ಐಶ್ವರ್ಯಾ ರೈ ಮನೆಯಲ್ಲಿ ಅವರೊಬ್ಬರೇ ಸುಂದರಿ ಅಲ್ಲ!

ಬಾಲಿವುಡ್‌ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಯಾರಿಗೆ ಗೊತ್ತಿಲ್ಲ. ವಿಶ್ವದ ಮೂಲೆ ಮೂಲೆಯಲ್ಲೂ ಈ ಬ್ಯೂಟಿಗೆ ಅಭಿಮಾನಿಗಳಿದ್ದಾರೆ. ವಿಶ್ವ ಸುಂದರಿ ಪಟ್ಟ ಗೆದ್ದು ಭಾರತದ ಘನತೆ ಹೆಚ್ಚಿಸಿದ ಈ ಸುಂದರಿ ಸೌಂದರ್ಯಕ್ಕೆ ಮಾರು ಹೋದವರು ಅದೆಷ್ಟೋ ಮಂದಿ.

ಇನ್ನೇನು 50ನೇ ವರ್ಷದ ಸನಿಹದಲ್ಲಿ ಇದ್ದರೂ, ಐಶ್ವರ್ಯಾ ಸೌಂದರ್ಯಕ್ಕೆ ಸರಿಸಾಟಿ ಯಾರು ಹೇಳಿ. ಐಶ್ವರ್ಯಾ ರೈ ಬಚ್ಚನ್ ಬಾಲಿವುಡ್‌ನ ಎವರ್‌ಗ್ರೀನ್ ಬ್ಯೂಟಿ. ಹಾಗಂತ ಇವರ ಮನೆಯಲ್ಲಿ ಇವರೊಬ್ಬರೇ ಸುಂದರಿ ಅಂದುಕೊಳ್ಳಬೇಡಿ. ಐಶ್ ಅತ್ತಿಗೆಯನೂ ಅತಿಲೋಕ ಸುಂದರಿನೇ.

ಐಶ್ವರ್ಯಾ ರೈ ಸಹೋದರ ಅದಿತ್ಯ ರೈ ಅವರನ್ನು ವಿವಾಹವಾದ ಶ್ರಿಮಾ ರೈ ಕೂಡ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದಿದ್ದಾರೆ. ಹಾಗಿದ್ದರೆ, ಐಶ್ವರ್ಯಾ ರೈ ಅತ್ತಿಗೆ ಹಿನ್ನೆಲೆ ಏನು? ಯಾವ ಸ್ವರ್ಧೆ ಗೆದ್ದಿದ್ದಾರೆ? ಈಗ ಏನು ಮಾಡುತ್ತಿದ್ದಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಐಶ್ವರ್ಯಾ ರೈ ಅತ್ತಿಗೆ ಹಿನ್ನೆಲೆಯೇನು?

ಐಶ್ವರ್ಯಾ ರೈ ಅತ್ತಿಗೆ ಶ್ರಿಮಾ ರೈ ಕೂಡ ಮಾಡಲ್ ಆಗಿ ಗುರುತಿಸಿಕೊಂಡಿದ್ದವರು. ಮೂಲ ಮಂಗಳೂರು ಆಗಿದ್ದರೂ, ಅಮೆರಿಕದ ಫಿಲಿಡೆಲ್ಫಿಯಾದಲ್ಲಿ ಬೆಳೆದಿದ್ದಾರೆ. ಶ್ರಿಮಾ ರೈ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಅವರ ಸಹೋದರ ಆದಿತ್ಯ ರೈರನ್ನು ವಿವಾಹವಾದ ಬಳಿಕ ಮುಂಬೈಗೆ ಬಂದು ನೆಲೆಸಿದ್ದಾರೆ. ಶ್ರಿಮಾ ರೈ ಕೂಡ 2009ರಲ್ಲಿ ನಡೆದಿದ್ದ ಮಿಸ್ಸಸ್ ಇಂಡಿಯಾ ಗ್ಲೋಬಲ್ ಸ್ಪರ್ಧೆಯಲ್ಲಿ ಮೊದಲ ರನ್ನರ್‌ಅಪ್ ಆಗಿ ಹೊರಹೊಮ್ಮಿದ್ದರು.

ಐಶ್ವರ್ಯಾ ರೈ ಜೊತೆ ಸಂಬಂಧ ಹೇಗಿದೆ?

ಐಶ್ವರ್ಯಾ ರೈ ಬಚ್ಚನ್ ಮಾಜಿ ವಿಶ್ವ ಸುಂದರಿ ಅಷ್ಟೇ ಅಲ್ಲ. ಬಾಲಿವುಡ್‌ ಸೂಪರ್‌ಸ್ಟಾರ್ ಕೂಡ ಹೌದು. ಇತ್ತ ಶ್ರಿಮಾ ರೈ ಕೂಡ ಮಾಡೆಲ್. ಅಲ್ಲದೆ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗಿಯಾಗಿ ಗೆದ್ದಿದ್ದಾರೆ. ತನ್ನದೇ ದಾರಿಯಲ್ಲಿ ಸಾಗುತ್ತಿರುವ ಶಿಮಾ ಈ ಹಿಂದೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಐಶ್ವರ್ಯಾ ಬಗ್ಗೆ ಮಾತಾಡಿದ್ದರು. ” ನಾನು ಐಶ್ವರ್ಯಾರನ್ನು ಸೂಪರ್‌ಸ್ಟಾರ್ ಅಂತ ನೋಡುವುದಿಲ್ಲ. ಅವರು ಮೊದಲು ನನಗೆ ಅತ್ತಿಗೆ. ಆದರೆ, ನಮಗೆ ಯಾವಾಗಲೂ ಐಶ್ ಹಾಗೂ ಅಭಿಷೇಕ್ ಅವರನ್ನು ನೋಡಲು ಆಗುವುದಿಲ್ಲ. ಅವರು ಬಂದಾಗ, ನಾನು ಕೆಲಸದಲ್ಲಿ ಬ್ಯುಸಿಯಾಗಿರುತ್ತೇನೆ” ಎಂದಿದ್ದರು.

ಆದಿತ್ಯ ರೈ-ಶಿಮಾ ಲವ್‌ ಸ್ಟೋರಿ

ಐಶ್ವರ್ಯಾ ರೈ ಸಹೋದರ ಆದಿತ್ಯ ಹಾಗೂ ಶಿಮಾ ಇಬ್ಬರು ಒಂದು ಡಿನ್ನರ್ ಪಾರ್ಟಿಯಲ್ಲಿ ಭೇಟಿಯಾಗಿದ್ದರು. ಅಲ್ಲಿ ಇಬ್ಬರ ಪರಿಚಯವಾಗಿತ್ತು. ಆ ಬಳಿಕ ನಿಶ್ಚಿರ್ಥ ನೆರವೇರಿತ್ತು. ಅಲ್ಲಿಂದ ಸುಮಾರು ಒಂದು ವರ್ಷಗಳ ಕಾಲ ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡರು. ಆನಂತವೇ ಮದುವೆಯಾಗಲು ತೀರ್ಮಾನಿಸಿದ್ದರು. ಈ ಒಂದು ವರ್ಷದಲ್ಲಿ ಇಬ್ಬರ ಸಂಬಂಧ ಗಾಡವಾಗಿ ಬೆಳೆದಿತ್ತು. 15 ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ ಮುಂಬೈನಲ್ಲಿ ನೆಲೆಸಿದೆ.

ಈಗ ಶಿಮಾ ರೈ ಮಾಡುತ್ತಿರೋದೇನು?

ಶಿಮಾ ರೈ ತುಂಬಾನೇ ಕ್ರಿಯೇಟಿವ್. ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಆಕ್ಟಿವ್ ಆಗಿರುತ್ತಾರೆ. ಸದ್ಯ ಡಿಜಿಟಲ್ ಇನ್‌ಫ್ಲ್ಯೂಯೆನ್ಸರ್ ಆಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಫ್ಯಾಷನ್ ಬ್ರ್ಯಾಂಡ್, ಲೈಫ್‌ಸ್ಟೈಲ್ ಬ್ರ್ಯಾಂಡ್‌ಗಳನ್ನು ಪ್ರಮೋಟ್ ಮಾಡುತ್ತಾರೆ. ಸದ್ಯ ಶಿಮಾ ರೈ ಬಳಿ 1 ಲಕ್ಷ 7 ಸಾವಿರಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಂಗನಾ ರಣಾವತ್ ಆಯ್ಕೆಯ ಅತ್ಯುತ್ತಮ ನಟ ರಿಷಬ್ ಶೆಟ್ಟಿ, ಆದರೆ ನೆಪೋಟಿಸಂ ಮಾಫಿಯಾ ಬಿಡುವುದೆ?.

Tue Feb 21 , 2023
ಕಂಗನಾ ರಣಾವತ್ ಅವರು  ಮತ್ತೊಮ್ಮೆ ಬಾಲಿವುಡ್ ವಿರುದ್ಧ ಮಾತಿನ ಪ್ರಹಾರ ಶುರು ಮಾಡಿದ್ದಾರೆ. ಟ್ವೀಟ್ ಮೂಲಕ ಅವರು ಬಾಲಿವುಡ್‌ನ ನೆಪೋಟಿಸಂ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ.”ಮತ್ತೊಮ್ಮೆ ಪ್ರಶಸ್ತಿ ನೀಡುವ ಸಮಯ ಬಂದಿದೆ, ಅಷ್ಟೇ ಅಲ್ಲದೆ ನೆಪೋಟಿಸಂ ಮಾಫಿಯಾ ಶುರುವಾಗಿ ಪ್ರತಿಭಾವಂತರಿಗೆ ಸಿಗಬೇಕಿರುವ ಪ್ರಶಸ್ತಿಗಳನ್ನು ಕಸಿದುಕೊಳ್ಳಲಿದೆ. 2022ರ ಅದ್ಭುತವಾಗಿ ಕಲೆ ಪ್ರದರ್ಶನ ಮಾಡಿದವರ ಲಿಸ್ಟ್ ಇಲ್ಲಿದೆಕಂಗನಾ ರಣಾವತ್ ಅವರ ಟ್ವೀಟ್ ನೋಡಿ ಕೆಲವರು ಬೇಸರ ಹೊರಹಾಕಿದ್ದರೆ, ಇನ್ನೂ ಕೆಲವರು ಮೆಚ್ಚಿದ್ದಾರೆ. ನೆಪೋ ಮಕ್ಕಳು […]

Advertisement

Wordpress Social Share Plugin powered by Ultimatelysocial