ಬಿಜೆಪಿ ವಿರುದ್ಧ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಸರಣಿ ಟ್ವೀಟ್ ಗಳ ಮೂಲಕ ಕಿಡಿಕಾರಿದ್ದಾರೆ.

ಬಿಜೆಪಿ  ವಿರುದ್ಧ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್  ಸರಣಿ ಟ್ವೀಟ್ ಗಳ ಮೂಲಕ ಕಿಡಿಕಾರಿದ್ದಾರೆ. ಸ್ಯಾಂಟ್ರೋ ರವಿ ತಾನು ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡಿದ್ದ ಎಂದು ಮಾಧ್ಯಮವೊಂದರಲ್ಲಿ ಪ್ರಕಟವಾಗಿತ್ತು. ಬೆಂಗಳೂರು: ಬಿಜೆಪಿ (BJP) ವಿರುದ್ಧ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್   ಸರಣಿ ಟ್ವೀಟ್ ಗಳ ಮೂಲಕ ಕಿಡಿಕಾರಿದ್ದಾರೆ.
ಸ್ಯಾಂಟ್ರೋ ರವಿ ತಾನು ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡಿದ್ದ ಎಂದು ಮಾಧ್ಯಮವೊಂದರಲ್ಲಿ ಪ್ರಕಟವಾಗಿತ್ತು. ಇದನ್ನು ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್, ನಾನು ಬಿಜೆಪಿ ಕಾರ್ಯಕರ್ತ ಎಂದು ಸ್ಯಾಂಟ್ರೋ ರವಿ (Santro Ravi) ಯೇ ಹೇಳಿಕೊಂಡಿದ್ದಾನೆ. ಇಂತಹ ತಲೆಹಿಡುಕರು ಬಿಜೆಪಿಯಲ್ಲಿ ಮಾತ್ರ ಇರಲು ಸಾಧ್ಯ. ಯಾಕೆಂದರೆ ಬಿಜೆಪಿಯೇ ಕಳ್ಳ ಖದೀಮರ ಸಂತೆ.
ಲಂಪಟರು, ನುಂಗುಬಾಕರು, ಲಂಚ-ಮಂಚ ಪ್ರಹಸನ ಶೂರರಿಂದ ಬಿಜೆಪಿ ತುಂಬಿ ತುಳುಕುತ್ತಿದೆ. ಇಂತಹ ಭಂಡ ಬಿಜೆಪಿ ಯವರಿಗೆ ಸಂಸ್ಕೃತಿ, ಆಚಾರ, ವಿಚಾರಗಳ ಬಗ್ಗೆ ಮಾತಾಡಲು ಯಾವ ನೈತಿಕತೆಯಿದೆ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ ಸ್ಯಾಂಟ್ರೋ ರವಿಯಂತಹ ಪಿಂಪ್ ಬಿಜೆಪಿ ಕಾರ್ಯಕರ್ತ. ಮತ್ತೊಂದು ಕಡೆ ನಟೋರಿಯಸ್ ರೌಡಿ ಶೀಟರ್ಗಳನ್ನು, ಪೋಲಿ ಪುಡಾರಿಗಳನ್ನು ಬಿಜೆಪಿಯವರೇ, ಶಾಲು ಹಾಕಿ ಪಕ್ಷಕ್ಕೆ ಸ್ವಾಗತಿಸಿದ್ದಾರೆ.
ಇಂತಹ ಬಿಜೆಪಿಯವರು ನೈತಿಕತೆಯ ಬಗ್ಗೆ ನೀತಿ ಪಾಠ ಮಾಡುವುದು ದೆವ್ವದ ಬಾಯಲ್ಲಿ ಸುಪ್ರಭಾತ ಕೇಳಿದಂತೆ. ಬಿಜೆಪಿ ಜನ ‘ಬ್ಲ್ಯೂ’ಜೆಪಿ ಎನ್ನುವುದು ಇದೇ ಕಾರಣಕ್ಕಾಗಿಯೇ ಎಂದು ಟ್ವೀಟ್ ಪ್ರಶ್ನೆ ಹಾಕಿದ್ದಾರೆ.  ಸ್ಯಾಂಟ್ರೋ ರವಿ ವಿರುದ್ಧ ಎಫ್ಐಆರ್ ದಾಖಲಾಗಿ ಹತ್ತು ದಿನಗಳಾಗಿವೆ. ಇಷ್ಟಾದರೂ ಸ್ಯಾಂಟ್ರೋ ರವಿಯ ಬಂಧನವಾಗಿಲ್ಲ. ಸ್ಯಾಂಟ್ರೋ ರವಿ ಬಿಜೆಪಿ ಕಾರ್ಯಕರ್ತ ಎನ್ನುವ ಕಾರಣಕ್ಕೆ ಆತನ ಬಂಧನವಾಗುತ್ತಿಲ್ಲವೇ ಅಥವಾ ಕೆಲ ಬಿಜೆಪಿಯವರಿಗೆ ಅವನು ಸಲ್ಲಿಸಿದ ‘ಸೇವೆ’ಯ ಕೃತಾಜ್ಞಾರ್ಥವಾಗಿ ಬಂಧನದಿಂದ ಆತನ ರಕ್ಷಣೆ ಮಾಡಲಾಗುತ್ತಿದೆಯೇ.? ಸ್ಯಾಂಟ್ರೋ ರವಿ ಬಂಧನ ಯಾವಾಗ ಎಂದು ಸರ್ಕಾರವನ್ನ ಪ್ರಶ್ನಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯುವಜನೋತ್ಸವ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು

Thu Jan 12 , 2023
ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಯುವಜನೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸಾಕಷ್ಟು ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಹುಬ್ಬಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತೆ ಪರಿಶೀಲನೆ ನಡೆಸಲಾಯಿತು. ಹೌದು ಈಗಾಗಲೇ ಸಚಿವರು ಹಾಗೂ ರಾಜಕೀಯ ನಾಯಕರು ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಅಲ್ಲದೇ ಮೋದಿಯವರು ಕೂಡ ಹುಬ್ಬಳ್ಳಿಯ ವಿಮಾನ ನಿಲ್ದಾಣದ ಮೂಲಕ ರೈಲ್ವೆ ಮೈದಾನಕ್ಕೆ ತೆರಳುತ್ತಿದ್ದು, ಈ ನಿಟ್ಟಿನಲ್ಲಿ ಶ್ವಾನದಳ, ಸ್ಪೆಷಲ್ ಪೊಲೀಸ್ ಪೋರ್ಸ್ ಮೂಲಕ […]

Advertisement

Wordpress Social Share Plugin powered by Ultimatelysocial