ಹಕ್ಕಿ ಜ್ವರ ಮನುಷ್ಯರಿಗೂ ತಗುಲಬಹುದು;

ನರು ಸತ್ತ ಅಥವಾ ಅನಾರೋಗ್ಯಕ್ಕೊಳಗಾದ ಕಾಡು ಪ್ರಾಣಿಗಳನ್ನು ಮುಟ್ಟಬಾರದು. ಅವುಗಳನ್ನು ಮನೆಗೆ ತರಬಾರದು. ಈ ರೀತಿಯ ಕಾಡುಪ್ರಾಣಿಗಳು ಕಂಡುಬಂದರೆ ಸ್ಥಳೀಯ ಅಧಿಕಾರಿಗಳಿಗೆ ವರದಿ ನೀಡಬೇಕು ಎಂದು WHO ಸೂಚಿಸಿದೆ.ನವದೆಹಲಿ: ಸಾಕು ಕೋಳಿಗಳು ಮತ್ತು ಬಾತುಕೋಳಿಗಳಲ್ಲಿ ಹೆಚ್ಚಾಗಿ ಕಂಡುಬರುವ ಹಕ್ಕಿ ಜ್ವರವು  ಭಾರತದ ಅನೇಕ ರಾಜ್ಯಗಳನ್ನು ಪ್ರವೇಶಿಸಿದೆ.

ಈ ಹಿನ್ನೆಲೆಯಲ್ಲಿ ಫಾರ್ಮ್​ಗಳಲ್ಲಿ ಲಕ್ಷಾಂತರ ಕೋಳಿಗಳನ್ನು ಈಗಾಗಲೇ ಸಾಮೂಹಿಕ ಹತ್ಯೆ ಮಾಡಲಾಗಿದೆ. ಆದರೆ, ಈ ಹಕ್ಕಿ ಜ್ವರಪಕ್ಷಿಗಳಿಗೆ ಮಾತ್ರವಲ್ಲದೆ ಮನುಷ್ಯರಿಗೂ ಹರಡುವ ಸಾಧ್ಯತೆ ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ  ಎಚ್ಚರಿಕೆ ನೀಡಿದೆ.

ಹಕ್ಕಿ ಜ್ವರ ಏವಿಯನ್ ಇನ್ಫ್ಲುಯೆನ್ಸ್​ ಟೈಪ್ ಎ ವೈರಸ್‌ಗಳ ಸೋಂಕಿನಿಂದ ಬರುವ ಒಂದು ಕಾಯಿಲೆಯಾಗಿದ್ದು, ಇದು ಸಾಮಾನ್ಯವಾಗಿ ದೇಶೀಯ ಕೋಳಿಗಳಿಗೆ, ಇತರ ಪಕ್ಷಿ ಮತ್ತು ಸಸ್ತನಿ ಜಾತಿಗಳಲ್ಲಿ ಸೋಂಕು ಉಂಟುಮಾಡುತ್ತದೆ. ಆದರೆ, ಇತ್ತೀಚಿನ   ವಿಶ್ಲೇಷಣೆಯು ಈ ರೋಗವು ಮಾನವರನ್ನು ಕೂಡ ಕಾಡುವ ಸಾಧ್ಯತೆಯಿದೆ ಎಂದು ಹೇಳಿದೆ.

ಅಂತಾರಾಷ್ಟ್ರೀಯ ಏಜೆನ್ಸಿಯ ಡೈರೆಕ್ಟರ್ ಜನರಲ್, ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಈ ಬಗ್ಗೆ ಮುನ್ನೆಚ್ಚರಿಕೆ ನೀಡಿದ್ದು, “H5N1 25 ವರ್ಷಗಳಿಂದ ಕಾಡು ಪಕ್ಷಿಗಳು ಮತ್ತು ಕೋಳಿಗಳಲ್ಲಿ ವ್ಯಾಪಕವಾಗಿ ಹರಡಿದೆ. ಆದರೆ ಇದು ಮನುಷ್ಯರನ್ನು ಕೂಡ ಕಾಡುವ ಸಾಧ್ಯತೆಯಿದೆ.” ಎಂದಿದ್ದಾರೆ.

ಮಿಂಕ್ಸ್, ನೀರುನಾಯಿಗಳು, ನರಿಗಳು ಮತ್ತು ಸಮುದ್ರ ಸಿಂಹಗಳು ಸೇರಿದಂತೆ ಅನೇಕ ಸಸ್ತನಿಗಳಲ್ಲಿ ಹಿಂದಿನ ಕೆಲವು ವಾರಗಳಲ್ಲಿ ಹಕ್ಕಿ ಜ್ವರದ ಸೋಂಕಿನ ಹಲವಾರು ಪ್ರಕರಣಗಳು ಕಂಡುಬಂದಿವೆ. ಹೀಗಾಗಿ, ಮನುಷ್ಯರು ಕೂಡ ಎಚ್ಚರಿಕೆಯಿಂದ ಇರಬೇಕು. ಜನರು ಸತ್ತ ಅಥವಾ ಅನಾರೋಗ್ಯಕ್ಕೊಳಗಾದ ಕಾಡು ಪ್ರಾಣಿಗಳನ್ನು ಮುಟ್ಟಬಾರದು. ಅವುಗಳನ್ನು ಮನೆಗೆ ತರಬಾರದು. ಈ ರೀತಿಯ ಕಾಡುಪ್ರಾಣಿಗಳು ಕಂಡುಬಂದರೆ ಸ್ಥಳೀಯ ಅಧಿಕಾರಿಗಳಿಗೆ ವರದಿ ನೀಡಬೇಕು.   ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಮಾನವರಲ್ಲಿ H5N1 ಸೋಂಕಿನ ಪ್ರಕರಣಗಳನ್ನು ಅಧ್ಯಯನ ಮಾಡಲು ರಾಷ್ಟ್ರೀಯ ಅಧಿಕಾರಿಗಳು ಮತ್ತು ಪಾಲುದಾರರೊಂದಿಗೆ ಕೆಲಸ ಮಾಡುತ್ತಿದೆ ಎಂದಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಕೆಟ್ಟ ಕೊಲೆಸ್ಟ್ರಾಲ್ ಕರಗಿಸಿ, ತೂಕ ಇಳಿಕೆಗೆ ಲಾಭಕಾರಿ ಈ ಹಿಟ್ಟು!

Fri Feb 10 , 2023
ಧಾನ್ಯಗಳು ನಮ್ಮ ಆಹಾರದ ಪ್ರಮುಖ ಭಾಗಗಳಾಗಿವೆ, ನಾವು ದಿನಕ್ಕೆ ಮೂರು ಊಟದಲ್ಲಿ ಮಾಡುತ್ತೇವೆ. ಧಾನ್ಯಗಳಲ್ಲಿ ಹಿಟ್ಟು, ಕಾಳುಗಳು ಮತ್ತು ಅಕ್ಕಿ ಶಾಮೀಲಾಗಿವೆ. ನಾವು ಚಪಾತಿ ತಯಾರಿಸಲು ಗೋಧಿಯನ್ನು ಬಳಸುತ್ತೇವೆ. ನಾವು ರೊಟ್ಟಿ ತಯಾರಿಸಲು ಅನೇಕ ರೀತಿಯ ಧಾನ್ಯಗಳನ್ನು ಬಳಸುತ್ತೇವೆ ಬಳಸುತ್ತೇವೆ. ಕೆಲವು ಬೇಳೆಕಾಳುಗಳ ಹಿಟ್ಟು ಕೂಡ ತಯಾರಿಸಲಾಗುತದೆ. ಬಹುತೇಕ ಜನರಿಗೆ ಹೆಸರುಬೇಳೆ ಹಿಟ್ಟು ತಿಳಿದಿರುತ್ತದೆ. ಕಡಲೆ ಹಿಟ್ಟು ಅಥವಾ ಬೇಸನ್ ಅನ್ನು ಕಡಲೇ ಕಾಳುಗಳಿಂದ ತಯಾರಿಸಲಾಗುತ್ತದೆ, ಇದು ಆರೋಗ್ಯಕ್ಕೆ ತುಂಬಾ […]

Advertisement

Wordpress Social Share Plugin powered by Ultimatelysocial