ಬಿಡದಿಯ ತೋಟದಲ್ಲಿ 3,000 ನಾಟಿ ಕೋಳಿಗಳನ್ನು ಸಾಕುತ್ತಿದ್ದೇನೆ : ಎಚ್‌ಡಿಕೆ

ಬೆಂಗಳೂರು: ಕುಕ್ಕುಟೋದ್ಯಮದಲ್ಲಿ ಸಣ್ಣ ಪ್ರಮಾಣದ ಕೋಳಿ ಸಾಕಣೆದಾರರು, ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಜ್ಯ ಸರಕಾರದ ಗಮನ ಸೆಳೆಯುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಾರೆ.ಶಾಸಕರ ಭವನದಲ್ಲಿಂದು ಕೋಳಿ ಸಾಕಣೆದಾರರ ಸಮಸ್ಯೆಗಳ ಕುರಿತಾದ ರಾಜ್ಯದ ಮಟ್ಟದ ದುಂಡುಮೇಜಿನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು; “ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಸಬಲೀಕರಣ ಹಾಗೂ ನಿರುದ್ಯೋಗವನ್ನು ಹತ್ತಿಕ್ಕುವ ಶಕ್ತಿಯುಳ್ಳ ಕೋಳಿ ಸಾಕಣೆಗೆ ಸರಕಾರ ಹೆಚ್ಚು ಪ್ರೋತ್ಸಾಹ ನೀಡಬೇಕಿದೆ ಎಂದರು.ಸದ್ಯಕ್ಕೆ ಕುಕ್ಕುಟೋದ್ಯಮ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ನ್ಯಾಯಯುತ ಬೆಲೆಯಲ್ಲೂ ಸಾಕಣೆದಾರರಿಗೆ ಅನ್ಯಾಯವಾಗುತ್ತಿದೆ. ಸ್ವತಃ ನಾನು ಕೂಡ ಬಿಡದಿಯ ತೋಟದಲ್ಲಿ 3,000 ನಾಟಿ ಕೋಳಿಗಳನ್ನು ಸಾಕುತ್ತಿದ್ದೇನೆ. ಆದರೆ, ಅದರಿಂದ ಲಾಭವೇನೂ ಇಲ್ಲ. ಕೇವಲ ಈ ಕೆಲಸದಲ್ಲಿ ಕೊಂಚ ಅನುಭವ ಗಳಿಸಿಕೊಳ್ಳಲು ಕೋಳಿ ಸಾಕಣೆ ಮಾಡುತ್ತಿದ್ದೇನೆ ಎಂದರು ಅವರು.ಉಳಿದಂತೆ ರೈತರು ಮತ್ತು ಕಂಪನಿಗಳ ನಡುವೆ ಆಗಿರುವ ಒಪ್ಪಂದದಂತೆ ಸಕಾಲಕ್ಕೆ ರೈತರಿಗೆ ಕೋಳಿ ಮರಿಗಳನ್ನು ನೀಡಬೇಕು, ಸರಕಾರ ನಿಗದಿ ಮಾಡಿರುವ ಕನಿಷ್ಟ ಸಾಕಣೆ ದರ ನೀಡುವುದು, ಕೋಳಿ ಸಾಕಣೆಯನ್ನು ಕೃಷಿ ಎಂದು ಸರಕಾರ ಘೋಷಣೆ ಮಾಡಬೇಕು, ರಾಜ್ಯದ ಕುಕ್ಕುಟ ಮಹಾಮಂಡಳಿಯನ್ನು ಕೆಎಂಎಫ್‌ ಮಾದರಿಯಲ್ಲಿ ಬಲಪಡಿಸುವುದು ಸೇರಿದಂತೆ ನಿಮ್ಮ ಹಲವಾರು ಬೇಡಿಕೆಗಳು ನ್ಯಾಯಯುತವಾಗಿವೆ. ಅವುಗಳ ಬಗ್ಗೆ ಸಂಬಂಧಪಟ್ಟ ಸಚಿವರ ಜತೆ ಮಾತನಾಡುವುದಾಗಿ ಕುಮಾರಸ್ವಾಮಿ ಅವರು ಸಭೆಯಲ್ಲಿ ಹೇಳಿದರು.ಸಭೆಯಲ್ಲಿ ಮಾಜಿ ಸಚಿವ ವೆಂಕಟರಾವ್‌ ನಾಡಗೌಡ, ಕುಕ್ಕುಟ ಮಹಾಮಂಡಳಿ ಅಧ್ಯಕ್ಷ ಕಾಂತರಾಜ್‌, ರಾಜ್ಯ ಕೋಳಿ ಸಾಕಣೆದಾರ ರೈತರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ, ಅಧ್ಯಕ್ಷ ಜೆ.ಸಿ.ಮಂಜುನಾಥ್‌ ಪ್ರಧಾನ ಕಾರ್ಯದರ್ಶಿ ಸಿ.ಎಂ. ರಮೇಶ್‌ ಮುಂತಾದವರು ಮಾತನಾಡಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

"ಬಡ್ಡೀಸ್" ಚಿತ್ರದ ವಿಭಿನ್ನ ಪೋಸ್ಟರ್ ಬಿಡುಗಡೆ.

Fri Mar 18 , 2022
ತೆರೆ ಹಿಂದಿನ ತಾರೆಯರು ಎಂಬ ಬರಹದ ಮೂಲಕ ತಂತ್ರಜ್ಞರಿಗೆ ಮನ್ನಣೆ.ಸಾಮಾನ್ಯವಾಗಿ ಎಲ್ಲಾ ಚಿತ್ರಗಳ ಪೋಸ್ಟರ್ ಬಿಡುಗಡೆ ಚಿತ್ರರಂಗ ಸೇರಿದಂತೆ ಅನೇಕ ರಂಗಗಳ ಗಣ್ಯರಿಂದ ಮಾಡಿಸುವುದು ವಾಡಿಕೆ.ಆದರೆ “ಬಡ್ಡೀಸ್” ಚಿತ್ರದ ಪೋಸ್ಟರನ್ನು ಚಿತ್ರಕ್ಕಾಗಿ ದುಡಿದ ತಂತ್ರಜ್ಞರ ಮೂಲಕ ಬಿಡುಗಡೆ ಮಾಡಿಸಿದ್ದಾರೆ ಈ ಚಿತ್ರದ ನಿರ್ಮಾಪಕಿ ಭಾರತಿ ಶೆಟ್ಟಿ ಹಾಗೂ ನಿರ್ದೇಶಕ ಗುರುತೇಜ್ ಶೆಟ್ಟಿ.ಈ ಪೋಸ್ಟರ್ ಬಿಡುಗಡೆಗಾಗಿ ಎಲ್ಲಾ ತಂತ್ರಜ್ಞರನ್ನು ತಾರೆಯರಂತೆ ಸಿದ್ದಪಡಿಸಿ, ಫೋಟೋ ಶೂಟ್ ಕೂಡ ಮಾಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ […]

Advertisement

Wordpress Social Share Plugin powered by Ultimatelysocial