ಮಿಸ್ಟರ್ ಆಂಧ್ರ ಎಂದೇ ಗುರುತಿಸಿಕೊಂಡಿದ್ದ ಬಾಡಿ ಬಿಲ್ಡರ್: 32 ಸರಗಳ್ಳತನ‌ ಪ್ರಕರಣಗಳ ರೂವಾರಿ ಅರೆಸ್ಟ್

 

 

ಮಿಸ್ಟರ್ ಆಂಧ್ರ ಎಂದು ಪಟ್ಟಗಿಟ್ಟಿಸಿಕೊಂಡಿದ್ದ ಸೈಯ್ಯದ್ ಬಾಷಾ ಹಾಗೂ ಶೇಖ್‌ ಆಯೂಬ್ ಸರಗಳ್ಳತನ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಬಂಧನಕ್ಕೊಳಗಾಗಿದ್ದರೆ.

ಬೆಂಗಳೂರು: ದೇಹದಾರ್ಢ್ಯ ಸ್ಪರ್ಧೆಯಲ್ಲಿ ವಿಜೇತಗೊಂಡು ಮಿಸ್ಟರ್ ಆಂಧ್ರ ಎಂದೇ ಬಿರುದು ಪಡೆದುಕೊಂಡಿದ್ದ ಯುವಕ ಸುಲಭವಾಗಿ ಹಣ ಸಂಪಾದ‌ನೆ ಮಾಡಲು ವಾಮ ಮಾರ್ಗ ತುಳಿದು ಪೊಲೀಸರ ಅತಿಥಿಯಾಗಿದ್ದಾನೆ.

ಹೌದು ಆಂಧ್ರ ಸೇರಿ ನಗರದಲ್ಲಿ ಸರಗಳ್ಳತನ ಮಾಡುತ್ತಿದ್ದ ಬಾಡಿ ಬಿಲ್ಡರ್ ಸೇರಿ ಇಬ್ಬರನ್ನು ಗಿರಿನಗರ‌ ಠಾಣೆ ಆರಕ್ಷಕರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.‌

ಮಿಸ್ಟರ್ ಆಂಧ್ರ ಖ್ಯಾತಿಯ ಸೈಯ್ಯದ್ ಬಾಷಾ ಹಾಗೂ ಸಹಚರ ಶೇಖ್‌ ಆಯೂಬ್ ಬಂಧಿತ ಆರೋಪಿಗಳಿಂದ 6 ಲಕ್ಷ ಮೌಲ್ಯದ ಚಿನ್ನದ ಸರ ಹಾಗೂ ಎರಡು ಬೈಕ್ ಜಪ್ತಿ ಮಾಡಿಕೊಳ್ಳಲಾಗಿದೆ. ಆಂಧ್ರದ ಕಡಪ ಮೂಲದ ಸೈಯ್ಯದ್ ಭಾಷಾ 2005 ರಿಂದ 2015 ರ ಕುವೈತ್​ನಲ್ಲಿ ಕಾರು ಚಾಲಕನಾಗಿ ಕೆಲಸ‌ ಮಾಡಿಕೊಂಡಿದ್ದ. ವಿದೇಶದಲ್ಲಿರುವಾಗಲೇ ಗೋಲ್ಡ್ ಸ್ಮಗ್ಲಿಂಗ್​ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ. ಕೊರೊನಾ ಬಿಕ್ಕಟ್ಟು ಹಿನ್ನೆಲೆಯಲ್ಲಿ ಭಾರತಕ್ಕೆ ಬಂದಿದ್ದ ಈತ ದೈಹಿಕ‌ ಕಸರತ್ತು ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ‌. ದೇಹದಾರ್ಡ್ಯ ಸ್ಪರ್ಧೆಗಳಲ್ಲಿ ಭಾಗಿಯಾಗಿ ಮಿಸ್ಟರ್ ಆಂಧ್ರ ಎಂದು ಪಟ್ಟಗಿಟ್ಟಿಸಿಕೊಂಡಿದ್ದ.‌ ಸುಲಭವಾಗಿ ಹಣ ಸಂಪಾದನೆ ಮಾಡಲು ಅಡ್ಡದಾರಿ ತುಳಿದ ಅಪರಾಧ ಲೋಕದ ಪಾತಕಿಗಳ ಸಂಪರ್ಕ ಬೆಳೆಸಿಕೊಂಡು ನಿರಂತರವಾಗಿ ಸರಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ.‌

ಹೀಗಾಗಿ ಸ್ಥಳೀಯ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಸೆರೆಮನೆಯಲ್ಲಿರುವಾಗ ಕೈದಿಯೊಬ್ಬ ಬೆಂಗಳೂರಿನಲ್ಲಿ ಸುಲಭವಾಗಿ ಕಳ್ಳತನ ಮಾಡಬಹುದು ಎಂದು ಸಲಹೆ ನೀಡಿದ್ದ. ಇದರಂತೆ ಜಾಮೀನು ಪಡೆದು ಹೊರಬಂದು ಬೆಂಗಳೂರಿಗೆ ಬಂದಿದ್ದ. ಆರೋಪಿ ಗಿರಿನಗರ ಹಾಗೂ‌ ಸುಬ್ರಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸರಗಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧನ ಭೀತಿಯಿಂದ ಮೊಬೈಲ್ ಬಳಸುತ್ತಿರಲಿಲ್ಲ: ರಾಜಧಾನಿಗೆ ಬಂದು ಕದ್ದ ಬೈಕ್‌ನಲ್ಲಿ ಸರಗಳ್ಳತನ‌ ಮಾಡಲು ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯನ್ನೇ ಟಾರ್ಗೆಟ್ ಮಾಡಿಕೊಂಡಿದ್ದರು. ಒಂಟಿಯಾಗಿ ಓಡಾಡುವ ವೃದ್ದೆಯರು ಹಾಗೂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ‌ ಮಾಡುತ್ತಿದ್ದ. ಕೃತ್ಯವೆಸಗಿದ ಬಳಿಕ ಬೆಂಗಳೂರು ತೊರೆಯದೇ ಠಾಣಾ ವ್ಯಾಪ್ತಿಯಲ್ಲಿ ಓಡಾಡಿಕೊಂಡಿದ್ದರು.

ಸ್ಥಳೀಯ ಪ್ರದೇಶಗಳಲ್ಲಿ‌ ಓಡಾಡಿಕೊಂಡಿದ್ದರೆ ಪೊಲೀಸರಿಗೆ ನಾವು ಸಿಗುವುದಿಲ್ಲ ಎಂದು ಖದೀಮರು ಭಾವಿಸಿಕೊಂಡಿದ್ದರು. ಬಂಧಿಸಲು ಪೊಲೀಸರಿಗೆ ಸಹಾಯವಾಗಲಿದೆ‌ ಎಂದು ಅರಿತು ಆರೋಪಿಗಳು ಮೊಬೈಲ್ ಬಳಸುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಕಳ್ಳರು ಚಾಪೆ ಕೆಳಗೆ ತೂರಿದರೆ, ಪೊಲೀಸರು ಇಲ್ಲಿ ರಂಗೋಲಿ ಕೆಳಗೆ ತೂರಿ ಸರಗಳ್ಳರನ್ನು ಸೆರೆ ಹಿಡಿದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

 

Please follow and like us:

Leave a Reply

Your email address will not be published. Required fields are marked *

Next Post

ಹಿಮಪಾತದ ನಡುವೆಯೇ ತೆರೆದ ಕೇದಾರನಾಥನ ಮಹಾದ್ವಾರ: ಉತ್ತರಾಖಂಡ ಸಿಎಂ ಭಾಗಿ

Tue Apr 25 , 2023
    ಹಿಂದೂ ಧಾರ್ಮಿಕ ಕ್ಷೇತ್ರ ಕೇದಾರನಾಥ್​ ದೇವಸ್ಥಾನದ ಮಹಾದ್ವಾರವನ್ನು ಇಂದು ಬೆಳಗ್ಗೆ ತೆರೆಯಲಾಗಿದೆ. ಡೆಹರಡೂನ್​ (ಉತ್ತರಾಖಂಡ): ಚಳಿಗಾಲದ ಆರು ತಿಂಗಳುಗಳ ಕಾಲ ಹಿಮದಿಂದ ಮುಚ್ಚಲಾಗಿದ್ದ ಕೇದಾರನಾಥ ದೇವಸ್ಥಾನ ಬಾಗಿಲು ಇಂದು ಬೆಳಗ್ಗೆ ತೆರೆಯಲಾಗಿದೆ. 6 ಗಂಟೆ 20ನಿಮಿಷಕ್ಕೆ ​ವೇದಘೋಷದೊಂದಿಗೆ ಕೇದಾರನಾಥ ಧಾಮದ ಬಾಗಿಲು ಭಕ್ತರ ದರ್ಶನಕ್ಕಾಗಿ ತೆರೆಯಲಾಯಿತು. ಈ ವೇಳೆ ಹರಹರ ಮಹಾದೇವ್‌ ಎಂಬ ಘೋಷಣೆ ಮತ್ತು ದೈವ ಕೀರ್ತನೆಗಳು ಕೇದಾರ್ ಧಾಮ್‌ನಲ್ಲಿ ಪ್ರತಿಧ್ವನಿಸಿದವು. ಉತ್ತರಾಖಂಡ ಸಿಎಂ ಪುಷ್ಕರ್​ […]

Advertisement

Wordpress Social Share Plugin powered by Ultimatelysocial