟಿ ಮಾಡಿದ್ದು ನಾವೇ ಎಂದ ಮಾಜಿ ಸಚಿವ ವಿನಯ್ ಕುಲಕರ್ಣಿ ಐಐಟಿ ಉದ್ಘಾಟನೆ ಆಗುತ್ತಿದ್ದು ಖುಷಿ ತಂದಿದೆ ಐಐಟಿ ಬಂದ ವೇಳೆ ರಾಯಚೂರಿಗೆ ಹೋಗಬೇಕು ಅಂತ ಚರ್ಚೆ ಆಗಿತ್ತು ಅದರ ನಂತರ ಮೈಸೂರಿಗೆ ಐಐಟಿ ಆಗಬೇಕು ಎಂದು ಚರ್ಚೆಯಾಗಿತ್ತು ಆಗ ನಾವೆಲ್ಲರೂ ಧಾರವಾಡಕ್ಕೆ ಬರಬೇಕು ಅಂತ ಒತ್ತಾಯ ಹಾಕಿದ್ವಿ ಆಗ ಆದರೂ ರಾಯಚೂರು ಹಾಗೂ ಮೈಸೂರಿಗೆ ಐಐಟಿ ವರ್ಗಾವಣೆಯಾಯಿತು ಮರಳಿ […]

Advertisement

Wordpress Social Share Plugin powered by Ultimatelysocial